IND vs SA Final: ಫೈನಲ್ ಪಂದ್ಯಕ್ಕೂ ಮುನ್ನ ಕಿಚ್ಚು ಹಚ್ಚಿದ ಮೀಮ್ಸ್

T20 World Cup 2024: ಟಿ20 ವಿಶ್ವಕಪ್​ನ ಫೈನಲ್ ಫೈಟ್​ಗೆ ವೇದಿಕೆ ಸಿದ್ಧವಾಗಿದೆ. ವೆಸ್ಟ್ ಇಂಡೀಸ್​ನ ಬಾರ್ಬಡೋಸ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಳ್ಳಲಿದೆ.

IND vs SA Final: ಫೈನಲ್ ಪಂದ್ಯಕ್ಕೂ ಮುನ್ನ ಕಿಚ್ಚು ಹಚ್ಚಿದ ಮೀಮ್ಸ್
IND vs SA
Follow us
|

Updated on: Jun 29, 2024 | 12:11 PM

T20 World Cup 2024: ಟಿ20 ವಿಶ್ವಕಪ್​ನ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಣಸಲಿದೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ವಿಶ್ವ ಚಾಂಪಿಯನ್ ಪಟ್ಟಕ್ಕೇರಲಿದೆ. ಅತ್ತ ಉಭಯ ತಂಡಗಳು ಫೈನಲ್ ಫೈಟ್​ಗಾಗಿ ಸಿದ್ಧತೆಯಲ್ಲಿದ್ದರೆ, ಅತ್ತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್​ಗಳ ಮೂಲಕ ಕಿಚ್ಚು ಹಚ್ಚುತ್ತಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್​ ಪ್ರೇಮಿಗಳನ್ನು ನಗೆಗಡಲಲ್ಲಿ ತೇಲಿಸುತ್ತಿರುವ ಕೆಲ ಮೀಮ್ಸ್​ಗಳ ಝಲಕ್ ಇಲ್ಲಿದೆ…

ಭಾರತ ತಂಡವು ಫೈನಲ್ ಪಂದ್ಯದಲ್ಲಿ 20 ಓವರ್​ಗಳಲ್ಲಿ 300 ರನ್​ಗಳಿಸಬೇಕು. ಹಾಗೆಯೇ ಸೌತ್ ಆಫ್ರಿಕಾ ತಂಡ ಸೊನ್ನೆಗೆ ಆಲೌಟ್ ಆಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿ ಮಾಡಲಾದ ಸ್ಕೋರ್​ ಕಾರ್ಡ್​ವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಫೈನಲ್ ಪಂದ್ಯ ಬಂದರೆ ಭಾರತದಲ್ಲಿ ಸರ್ವಧರ್ಮೀಯರ ಪ್ರಾರ್ಥನೆ ಶುರುವಾಗುತ್ತದೆ ಎಂದು ಕಿಚಾಯಿಸಿರುವ ಪೋಸ್ಟ್​ವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಭಾರತೀಯರು ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದರೂ, ಮನದೊಳಗೆ ಟೆನ್ಶನ್, ಎದೆಬಡಿತವಂತು ಜೋರಾಗಿದೆ ಎನ್ನುವ ಪೋಸ್ಟ್ ಕೂಡ ವೈರಲ್ ಆಗಿದೆ.

ಈ ಸಲ ಸೋಲಿಲ್ಲದ ಸರದಾರನಾಗಿ ಫೈನಲ್​ಗೆ ಬಂದಿದ್ದೀವಿ. ಫೈನಲ್​ನಲ್ಲೂ ನಮ್ಮ ಪರಾಕ್ರಮ ತೋರಿಸುತ್ತೇವೆ ಎನ್ನುವ ನಾಯಿಯ ಮೀಮ್ಸ್ ಒಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿ ಮೊದಲ ನಾಯಿಯನ್ನು ಪೂರ್ಣ ಆತ್ಮ ವಿಶ್ವಾಸದಲ್ಲಿರುವಂತೆ ತೋರಿಸಿದರೆ, ಎರಡನೇ ಚಿತ್ರದಲ್ಲಿ ಒಳಗೊಳಗೆ ಪ್ರಾರ್ಥಿಸುತ್ತಿರುವಂತೆ ಚಿತ್ರೀಕರಿಸಲಾಗಿದೆ.

ಇದರ ನಡುವೆ ಕಳಪೆ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿಯನ್ನು ಕೂಡ ಟ್ರೋಲ್ ಮಾಡಲಾಗಿದೆ. ಫೋನ್​ನಲ್ಲಿ ಮಾತನಾಡುತ್ತಿರುವ ಕೊಹ್ಲಿಯನ್ನು ಚಿತ್ರವನ್ನು ಬಳಸಿ, ಆನ್​ಲೈನ್​ನಲ್ಲಿ ಯಾವ ಮಂದಿರದ ದರ್ಶನ ಪಡೆಯಬಹುದು ಎಂಬ ಕುರಿತು ಮಾಹಿತಿ ಪಡೆಯುವಂತೆ ಅನುಷ್ಕಾರಲ್ಲಿ ಕೇಳುತ್ತಿರುವಂತೆ ಈ ಮೀಮ್ಸ್​ನಲ್ಲಿ ಕೊಹ್ಲಿಯನ್ನು ಚಿತ್ರೀಕರಿಸಲಾಗಿದೆ.

ಇನ್ನು ಟೀಮ್ ಇಂಡಿಯಾ ಕಪ್ ಗೆಲ್ಲಲು ದೇವರ ಮೊರೆ ಹೋಗಿರುವ ಅಭಿಮಾನಿಯ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಾಗೆಯೇ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಫೈನಲ್ ಪಂದ್ಯಕ್ಕೂ ಮುನ್ನ ಬಾಹುಬಲಿ ಚಿತ್ರದ ತುಣುಕುಗಳು ಕೂಡ ಮೀಮ್ಸ್ ಆಗಿ ಪರಿವರ್ತನೆಯಾಗಿದೆ. ಇಲ್ಲಿ ಪ್ರಭಾಸ್ ಭಾರತ ತಂಡವಾದರೆ, ರಾಣಾ ದಗ್ಗುಬಾಟಿ ಸೌತ್ ಆಫ್ರಿಕಾ ತಂಡವಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಕೂಡ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುತ್ತಿದೆ.

ಇನ್ನು ಫೈನಲ್ ಪಂದ್ಯ ಫಲಿತಾಂಶ ಏನಾಗಲಿದೆ ಎಂಬುದು ತಿಳಿಯಲು ಐಡೆನ್ ಮಾರ್ಕ್ರಾಮ್ ಅವರ ನಾಯಕತ್ವವನ್ನು ನೋಡಿ ಎಂಬ ಮೀಮ್ ಕೂಡ ವೈರಲ್ ಆಗಿದೆ. ಏಕೆಂದರೆ ಮಾರ್ಕ್ರಾಮ್ ನಾಯಕತ್ವದಲ್ಲಿ ಆಡಲಾದ ಎಲ್ಲಾ ಫೈನಲ್​ ಪಂದ್ಯಗಳಲ್ಲೂ ಸೌತ್ ಆಫ್ರಿಕಾ ಮತ್ತು ಇತರೆ ತಂಡಗಳು ಗೆದ್ದಿದೆ.

ಒಟ್ಟಿನಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್​ಗಳ ಕಲರವ ಜೋರಾಗಿದ್ದು, ಬಹುತೇಕ ಮೀಮ್ಸ್​ಗಳಲ್ಲೂ ಭಾರತ ತಂಡವೇ ಚಾಂಪಿಯನ್ ಆಗಲಿ ಎಂಬುದನ್ನು ಒತ್ತಿ ಹೇಳಲಾಗಿದೆ. ಅಂದರಂತೆ ಇಂದು ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಸೌತ್ ಆಫ್ರಿಕಾ ತಂಡವನ್ನು ಟೀಮ್ ಇಂಡಿಯಾ ಬಗ್ಗು ಬಡಿಯಲಿದೆಯಾ ಕಾದು ನೋಡಬೇಕಿದೆ.

ತಾಜಾ ಸುದ್ದಿ
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ
ದೇವರಮನೆ, ಚಾರ್ಮಾಡಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಸಿ ಪ್ರವಾಸಿಗರ ಹುಚ್ಚಾಟ
ದೇವರಮನೆ, ಚಾರ್ಮಾಡಿಯಲ್ಲಿ ರಸ್ತೆ ಮಧ್ಯೆ ವಾಹನ ನಿಲ್ಸಿ ಪ್ರವಾಸಿಗರ ಹುಚ್ಚಾಟ
ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶೆಟ್ಟಿ
ಕೊರಗಜ್ಜ ಸನ್ನಿಧಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಕ್ಷಿತ್ ಶೆಟ್ಟಿ
ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆ
ಕಾರಲ್ಲಿ ಬಂದು ಪಾಟ್ ಕದಿಯುವ ಕಪಲ್ಸ್; ಸಿಸಿ ಟಿವಿಯಲ್ಲಿ ಸೆರೆ