ಹೊಸ ಲೀಗ್, ಹೊಸ ತಂಡಗಳು: ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಸೆಹ್ವಾಗ್, ಯುವಿ, ಪಠಾಣ್
Legends League Cricket: ವಿಶ್ವ ಕ್ರಿಕೆಟ್ ಲೆಜೆಂಡ್ಸ್ಗಳನ್ನು ಒಳಗೊಂಡಿರುವ ಮೂರನೇ ತಂಡದ ಆಟಗಾರರನ್ನು ಇನ್ನೂ ಕೂಡ ಪ್ರಕಟಿಸಲಾಗಿಲ್ಲ. ಈ ತಂಡದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳ ಮಾಜಿ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.
ಟೀಮ್ ಇಂಡಿಯಾ (Team India) ಮಾಜಿ ಸ್ಟಾರ್ ಆಟಗಾರರು ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಅದು ಕೂಡ ಹೊಸ ಕ್ರಿಕೆಟ್ ಲೀಗ್ ಮೂಲಕ ಎಂಬುದು ವಿಶೇಷ. ಹೌದು, ಇದೇ ಜನವರಿ 20 ರಿಂದ ಓಮಾನ್ನಲ್ಲಿ ಶುರುವಾಗಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ (Legends League Cricket) ನಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗರ ತಂಡ ಕೂಡ ಕಾಣಿಸಿಕೊಳ್ಳಲಿದೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC) ನಿವೃತ್ತ ಕ್ರಿಕೆಟಿಗರ ವೃತ್ತಿಪರ ಲೀಗ್ ಆಗಿದ್ದು, ಇದರಲ್ಲಿ ಮೂರು ತಂಡಗಳು ಭಾಗವಹಿಸುತ್ತವೆ. ಅದರಂತೆ ಭಾರತ ಮಹರಾಜ ತಂಡದ ಪರ ವೀರೇಂದ್ರ ಸೆಹ್ವಾಗ್ (Virender Sehwag), ಯುವರಾಜ್ ಸಿಂಗ್ (Yuvraj Singh), ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಬದ್ರಿನಾಥ್, ಆರ್‌ಪಿ ಸಿಂಗ್, ಪ್ರಗ್ಯಾನ್ ಓಜಾ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಹೇಮಾಂಗ್ ಬದಾನಿ, ವೇಣುಗೋಪಾಲ್ ರಾವ್, ಮುನಾಫ್ ಪಟೇಲ್, ಸಂಜಯ್ ಬಂಗಾರ್, ನಯನ್ ಮೊಂಗಿಯಾ ಮತ್ತು ಅಮಿತ್ ಭಂಡಾರಿ ಆಡಲಿದ್ದಾರೆ.
ಇನ್ನು ಏಷ್ಯಾ ಲಯನ್ಸ್ ತಂಡದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದ ಮಾಜಿ ದಿಗ್ಗಜ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಈ ತಂಡದಲ್ಲಿ ಶೋಯೆಬ್ ಅಖ್ತರ್, ಶಾಹಿದ್ ಅಫ್ರಿದಿ, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಕಮ್ರಾನ್ ಅಕ್ಮಲ್, ಚಮಿಂಡ ವಾಸ್, ರೋಮೇಶ್ ಕಲುವಿತರಣ, ತಿಲಕರತ್ನೆ ದಿಲ್ಶನ್, ಅಜರ್ ಮಹಮೂದ್, ಉಪುಲ್ ತರಂಗ, ಮಿಸ್ಬಾ ಉಲ್-ಹಕ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಮೊಹಮ್ಮದ್ ಯೂಸುಫ್, ಉಮರ್ ಗುಲ್ ಮತ್ತು ಅಸ್ಗರ್ ಅಫ್ಘಾನ್ ಕಾಣಿಸಿಕೊಳ್ಳಲಿದ್ದಾರೆ.
ವಿಶ್ವ ಕ್ರಿಕೆಟ್ ಲೆಜೆಂಡ್ಸ್ಗಳನ್ನು ಒಳಗೊಂಡಿರುವ ಮೂರನೇ ತಂಡದ ಆಟಗಾರರನ್ನು ಇನ್ನೂ ಕೂಡ ಪ್ರಕಟಿಸಲಾಗಿಲ್ಲ. ಈ ತಂಡದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡಗಳ ಮಾಜಿ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.
ಓಮಾನ್‌ನ ಅಲ್ ಎಮಿರೇಟ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಟೂರ್ನಿ ನಡೆಯಲಿದ್ದು, ಈ ಹೊಸ ಲೀಗ್ನ ಆಯುಕ್ತರಾಗಿ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ನೇಮಕವಾಗಿದ್ದಾರೆ. ಒಟ್ಟಿನಲ್ಲಿ ರೋಡ್ ಸೇಫ್ಟಿ ಸಿರೀಸ್ ಬಳಿಕ ಇದೀಗ ಮತ್ತೊಂದು ಟಿ20 ಲೀಗ್ ಕ್ರಿಕೆಟ್ ಅಂಗಳಕ್ಕೆ ಸೇರ್ಪಡೆಯಾಗಿದ್ದು, ಈ ಲೀಗ್ ಮೂಲಕ ಮತ್ತೆ ಮಾಜಿ ಕ್ರಿಕೆಟಿಗರ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಅಭಿಮಾನಿಗಳಿಗೆ ದೊರೆಯಲಿದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್..!
ಇದನ್ನೂ ಓದಿ: Ravindra Jadeja: ಸ್ಟಾರ್ ಆಲ್ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(Sehwag, Yuvraj and Harbhajan to play for India Maharaja in inaugural Legends League Cricket)