AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಟೀಂ ಇಂಡಿಯಾದ ಮುಂದಿನ ಸರಣಿ ಯಾವಾಗ, ಯಾರ ವಿರುದ್ಧ? ಇಲ್ಲಿದೆ ಪೂರ್ಣ ವೇಳಾಪಟ್ಟಿ

India vs South Africa Series 2025: ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ತಾಯ್ನಾಡಿಗೆ ಮರಳಿರುವ ಟೀಂ ಇಂಡಿಯಾ, ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಸರಣಿಗೆ ಸಜ್ಜಾಗಿದೆ. ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳ ವೇಳಾಪಟ್ಟಿ ಹಾಗೂ ತಂಡಗಳನ್ನು ಪ್ರಕಟಿಸಲಾಗಿದೆ. ನವೆಂಬರ್ 14ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಡಿಸೆಂಬರ್ 19ರವರೆಗೆ ಮೂರೂ ಮಾದರಿಯ ಪಂದ್ಯಗಳು ನಡೆಯಲಿವೆ. ರೋಹಿತ್, ಕೊಹ್ಲಿ ಏಕದಿನ ಸರಣಿಯಲ್ಲಿ ಆಡಲಿದ್ದಾರೆ.

IND vs SA: ಟೀಂ ಇಂಡಿಯಾದ ಮುಂದಿನ ಸರಣಿ ಯಾವಾಗ, ಯಾರ ವಿರುದ್ಧ? ಇಲ್ಲಿದೆ ಪೂರ್ಣ ವೇಳಾಪಟ್ಟಿ
Team India
ಪೃಥ್ವಿಶಂಕರ
|

Updated on: Nov 08, 2025 | 9:03 PM

Share

ಆಸ್ಟ್ರೇಲಿಯಾ ಪ್ರವಾಸವನ್ನು ಸೋಲು ಗೆಲುವಿನೊಂದಿಗೆ ಮುಗಿಸಿರುವ ಟೀಂ ಇಂಡಿಯಾ (Team India) ಇದೀಗ ತಾಯ್ನಾಡಿಗೆ ವಾಪಸ್ಸಾಗುತ್ತಿದೆ. ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿಗಾಗಿ ಆಸೀಸ್ ಪ್ರವಾಸ ಮಾಡಿದ್ದ ಭಾರತ ತಂಡ, ಏಕದಿನ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡರೆ, ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಇದೀಗ ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಿರುವ ಟೀಂ ಇಂಡಿಯಾ, ತವರಿನಲ್ಲಿ ದಕ್ಷಿಣ ಆಫ್ರಿಕಾ (India vs South Africa) ತಂಡಕ್ಕೆ ಆತಿಥ್ಯ ನೀಡಲು ಸಜ್ಜಾಗಿದೆ. ದಕ್ಷಿಣ ಆಫ್ರಿಕಾದ ಈ ಭಾರತ ಪ್ರವಾಸದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಾಗುತ್ತದೆ. ಮೊದಲಿಗೆ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನವೆಂಬರ್ 14 ರಿಂದ ಪ್ರಾರಂಭವಾಗಲಿದೆ.

ನವೆಂಬರ್ 14 ರಿಂದ ಟೆಸ್ಟ್ ಸರಣಿ ಆರಂಭ

ಮೇಲೆ ಹೇಳಿದಂತೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿವೆ. ಇದಕ್ಕಾಗಿ ಎರಡೂ ತಂಡಗಳು ತಮ್ಮ ತಂಡಗಳನ್ನು ಸಹ ಪ್ರಕಟಿಸಿವೆ. ಈ ಟೆಸ್ಟ್ ಸರಣಿಯು ನವೆಂಬರ್ 14 ರಿಂದ ನವೆಂಬರ್ 26 ರವರೆಗೆ ನಡೆಯಲಿದೆ.

ಇದರ ನಂತರ ನವೆಂಬರ್ 30 ರಿಂದ ಡಿಸೆಂಬರ್ 6 ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡಲಿದ್ದಾರೆ. ಇದಾದ ನಂತರ ಎರಡೂ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಟಿ20 ಸರಣಿ ಡಿಸೆಂಬರ್ 9 ರಂದು ಪ್ರಾರಂಭವಾಗಿ ಡಿಸೆಂಬರ್ 19 ರವರೆಗೆ ನಡೆಯಲಿದೆ.

ಟೆಸ್ಟ್ ಸರಣಿ ವೇಳಾಪಟ್ಟಿ

ಮೊದಲ ಪಂದ್ಯ: ನವೆಂಬರ್ 14-18, ಕೋಲ್ಕತ್ತಾ

ಎರಡನೇ ಟೆಸ್ಟ್ – ನವೆಂಬರ್ 22-26, ಗುವಾಹಟಿ

ಏಕದಿನ ಸರಣಿ ವೇಳಾಪಟ್ಟಿ

ಮೊದಲ ಪಂದ್ಯ: ನವೆಂಬರ್ 30, ರಾಂಚಿ

2ನೇ ಪಂದ್ಯ – ಡಿಸೆಂಬರ್ 3, ರಾಯ್‌ಪುರ

ಮೂರನೇ ಪಂದ್ಯ – ಡಿಸೆಂಬರ್ 6, ವಿಶಾಖಪಟ್ಟಣಂ

ಟಿ20 ಸರಣಿ ವೇಳಾಪಟ್ಟಿ

ಮೊದಲ ಪಂದ್ಯ: ಡಿಸೆಂಬರ್ 9, ಕಟಕ್

2ನೇ ಪಂದ್ಯ – ಡಿಸೆಂಬರ್ 11, ನ್ಯೂ ಚಂಡೀಗಢ

ಮೂರನೇ ಪಂದ್ಯ – ಡಿಸೆಂಬರ್ 14, ಧರ್ಮಶಾಲಾ

ನಾಲ್ಕನೇ ಪಂದ್ಯ – ಡಿಸೆಂಬರ್ 17, ಲಕ್ನೋ

ಐದನೇ ಪಂದ್ಯ – ಡಿಸೆಂಬರ್ 19, ಅಹಮದಾಬಾದ್

ಟೆಸ್ಟ್ ಸರಣಿಗೆ ಉಭಯ ತಂಡಗಳು

ಭಾರತ ತಂಡ: ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್ ಮತ್ತು ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಆಕಾಶ್ ದೀಪ್.

ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಟೋನಿ ಡಿ ಜೊರ್ಜಿ, ಐಡೆನ್ ಮಾರ್ಕ್ರಾಮ್, ಜುಬೇರ್ ಹಮ್ಜಾ, ಡೆವಾಲ್ಡ್ ಬ್ರೆವಿಸ್, ಸೆನುರಾನ್ ಮುತ್ತುಸಾಮಿ, ಕಾರ್ಬಿನ್ ಬಾಷ್, ಮಾರ್ಕೊ ಯಾನ್ಸೆನ್, ವಿಯಾನ್ ಮುಲ್ಡರ್, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್, ರಿಯಾನ್ ರಿಕೆಲ್ಟನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಸೈಮನ್ ಹಾರ್ಮರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್