AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೂ DRS ಗೆ ಮನವಿ ಮಾಡ್ತಾರಾ? ಬಾಂಗ್ಲಾ ಆಟಗಾರರ ಅಪೀಲ್​ ನೋಡಿ ಅಚ್ಚರಿಗೊಂಡ ರಾಸ್ ಟೇಲರ್..!

NZ vs BAN 1st test: ಈ ಪಂದ್ಯದಲ್ಲಿ ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 458 ರನ್ ಗಳಿಸಿ 130 ರನ್ ಮುನ್ನಡೆ ಸಾಧಿಸಿದೆ. ಇನ್ನು ಮೊದಲ ಇನಿಂಗ್ಸ್​​ನಲ್ಲಿ 328 ರನ್​ಗಳಿಸಿದ್ದ ನ್ಯೂಜಿಲೆಂಡ್ ನಾಲ್ಕನೇ ದಿನದ ಅಂತ್ಯಕ್ಕೆ ಎರಡನೇ ಇನಿಂಗ್ಸ್​ನಲ್ಲಿ 5 ವಿಕೆಟ್ ನಷ್ಟಕ್ಕೆ 147 ರನ್​ಗಳಿಸಿದೆ.

ಹೀಗೂ DRS ಗೆ ಮನವಿ ಮಾಡ್ತಾರಾ? ಬಾಂಗ್ಲಾ ಆಟಗಾರರ ಅಪೀಲ್​ ನೋಡಿ ಅಚ್ಚರಿಗೊಂಡ ರಾಸ್ ಟೇಲರ್..!
Ross Taylor
TV9 Web
| Edited By: |

Updated on: Jan 04, 2022 | 4:08 PM

Share

ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಪಂದ್ಯದ ನಾಲ್ಕನೇ ದಿನದಲ್ಲಿ ಕಿವೀಸ್ ತಂಡದ ಸಂಕಷ್ಟಕ್ಕೆ ಸಿಲುಕಿತ್ತು. ಇದೇ ವೇಳೆ ಬಾಂಗ್ಲಾದೇಶವು ಅತ್ಯಂತ ಕೆಟ್ಟ DRS ಮನವಿ ಮಾಡಿ ನಗೆಪಾಟಲಿಗೀಡಾಗಿದ್ದಾರೆ. ನ್ಯೂಜಿಲೆಂಡ್ ಬ್ಯಾಟರ್  ರಾಸ್ ಟೇಲರ್ ವಿರುದ್ಧ ಬಾಂಗ್ಲಾದೇಶ ಆಟಗಾರರು ಎಲ್​ಬಿಡಬ್ಲ್ಯೂಗೆ ಮನವಿ ಮಾಡಿದ್ದಾರೆ. ಈ ಅಪೀಲ್ ಅನ್ನು ಅಂಪೈರ್ ನಿರಾಕರಿಸಿದಾಗ, ಬಾಂಗ್ಲಾ ನಾಯಕ DRS ತೆಗೆದುಕೊಂಡರು. ಆದರೆ ಈ ನಿರ್ಧಾರವು ತುಂಬಾ ಕೆಟ್ಟದಾಗಿತ್ತು ಎಂಬುದಕ್ಕೆ ಬ್ಯಾಟರ್​ ರಾಸ್ ಟೇಲರ್ ಅವರ ರಿಯಾಕ್ಷನೇ ಸಾಕ್ಷಿಯಾಗಿತ್ತು.

ಏಕೆಂದರೆ ತಸ್ಕಿನ್ ಅಹ್ಮದ್ ಎಸೆದ ಚೆಂಡು ನೇರವಾಗಿ ಬ್ಯಾಟ್​ಗೆ ತಾಗಿತ್ತು. ಇತ್ತ ಬ್ಯಾಟ್-ಪ್ಯಾಡ್ ಹಾಗೂ ಚೆಂಡು ನಡುವೆ ಸಾಕಷ್ಟು ಅಂತರ ಕೂಡ ಇತ್ತು. ಇದಾಗ್ಯೂ ಬಾಂಗ್ಲಾದೇಶದ ನಾಯಕ ಮೊಮಿನುಲ್ ಹಕ್ DRS ಮೊರೆ ಹೋಗಿದ್ದು ಅಚ್ಚರಿಗೆ ಕಾರಣವಾಗಿತ್ತು. ಇದೀಗ ಈ ವಿಮರ್ಶೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಅಷ್ಟೇ ಅಲ್ಲದೆ ಇದು ಕ್ರಿಕೆಟ್​ನ ಅತ್ಯಂತ ಕೆಟ್ಟ ಡಿಆರ್​ಎಸ್​ ಮನವಿ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 458 ರನ್ ಗಳಿಸಿ 130 ರನ್ ಮುನ್ನಡೆ ಸಾಧಿಸಿದೆ. ಇನ್ನು ಮೊದಲ ಇನಿಂಗ್ಸ್​​ನಲ್ಲಿ 328 ರನ್​ಗಳಿಸಿದ್ದ ನ್ಯೂಜಿಲೆಂಡ್ ನಾಲ್ಕನೇ ದಿನದ ಅಂತ್ಯಕ್ಕೆ ಎರಡನೇ ಇನಿಂಗ್ಸ್​ನಲ್ಲಿ 5 ವಿಕೆಟ್ ನಷ್ಟಕ್ಕೆ 147 ರನ್​ಗಳಿಸಿದೆ. ಈ ಮೂಲಕ ಕೇವಲ 17 ರನ್ ಗಳ ಮುನ್ನಡೆ ಹೊಂದಿದೆ. ಇನ್ನೂ ಒಂದು ದಿನದಾಟ ಬಾಕಿಯಿದ್ದು, ಅದರೊಳಗೆ ನ್ಯೂಜಿಲೆಂಡ್ ತಂಡವನ್ನು ಆಲೌಟ್ ಮಾಡಿದ್ರೆ ಬಾಂಗ್ಲಾದೇಶ ತಂಡಕ್ಕೆ ಗೆಲ್ಲುವ ಅವಕಾಶ ಸಿಗಲಿದೆ.

ಇದನ್ನೂ ಓದಿ:  Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್​..!

ಇದನ್ನೂ ಓದಿ:  Ravindra Jadeja: ಸ್ಟಾರ್ ಆಲ್​ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(NZ vs BAN 1st test Bangladesh unusual DRS against Ross Taylor video viral)

ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ