IND vs SA: ಚೆನ್ನಾಗಿ ಆಡಿದ್ರೂ, ರಹಾನೆಯನ್ನು ತಂಡದಿಂದ ಕೈಬಿಡಬೇಕೆಂದ ಗೌತಮ್ ಗಂಭೀರ್
India vs South Africa: ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಮತ್ತು ಅಂತಿಮ ಟೆಸ್ಟ್ ಜನವರಿ 11 ರಿಂದ ಕೇಪ್ ಟೌನ್‌ನಲ್ಲಿ ನಡೆಯಲಿದೆ. ಇದಾದ ಬಳಿಕ ಉಭಯ ದೇಶಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ.
ದಕ್ಷಿಣ ಆಫ್ರಿಕಾ ವಿರುದ್ದದ 2ನೇ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಅಜಿಂಕ್ಯ ರಹಾನೆಯನ್ನು 3ನೇ ಪಂದ್ಯದಿಂದ ಕೈಬಿಡಬೇಕೆಂದು ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲಿ ರಹಾನೆ 58 ರನ್ ಗಳಿಸಿ ಟೀಮ್ ಇಂಡಿಯಾ ಪರ ದ್ವಿತೀಯ ಟೆಸ್ಟ್‌ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ಅತ್ತ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದ ಎರಡನೇ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ಮೂರನೇ ಟೆಸ್ಟ್ ವೇಳೆ ಫಿಟ್ ಕೊಹ್ಲಿ ಪ್ಲೇಯಿಂಗ್-11 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಕೊಹ್ಲಿಯ ಆಗಮನದೊಂದಿಗೆ ಓರ್ವ ಆಟಗಾರ ಹೊರಗುಳಿಯಬೇಕಾಗುತ್ತದೆ. ಹೀಗಾಗಿ ತಂಡದಿಂದ ಯಾರನ್ನು ಕೈ ಬಿಡುವುದು ಎಂಬ ಚರ್ಚೆ ಶುರುವಾಗಿದೆ.
ಈ ಬಗ್ಗೆ ಮಾತನಾಡಿರುವ ಗೌತಮ್ ಗಂಭೀರ್, ‘ಹನುಮ ವಿಹಾರಿ ಎರಡೂ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಅಜಿಂಕ್ಯ ರಹಾನೆ ಅರ್ಧಶತಕ ಬಾರಿಸಿರಬಹುದು, ಆದರೆ ಅವರಿಗೆ ಸಾಕಷ್ಟು ಅವಕಾಶಗಳು ಸಿಕ್ಕಿವೆ. ವಿಹಾರಿ ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ದ ಎರಡನೇ ಇನ್ನಿಂಗ್ಸ್‌ನಲ್ಲಿ ವಿಹಾರಿ 40 ರನ್ ಗಳಿಸಿದ್ದಾರೆ. 228 ರನ್ ಗಳಿಸುವಷ್ಟರಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಕಳೆದುಕೊಂಡಿತ್ತು. ನಂತರ ವಿಹಾರಿ ಉತ್ತಮ ಇನ್ನಿಂಗ್ಸ್ ಆಡಿ ಸ್ಕೋರ್ ಅನ್ನು 266 ರನ್ ಗಳಿಗೆ ಕೊಂಡೊಯ್ದರು. ಈ ಎಲ್ಲಾ ಕಾರಣಗಳಿಂದಾಗಿ ಹನುಮ ವಿಹಾರಿಯನ್ನು ತಂಡದಲ್ಲೇ ಉಳಿಸಿಕೊಳ್ಳಬೇಕು. ವಿರಾಟ್ ಕೊಹ್ಲಿಗಾಗಿ ಅಜಿಂಕ್ಯ ರಹಾನೆಯನ್ನು ತಂಡದಿಂದ ಕೈ ಬಿಡಬೇಕು ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
ಇದೇ ವೇಳೆ ಚೇತೇಶ್ವರ ಪೂಜಾರ ಅವರಿಗೆ ಅವಕಾಶ ನೀಡಬೇಕು ಎಂದಿರುವ ಗಂಭೀರ್, ಪೂಜಾರ 2 ವರ್ಷಗಳಿಂದ ಶತಕ ಸಿಡಿಸಿಲ್ಲ ನಿಜ. ಆದರೆ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ 53 ರನ್ ಗಳಿಸಿದ್ದರು. ಇದಲ್ಲದೇ ಅಜಿಂಕ್ಯ ರಹಾನೆ ಜತೆಗೂಡಿ ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು. ಹೀಗಾಗಿ ಪೂಜಾರ ಅವರನ್ನೂ ಕೂಡ 3ನೇ ಪಂದ್ಯಕ್ಕಾಗಿ ತಂಡದಲ್ಲೇ ಉಳಿಸಿಕೊಳ್ಳಬೇಕೆಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಮತ್ತು ಅಂತಿಮ ಟೆಸ್ಟ್ ಜನವರಿ 11 ರಿಂದ ಕೇಪ್ ಟೌನ್‌ನಲ್ಲಿ ನಡೆಯಲಿದೆ. ಇದಾದ ಬಳಿಕ ಉಭಯ ದೇಶಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್..!
ಇದನ್ನೂ ಓದಿ: Ravindra Jadeja: ಸ್ಟಾರ್ ಆಲ್ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(IND vs SA: Ajinkya Rahane should be out of the team despite scoring 58 runs: Gautam Gambhir)