IND vs SA: ಅವೇಶ್ ಖಾನ್ ಬೆಂಕಿ ಎಸೆತಕ್ಕೆ ದುಸೇನ್ ಬ್ಯಾಟ್ ಎರಡು ಭಾಗವಾಯ್ತು..! ವಿಡಿಯೋ ನೋಡಿ

| Updated By: ಪೃಥ್ವಿಶಂಕರ

Updated on: Jun 10, 2022 | 2:37 PM

IND vs SA: ಬಳಿಕ ಬ್ಯಾಟ್ ಬದಲಿಸಿದ ಅವರು ಮುಂದಿನ 11 ಎಸೆತಗಳಲ್ಲಿ 30 ರನ್ ಗಳಿಸಿ ಅರ್ಧಶತಕ ಪೂರೈಸಿ ತಂಡದ ಗೆಲುವಿಗೆ ನೆರವಾದರು. ಕೊನೆಯವರೆಗೂ ಅಜೇಯರಾಗಿ ಉಳಿದು 46 ಎಸೆತಗಳಲ್ಲಿ 75 ರನ್ ಗಳಿಸಿ ಮರಳಿದರು.

IND vs SA: ಅವೇಶ್ ಖಾನ್ ಬೆಂಕಿ ಎಸೆತಕ್ಕೆ ದುಸೇನ್ ಬ್ಯಾಟ್ ಎರಡು ಭಾಗವಾಯ್ತು..! ವಿಡಿಯೋ ನೋಡಿ
ದುಸೇನ್
Follow us on

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ದೆಹಲಿಯಲ್ಲಿ ನಡೆದಿದ್ದು, ಇದು ನಿರೀಕ್ಷಿತ ಮತ್ತು ಯೋಜಿಸಿದಂತೆ ಭಾರತದ ಪರವಾಗಿ ಹೋಗಲಿಲ್ಲ. ಪ್ರವಾಸಿ ದಕ್ಷಿಣ ಆಫ್ರಿಕನ್ನರು ಆತಿಥೇಯ ಭಾರತವನ್ನು 7 ವಿಕೆಟ್‌ಗಳಿಂದ ಸೋಲಿಸಿದರು. ದಕ್ಷಿಣ ಆಫ್ರಿಕಾ 212 ರನ್‌ಗಳ ಗುರಿ ಬೆನ್ನತ್ತಿ ಭರ್ಜರಿ ಜಯ ಸಾಧಿಸಿತು. ಆದರೆ, ಒಂದು ಹಂತದಲ್ಲಿ ಭಾರತ ತಂಡ ಪಂದ್ಯದಲ್ಲಿ ಮುಂದಿದ್ದು, ದಕ್ಷಿಣ ಆಫ್ರಿಕಾಕ್ಕೆ ಸಂಕಷ್ಟದ ಪರಿಸ್ಥಿತಿ ಎದುರಾಗುವ ಲಕ್ಷಣ ಗೋಚರಿಸಿತ್ತು. ಆದರೆ ಶ್ರೇಯಸ್ ಮಾಡಿದ ಎಡವಟ್ಟಿನಿಂದ ಪಂದ್ಯದ ದಿಕ್ಕೆ ಬದಲಾಗಿ ಹೋಯಿತು. ಅಯ್ಯರ್ ಬಿಟ್ಟ ಅದೊಂದು ಕ್ಯಾಚ್​ ಟೀಂ ಇಂಡಿಯಾಗೆ ತುಂಬಾ ದುಬಾರಿಯಾಯಿತು. ಆದರೆ ಇದೇ ಪಂದ್ಯದಲ್ಲಿ ಇನ್ನೊಂದು ಅಚ್ಚರಿಯ ಘಟನೆಯೊಂದು ನಡೆಯಿತು. ಟೀಂ ಇಂಡಿಯಾ ವೇಗಿ ಅವೇಶ್ ಖಾನ್ (Avesh Khan) ಎಸೆದ ಮಾರಕ ಎಸೆತವು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರಾಸ್ಸಿ ವ್ಯಾನ್ ಡೆರ್ ದುಸೇನ್ (Rassie Van Der Dussen) ಅವರ ಬ್ಯಾಟ್ ಅನ್ನು ಎರಡು ಬಾಗವನ್ನಾಗಿ ಮಾಡಿತು.

ಈ ಪಂದ್ಯದಲ್ಲಿ ಭಾರತ ತಂಡ 211 ರನ್ ಗಳಿಸಿ ದಕ್ಷಿಣ ಆಫ್ರಿಕಾಕ್ಕೆ 3 ವಿಕೆಟ್ ನೀಡಿತು. ಡೇವಿಡ್ ಮಿಲ್ಲರ್ ಮತ್ತು ರಾಸಿ ವ್ಯಾನ್ ಡೆರ್ ದುಸೆನ್ ಕ್ರೀಸ್‌ನಲ್ಲಿದ್ದರು. ಮಿಲ್ಲರ್ ಅಬ್ಬರದಿಂದ ಬ್ಯಾಟಿಂಗ್ ಮಾಡುತ್ತಿದ್ದರೂ ರಾಸಿ ಪರದಾಡಿದರು. ನಂತರ ಇನಿಂಗ್ಸ್‌ನ 14ನೇ ಓವರ್ ಬಂತು. ಅವೇಶ್ ಖಾನ್ ಬೌಲರ್ ಆಗಿದ್ದು, ರಾಸಿ ಸ್ಟ್ರೈಕ್‌ನಲ್ಲಿದ್ದರು. ಈ ಓವರ್‌ನ ಮೊದಲ 3 ಎಸೆತಗಳಲ್ಲಿ ಯಾವುದೇ ರನ್ ಸಿಗಲಿಲ್ಲ. ಮೂರನೇ ಎಸೆತ ಯಾರ್ಕರ್ ಲೆಂತ್‌ನಲ್ಲಿತ್ತು, ಅದನ್ನುವರ ಬ್ಯಾಟನ್ನು ಎರಡು ಭಾಗವನ್ನಾಗಿ ಮಾಡಿತು.

ದುಸೇನ್ ಬ್ಯಾಟ್ ಹೊಡೆದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ
IND vs SA: ಶ್ರೇಯಸ್ ಅಯ್ಯರ್ ಮಾಡಿದ ತಪ್ಪಿಗೆ ಸೋಲಿನ ಬೆಲೆ ತೆತ್ತ ಟೀಂ ಇಂಡಿಯಾ..!
Rishabh Pant: ರಿಷಭ್ ಪಂತ್ ಸೋಲಿಗೆ ದೂರಿದ್ದು ಬೌಲರ್​ಗಳನ್ನಲ್ಲ: ಪಂದ್ಯದ ಬಳಿಕ ಏನಂದ್ರು ನೋಡಿ
Dinesh Karthik: ಮೊದಲ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್​ಗೆ ಅವಮಾನ: ಅದು ಭಾರತೀಯ ಪ್ಲೇಯರ್​ನಿಂದಲೆ

ಬ್ಯಾಟ್ ಬದಲಾದ ನಂತರ ತಂಡದ ಗತಿಯೇ ಬದಲಾಯಿತು

ಆ ಸಮಯದಲ್ಲಿ ರಾಸಿ ಅವರ ಸ್ಕೋರ್ 26 ಎಸೆತಗಳಲ್ಲಿ ಕೇವಲ 22 ಆಗಿತ್ತು. ಬ್ಯಾಟ್ ಎರಡು ಭಾಗವಾದ ಬಳಿಕ ದುಸೆನ್ ಬ್ಯಾಟ್ ಬದಲಾಯಿಸಬೇಕಾಯಿತು. ಬಹುಶಃ ಬ್ಯಾಟ್ ಬದಲಾಯಿಸಿದ ಪರಿಣಾಮವೇ ಇದ್ದಕ್ಕಿದ್ದಂತೆ ಅವರ ಬ್ಯಾಟಿಂಗ್ ಗೇರ್ ಕೂಡ ಬದಲಾಯಿತು. ಅವರ ಬ್ಯಾಟ್ ಅಬ್ಬರಿಸಲು ಪ್ರಾರಂಭಿಸಿತು. ಇದಾದ ನಂತರ ದುಸೇನ್ ತನ್ನದೇ ಆಕ್ರಮಣಕಾರಿ ಶೈಲಿ ಪ್ರದರ್ಶಿಸಲು ಪ್ರಾರಂಭಿಸಿದರು. ಇದು ಸಾಲದೆಂಬಂತೆ ಈ ಸಮಯದಲ್ಲಿ ಶ್ರೇಯಸ್ ಬಿಟ್ಟ ಕ್ಯಾಚ್ ಕೂಡ ಅವರಿಗೆ ವವಾಯಿತು. ನಂತರ 17 ನೇ ಓವರ್‌ನಲ್ಲಿ ಅವರು ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು.

ಬಳಿಕ ಬ್ಯಾಟ್ ಬದಲಿಸಿದ ಅವರು ಮುಂದಿನ 11 ಎಸೆತಗಳಲ್ಲಿ 30 ರನ್ ಗಳಿಸಿ ಅರ್ಧಶತಕ ಪೂರೈಸಿ ತಂಡದ ಗೆಲುವಿಗೆ ನೆರವಾದರು. ಕೊನೆಯವರೆಗೂ ಅಜೇಯರಾಗಿ ಉಳಿದು 46 ಎಸೆತಗಳಲ್ಲಿ 75 ರನ್ ಗಳಿಸಿ ಮರಳಿದರು. ಅಂದರೆ ಬ್ಯಾಟ್ ಮುರಿದ ನಂತರ ಮುಂದಿನ 20 ಎಸೆತಗಳಲ್ಲಿ 53 ರನ್ ಗಳಿಸಿದರು.

ಟೀಂ ಇಂಡಿಯಾಗೆ ಸೋಲು

ಇಲ್ಲಿ ಅವೇಶ್ ಖಾನ್ ಅವರನ್ನು ದೂಷಿಸುತ್ತಿಲ್ಲ, ಆದರೆ ಘಟನೆಯನ್ನು ಕೇವಲ ಉಲ್ಲೇಖವಾಗಿ ಪ್ರಸ್ತುತಪಡಿಸಲಾಗುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 211 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ ಐದು ಎಸೆತಗಳು ಬಾಕಿ ಇರುವಂತೆಯೇ ಈ ಗುರಿಯನ್ನು ಸಾಧಿಸಿತು. ಆಫ್ರಿಕಾ ಪರ ರಾಸಿ ವಾನ್ ಡೆರ್ ದುಸೇನ್ ಅಜೇಯ 75 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ, ಈ ಬ್ಯಾಟ್ಸ್‌ಮನ್ 46 ಎಸೆತಗಳನ್ನು ಎದುರಿಸಿ ಏಳು ಬೌಂಡರಿಗಳ ಜೊತೆಗೆ ಐದು ಸಿಕ್ಸರ್‌ಗಳನ್ನು ಹೊಡೆದರು. ಇವರ ಹೊರತಾಗಿ ಡೇವಿಡ್ ಮಿಲ್ಲರ್ 31 ಎಸೆತಗಳಲ್ಲಿ 64 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಮಿಲ್ಲರ್ ನಾಲ್ಕು ಬೌಂಡರಿಗಳ ಜೊತೆಗೆ ಐದು ಸಿಕ್ಸರ್‌ಗಳನ್ನು ಬಾರಿಸಿದರು.

Published On - 2:37 pm, Fri, 10 June 22