IND VS SA: ಔಟ್ ಅಥವಾ ನಾಟೌಟ್: ವಿವಾದಕ್ಕೆ ಕಾರಣವಾದ ರಿಷಭ್ ಪಂತ್ ಹಿಡಿದ ಕ್ಯಾಚ್
India vs South Africa: ನಾಯಕ ಡೀನ್ ಎಲ್ಗರ್ ಹಾಗೂ ದಕ್ಷಿಣ ಆಫ್ರಿಕಾ ತಂಡದ ಮ್ಯಾನೇಜರ್ ಮೂರನೇ ಅಂಪೈರ್ ಬಳಿ ತೆರಳಿ ಈ ಬಗ್ಗೆ ಚರ್ಚಿಸಿದರು. ರಿವ್ಯೂ ಪರಿಶೀಲಿಸದೇ ಫೀಲ್ಡ್ ಅಂಪೈರ್ ತಪ್ಪು ತೀರ್ಪು ನೀಡಿದ್ದಾರೆ ಎಂದು ದೂರಿದರು.
ಭಾರತ-ದಕ್ಷಿಣ ಆಫ್ರಿಕಾ (India vs South Africa) ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ವಿಕೆಟ್ ಕೀಪರ್ ರಿಷಭ್ ಪಂತ್ (Rishab Pant) ಹಿಡಿದ ಕ್ಯಾಚ್ವೊಂದು ಇದೀಗ ವಿವಾದಕ್ಕೀಡಾಗಿದೆ. ದಕ್ಷಿಣ ಆಫ್ರಿಕಾ ತಂಡದ ಮೊದಲ ಇನಿಂಗ್ಸ್ನಲ್ಲಿ ರಸ್ಸಿ ವಂಡೆರ್ ಡುಸೆನ್ ಅವರು ಔಟಾಗಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಶಾರ್ದೂಲ್ ಠಾಕೂರ್ ಎಸೆದ ಪಂದ್ಯದ 45ನೇ ಓವರ್ನ ನಾಲ್ಕನೇ ಎಸೆತದಲ್ಲಿ ಚೆಂಡು ರಸ್ಸಿ ವಂಡೆರ್ ಡುಸೆನ್ ಬ್ಯಾಟ್ ಸವರಿ ವಿಕೆಟ್ ಕೀಪರ್ನತ್ತ ಸಾಗಿತ್ತು. ತಕ್ಷಣವೇ ಮುಂದಕ್ಕೆ ಡೈವ್ ಹೊಡೆದ ರಿಷಭ್ ಪಂತ್ ಚೆಂಡನ್ನು ಗ್ಲೌಸ್ನಲ್ಲಿ ಬಂಧಿಸಿದರು. ಇತ್ತ ಟೀಮ್ ಇಂಡಿಯಾ ಆಟಗಾರರ ಮನವಿ ಬೆನ್ನಲ್ಲೇ ಅಂಪೈರ್ ಮರಾಯ್ ಎರಾಸ್ಮಸ್ ಡುಸಾನ್ ಔಟ್ ಎಂದು ಘೋಷಿಸಿದರು.
ಆದರೆ, ಚೆಂಡು ಕೈಗವಸುಗಳನ್ನು ತಲುಪುವ ಮೊದಲೇ ಚೆಂಡು ನೆಲಕ್ಕೆ ಬಡಿದಿರುವಂತೆ ಕಾಣಿಸುತ್ತಿತ್ತು. ಇದನ್ನು ಗಮನಿಸಿದ ಕಾಮೆಂಟರಿ ಮಾಡುತ್ತಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗರು ಕೂಡ ನಾಟೌಟ್ ಆಗಿರುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಆ ಬಳಿಕ ರೀಪ್ಲೇ ಪರಿಶೀಲಿಸಿದಾಗ ಚೆಂಡು ನೆಲಕ್ಕೆ ತಾಗಿರುವುದು ಗೊತ್ತಾಗಿದೆ.
ಇದಾದ ಬಳಿಕ ಆತಿಥೇಯ ತಂಡದ ನಾಯಕ ಡೀನ್ ಎಲ್ಗರ್ ಹಾಗೂ ದಕ್ಷಿಣ ಆಫ್ರಿಕಾ ತಂಡದ ಮ್ಯಾನೇಜರ್ ಮೂರನೇ ಅಂಪೈರ್ ಬಳಿ ತೆರಳಿ ಈ ಬಗ್ಗೆ ಚರ್ಚಿಸಿದರು. ರಿವ್ಯೂ ಪರಿಶೀಲಿಸದೇ ಫೀಲ್ಡ್ ಅಂಪೈರ್ ತಪ್ಪು ತೀರ್ಪು ನೀಡಿದ್ದಾರೆ ಎಂದು ದೂರಿದರು. ಆತಿಥೇಯ ತಂಡದ ಈ ಮನವಿಯ ನಂತರ, ಮೂರನೇ ಅಂಪೈರ್ ಊಟದ ವಿರಾಮದ ಸಮಯದಲ್ಲಿ ಡುಸ್ಸೆನ್ ಔಟಾಗಿರುವ ವಿಡಿಯೋವನ್ನು ಪರಿಶೀಲಿಸಿದ್ದಾರೆ. ಇದಾದ ನಂತರ, ಮೂರನೇ ಅಂಪೈರ್, ಪಂತ್ ಅವರ ಕೈಗವಸುಗಳನ್ನು ಪ್ರವೇಶಿಸುವ ಮೊದಲು ಚೆಂಡು ನೆಲಕ್ಕೆ ಬಡಿದಿದೆ ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಹೀಗಾಗಿ ಈ ಬಗ್ಗೆ ಟೀಮ್ ಇಂಡಿಯಾ ನಾಯಕನ ಜೊತೆ ಚರ್ಚಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಒಂದು ವೇಳೆ ರಸ್ಸಿ ವಂಡೆರ್ ಡುಸೆನ್ ನಾಟೌಟ್ ಎಂಬುದು ಮೂರನೇ ಅಂಪೈರ್ಗೆ ಸ್ಪಷ್ಟವಾಗಿದ್ದರೆ, ಕೆಎಲ್ ರಾಹುಲ್ ಅವರೊಂದಿಗೆ ಚರ್ಚಿಸಿ ತಮ್ಮ ಮನವಿಯನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗುತ್ತದೆ. ಇದಕ್ಕೆ ರಾಹುಲ್ ಒಪ್ಪಿದ್ದರೆ ರಸ್ಸಿ ವಂಡೆರ್ ಡುಸೆನ್ ಅವರನ್ನು ಮತ್ತೆ ಬ್ಯಾಟಿಂಗ್‌ಗೆ ಅವಕಾಶ ನೀಡಬಹುದು. ಆದರೆ ಮೂರನೇ ಅಂಪೈರ್ ಕೂಡ ಫೀಲ್ಡ್ ಅಂಪೈರ್ ತೀರ್ಪನ್ನು ಎತ್ತಿ ಹಿಡಿದ ಕಾರಣ ರಸ್ಸಿ ವಂಡೆರ್ ಡುಸೆನ್ ಅವರಿಗೆ ಮತ್ತೆ ಅವಕಾಶ ಸಿಗಲಿಲ್ಲ.
ಸದ್ಯ ಪಂದ್ಯದ 2ನೇ ದಿನದಾಟದ 2ನೇ ಸೆಷನ್ ವೇಳೆ ಸೌತ್ ಆಫ್ರಿಕಾ ತಂಡವು 5 ವಿಕೆಟ್ ಕಳೆದುಕೊಂಡು 166 ರನ್ ಕಲೆಹಾಕಿದೆ. ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ ಗಳಿಸಿರುವ 202 ರನ್ಗಳಿಗಿಂತ ದಕ್ಷಿಣ ಆಫ್ರಿಕಾ 36 ರನ್ಗಳಿಂದ ಹಿಂದೆ ಉಳಿದಿದ್ದು, ಅಷ್ಟರಲ್ಲಾಗಲೇ ಪ್ರಮುಖ 5 ವಿಕೆಟ್ ಕಳೆದುಕೊಂಡು ದಕ್ಷಿಣ ಆಫ್ರಿಕಾ ಕೂಡ ಕಡಿಮೆ ಮೊತ್ತ ಪೇರಿಸುವ ಸೂಚನೆ ನೀಡಿದೆ.
Did the ball touch the ground before bouncing into the gloves of Pant? ??
If so should Rassie van der Dussen be called back in to bat seeing that the match has not moved on?#SAvIND #INDvSAhttps://t.co/2d2lYwgVVp
— ?FlashScore Cricket Commentators (@FlashCric) January 4, 2022
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್..!
ಇದನ್ನೂ ಓದಿ: Ravindra Jadeja: ಸ್ಟಾರ್ ಆಲ್ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(IND VS SA: Controversy erupted after Rishabh Pant’s catch)