IND vs SA: 15 ಫೋರ್, ಅಜೇಯ 113 ರನ್; ಏಕದಿನ ಕ್ರಿಕೆಟ್ನಲ್ಲಿ 2ನೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್!
Shreyas Iyer: 43 ನೇ ಓವರ್‌ನಲ್ಲಿ ಕಗಿಸೊ ರಬಾಡ ಎಸೆದ ನೋ ಬಾಲ್ನ ಲಾಭ ಪಡೆದ ಶ್ರೇಯಸ್ ಫ್ರೀ ಹಿಟ್ ಬಾಲ್ನಲ್ಲಿ ಕವರ್ಸ್ ಮೇಲೆ ಬೌಂಡರಿ ಬಾರಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದರು.
ರಾಂಚಿಯಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ಗೆಲುವಿನಲ್ಲಿ ಮೊದಲು ಬೌಲಿಂಗ್ನಲ್ಲಿ ಬೌಲರ್ಗಳು ಕರಾರುವಕ್ಕಾದ ದಾಳಿ ನಡೆಸಿ ಆಫ್ರಿಕ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದರೆ, ಬ್ಯಾಟಿಂಗ್ನಲ್ಲಿ ಇಶಾನ್ ಕಿಶನ್ (Ishan Kishan) ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ಮಿಂಚಿನ ಪ್ರದರ್ಶನ ತೋರಿದರು. ಇದರಲ್ಲಿ ಕಿಶನ್ ಕೇವಲ 7 ರನ್‌ಗಳಿಂದ ಶತಕ ವಂಚಿತರಾದರೆ, ಶ್ರೇಯಸ್ ಮಾತ್ರ ಭರ್ಜರಿ ಶತಕ ಸಿಡಿಸಿ, ಅಜೇಯರಾಗಿ ಉಳಿದು ತಂಡಕ್ಕೆ ಗೆಲುವು ತಂದಿತ್ತರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಎರಡನೇ ಶತಕ ದಾಖಲಿಸಿದ ಶ್ರೇಯಸ್ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಗೂ ಭಾಜನರಾದರು.
ಲಕ್ನೋದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ತಂಡ ಸಂಕಷ್ಟದಲ್ಲಿರುವಾಗ ಅರ್ಧಶತಕ ಬಾರಿಸುವ ಮೂಲಕ ಭಾರತಕ್ಕೆ ಗೆಲುವಿನ ಭರವಸೆ ಹುಟ್ಟಿಸಿದ್ದ ಶ್ರೇಯಸ್ ಅಯ್ಯರ್ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾಗಿದ್ದರು. ಆದರೆ ರಾಂಚಿಯಲ್ಲಿ ತಮ್ಮ ಕೆಲಸವನ್ನು ಪೂರ್ಣಗೊಳಿಸಿದ ಅಯ್ಯರ್, ಶತಕ ಬಾರಿಸಿದ್ದು ಮಾತ್ರವಲ್ಲದೆ ಟೀಮ್ ಇಂಡಿಯಾಕ್ಕೆ ಗೆಲುವಿನ ಕೊಡುಗೆ ನೀಡಿದರು. ಈ ಇನ್ನಿಂಗ್ಸ್ ಜೊತೆಗೆ ಶ್ರೇಯಸ್ ತಮ್ಮ ಅತ್ಯುತ್ತಮ ಫಾರ್ಮ್‌ನ ಸರಣಿಯನ್ನು ಮುಂದುವರಿಸುವ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಈ ಸ್ವರೂಪದಲ್ಲಿ ಭದ್ರಪಡಿಸಿಕೊಳ್ಳುವ ಹಕ್ಕನ್ನು ಮತ್ತಷ್ಟು ಬಲಪಡಿಸಿದರು.
ಫೋರ್‌ನೊಂದಿಗೆ ಶತಕ ಪೂರೈಸಿದ ಶ್ರೇಯಸ್
ಅಕ್ಟೋಬರ್ 9, ಭಾನುವಾರದಂದು ರಾಂಚಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 40 ರನ್‌ಗಳಿಗೆ ತಮ್ಮ ಆರಂಭಿಕರಿಬ್ಬರನ್ನು ಕಳೆದುಕೊಂಡಿದ್ದ ಭಾರತ ತಂಡಕ್ಕೆ ಉತ್ತಮ ಇನ್ನಿಂಗ್ಸ್ ಮತ್ತು ಜೊತೆಯಾಟದ ಅಗತ್ಯವಿತ್ತು. ಈ ವೇಳೆ ಜೊತೆಯಾದ ಶ್ರೇಯಸ್ ಹಾಗೂ ಕಿಶನ್ ತಂಡಕ್ಕೆ ನಿದಾನವಾಗಿ ರನ್ ಸೇರಿಸುತ್ತಾ ಹೋದರು. ಬಳಿಕ ದಾಳಿ ಆರಂಭಿಸಿದ ಇಶಾನ್ ಆಫ್ರಿಕನ್ ಬೌಲರ್ಗಳನ್ನು ಬೆಂಡೆತ್ತಿದರು. ಆದರೆ ದುರದೃಷ್ಟವಶಾತ್ ಕಿಶನ್ ಶತಕ ವಂಚಿತರಾಗಿ 93 ರನ್ಗೆ ತಮ್ಮ ವಿಕೆಟ್ ಒಪ್ಪಿಸಿದರು. ಆದರೆ ಶ್ರೇಯಸ್ ಮಾತ್ರ ಇದಕ್ಕೆ ಅವಕಾಶ ನೀಡಲಿಲ್ಲ.
43 ನೇ ಓವರ್‌ನಲ್ಲಿ ಕಗಿಸೊ ರಬಾಡ ಎಸೆದ ನೋ ಬಾಲ್ನ ಲಾಭ ಪಡೆದ ಶ್ರೇಯಸ್ ಫ್ರೀ ಹಿಟ್ ಬಾಲ್ನಲ್ಲಿ ಕವರ್ಸ್ ಮೇಲೆ ಬೌಂಡರಿ ಬಾರಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದರು.
1⃣1⃣3⃣* runs 1⃣1⃣1⃣ balls 1⃣5⃣ fours
A game-changing knock from @ShreyasIyer15 as he bags the Player of the Match award! ??#TeamIndia | #INDvSA pic.twitter.com/7kjHzj9MqW
— BCCI (@BCCI) October 9, 2022
ಅಜೇಯರಾಗಿ ಉಳಿದ ಶ್ರೇಯಸ್
ತಮ್ಮ ಇನ್ನಿಂಗ್ಸ್ನಲ್ಲಿ 111 ಎಸೆತಗಳನ್ನು ಎದುರಿಸಿದ ಅಯ್ಯರ್, 15 ಬೌಂಡರಿಯೊಂದಿಗೆ 113ರನ್ ಕಲೆ ಹಾಕಿ ಏಕದಿನ ಕ್ರಿಕೆಟ್ ವೃತ್ತಿಜೀವನದ ಎರಡನೇ ಶತಕವನ್ನು ಪೂರ್ಣಗೊಳಿಸಿದರು.ಜೊತೆಗೆ ಅಜೇಯರಾಗಿ ಉಳಿದು ತಂಡದ ಗೆಲುವನ್ನು ಖಚಿತಪಡಿಸಿದರು. ಇದಕ್ಕೂ ಮೊದಲು ಶ್ರೇಯಸ್ ಎರಡೂವರೆ ವರ್ಷಗಳ ಹಿಂದೆ 2020 ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಮೊದಲ ಬಾರಿಗೆ ಶತಕ ಬಾರಿಸಿದ್ದರು. ಇದೀಗ ಸುದೀರ್ಘ ಕಾಯುವಿಕೆಯ ನಂತರ ಶ್ರೇಯಸ್ ಎರಡನೇ ಶತಕವನ್ನೂ ಪೂರೈಸಿದ್ದಾರೆ. ಗೆಲುವಿನ ರನ್ ಕೂಡ ಶ್ರೇಯಸ್ ಅವರದೇ ಬ್ಯಾಟ್ನಿಂದಲೇ ಹೊರಬಿತ್ತು. 46ನೇ ಓವರ್‌ನ ಐದನೇ ಎಸೆತವನ್ನು ಬೌಂಡರಿ ಬಾರಿಸುವ ಮೂಲಕ ಶ್ರೇಯಸ್ ತಂಡದ ಗೆಲುವನ್ನು ನಿರ್ಧರಿಸಿದರು.
Published On - 10:42 pm, Sun, 9 October 22