IND vs SA: ಕೇವಲ 240 ರನ್​ಗಳ ಟಾರ್ಗೆಟ್: ಆದರೆ ದಕ್ಷಿಣ ಆಫ್ರಿಕಾಗೆ ಗೆಲುವು ಸುಲಭವಲ್ಲ..!

| Updated By: ಝಾಹಿರ್ ಯೂಸುಫ್

Updated on: Jan 05, 2022 | 6:20 PM

india vs south africa 2nd test: ಮೊದಲ ಇನಿಂಗ್ಸ್​ ಮುನ್ನಡೆಯೊಂದಿಗೆ ಇದೀಗ 240 ರನ್​ಗಳ ಟಾರ್ಗೆಟ್ ಪಡೆದಿರುವ ದಕ್ಷಿಣ ಆಫ್ರಿಕಾ 2ನೇ ಇನಿಂಗ್ಸ್ ಆರಂಭಿಸಿದೆ. ಇದೀಗ 3ನೇ ದಿನದಾಟ ನಡೆಯುತ್ತಿದ್ದು, ಇನ್ನೂ ಕೂಡ 2 ದಿನಗಳ ಆಟ ಬಾಕಿಯಿದೆ.

IND vs SA: ಕೇವಲ 240 ರನ್​ಗಳ ಟಾರ್ಗೆಟ್: ಆದರೆ ದಕ್ಷಿಣ ಆಫ್ರಿಕಾಗೆ ಗೆಲುವು ಸುಲಭವಲ್ಲ..!
IND vs SA
Follow us on

ಭಾರತ-ದಕ್ಷಿಣ ಆಫ್ರಿಕಾ (India vs South Africa 2nd Test) ನಡುವಣ 2ನೇ ಟೆಸ್ಟ್ ಪಂದ್ಯವು ಕುತೂಹಲಘಟ್ಟದತ್ತ ಸಾಗುತ್ತಿದೆ. ಜೋಹಾನ್ಸ್​ಬರ್ಗ್​ನ ವಾಂಡರರ್ಸ್​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಕೆಎಲ್ ರಾಹುಲ್ (KL Rahul) ಅವರ ಅರ್ಧಶತಕ ಹಾಗೂ ಅಶ್ವಿನ್ ಅವರ 46 ರನ್​ಗಳ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 202 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಶಾರ್ದೂಲ್ ಠಾಕೂರ್ (7 ವಿಕೆಟ್) ಅವರ ಮಾರಕ ದಾಳಿಗೆ ತತ್ತರಿಸಿ 229 ರನ್​ಗೆ ಸರ್ವಪತನ ಕಂಡಿತು. ಇದರ ಬೆನ್ನಲ್ಲೇ 2ನೇ ಇನಿಂಗ್ಸ್​ ಆರಂಭಿಸಿದ್ದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ (58), ಚೇತೇಶ್ವರ ಪೂಜಾರ (54) ತಂಡಕ್ಕೆ ಆಸರೆಯಾದರು. ಉಳಿದ ಆಟಗಾರರ ನೀರಸ ಪ್ರದರ್ಶನದ ಹೊರತಾಗಿಯೂ ಹನುಮ ವಿಹಾರಿ ಅವರ ರಕ್ಷಣಾತ್ಮಕ ಆಟದೊಂದಿಗೆ ಅಜೇಯ 40 ರನ್​ಗಳಿಸಿ ತಂಡದ ಮೊತ್ತವನ್ನು 250 ರನ್​ಗಳ ಗಡಿದಾಟಿಸಿದರು. ಕಗಿಸೊ ರಬಾಡ, ಲುಂಗಿ ಎನ್​ಗಿಡಿ ಹಾಗೂ ಮಾರ್ಕೊ ಜಾನ್ಸನ್ ಅವರ ಮಾರಕ ದಾಳಿಯಿಂದಾಗಿ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್​ ಅನ್ನು 266 ರನ್​ಗಳಿಗೆ ಅಂತ್ಯಗೊಳಿಸಿತು.

ಮೊದಲ ಇನಿಂಗ್ಸ್​ ಮುನ್ನಡೆಯೊಂದಿಗೆ ಇದೀಗ 240 ರನ್​ಗಳ ಟಾರ್ಗೆಟ್ ಪಡೆದಿರುವ ದಕ್ಷಿಣ ಆಫ್ರಿಕಾ 2ನೇ ಇನಿಂಗ್ಸ್ ಆರಂಭಿಸಿದೆ. ಇದೀಗ 3ನೇ ದಿನದಾಟ ನಡೆಯುತ್ತಿದ್ದು, ಇನ್ನೂ ಕೂಡ 2 ದಿನಗಳ ಆಟ ಬಾಕಿಯಿದೆ. ಹೀಗಾಗಿ ದಕ್ಷಿಣ ಆಫ್ರಿಕಾಗೆ ಗೆಲ್ಲುವ ಅವಕಾಶ ಹೆಚ್ಚಿದೆ. ಆದರೆ ವಾಂಡರರ್ಸ್ ಮೈದಾನದಲ್ಲಿ ಚೇಸ್ ಎಂಬುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದಕ್ಕೆ ಈ ಹಿಂದಿನ ಅಂಕಿ ಅಂಶಗಳೇ ಸಾಕ್ಷಿ.

ಏಕೆಂದರೆ ಈ ಮೈದಾನದಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಇದುವರೆಗೆ ಮೂರು ಬಾರಿ ಮಾತ್ರ ಚೇಸ್ ಮಾಡಲಾಗಿದೆ. ಅದರಲ್ಲೂ 239 ರನ್​ಗಿಂತ ಹೆಚ್ಚಿನ ರನ್​ ಚೇಸ್ ಮಾಡಿರುವುದು ಕೇವಲ 2 ಬಾರಿ ಮಾತ್ರ. ಅದು ಕೂಡ ದಶಕಗಳ ಹಿಂದೆ. ಅಂದರೆ 2006 ರಲ್ಲಿ ಸೌತ್ ಆಫ್ರಿಕಾ ತಂಡವು ನ್ಯೂಜಿಲೆಂಡ್ ವಿರುದ್ದ 217 ರನ್​ಗಳನ್ನು ಚೇಸ್ ಮಾಡಿ ಜಯಿಸಿತ್ತು. ಹಾಗೆಯೇ 2006 ರಲ್ಲಿ ಆಸ್ಟ್ರೇಲಿಯಾ ಸೌತ್ ಆಫ್ರಿಕಾ ನೀಡಿದ 292 ರನ್​ಗಳನ್ನು ಬೆನ್ನತ್ತಿ ಗೆಲುವು ದಾಖಲಿಸಿತ್ತು. ಹಾಗೆಯೇ 2011 ರಲ್ಲಿ ಆಸ್ಟ್ರೇಲಿಯಾ ತಂಡವು ಸೌತ್ ಆಫ್ರಿಕಾ ವಿರುದ್ದ 310 ರನ್​ಗಳನ್ನು ಚೇಸ್ ಮಾಡಿ ಜಯ ಸಾಧಿಸಿತ್ತು.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಸೌತ್ ಆಫ್ರಿಕಾ ತಂಡವು ಈ ಮೈದಾನದಲ್ಲಿ 4ನೇ ಇನಿಂಗ್ಸ್​ನಲ್ಲಿ ಚೇಸ್ ಮಾಡಿ ಗೆದ್ದಿರುವುದು ಕೇವಲ 1 ಬಾರಿ ಮಾತ್ರ. ಇದೀಗ ಮೊದಲ ಇನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ ಕೇವಲ 229 ರನ್​ಗಳಿಗೆ ಆಲೌಟ್ ಆಗಿದೆ. ಹೀಗಾಗಿ 240 ರನ್​ಗಳ ಸುಲಭ ಗುರಿ ನೀಡಿದರೂ ಟೀಮ್ ಇಂಡಿಯಾ ಬೌಲರುಗಳು ಸೌತ್ ಆಫ್ರಿಕಾ ಬ್ಯಾಟರ್​ಗಳನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ:  Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್​..!

ಇದನ್ನೂ ಓದಿ:  Ravindra Jadeja: ಸ್ಟಾರ್ ಆಲ್​ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(IND vs SA: Highest successful 4th innings chases at Wanderers)