Mohammed Siraj: ಮೊಹಮ್ಮದ್ ಸಿರಾಜ್ ರೋಚಕ ಕ್ಯಾಚ್ ಕಂಡು ದಂಗಾದ ಭಾರತೀಯ ಫೀಲ್ಡಿರ್ಗಳು: ವಿಡಿಯೋ ನೋಡಿ
India vs South Africa, 2nd ODI: ಹರಿಣಗಳ ಪರ ಹೆನ್ರಿಚ್ ಕ್ಲಾಸೆನ್ ಕೂಡ ಅಪಾಯಕಾರಿ ಆಗಿ ಗೋಚರಿಸಿದರು. ಆದರೆ, ಇವರನ್ನು ಪೆವಿಲಿಯನ್ಗೆ ಅಟ್ಟಿದ್ದು ಕುಲ್ದೀಪ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ (Mohammad Siraj).
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತದ (India vs South Africa) ಇದೀಗ ದ್ವಿತೀಯ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿದೆ. ಸವಾಲಿನ ಟಾರ್ಗೆಟ್ ಇದ್ದರೂ ಟೀಮ್ ಇಂಡಿಯಾ ಬ್ಯಾಟರ್ಗಳು ಭರ್ಜರಿ ಪ್ರದರ್ಶನ ತೋರಿ 7 ವಿಕೆಟ್ಗಳ ಜಯ ಸಾಧಿಸಿದರು. ಈ ಮೂಲಕ 1-1 ಅಂತರದಿಂದ ಸರಣಿ ಸಮಬಲ ಸಾಧಿಸಿದೆ. ಶ್ರೇಯಸ್ ಅಯ್ಯರ್ (Shreyas Iyer) ಆಕರ್ಷಕ ಶತಕ ಸಿಡಿಸಿ ಮಿಂಚಿದರೆ, ಇಶಾನ್ ಕಿಶನ್ 93 ರನ್‌ಗಳ ಕೊಡುಗೆ ನೀಡಿದರು. ಆಫ್ರಿಕಾ ಪರ ಆ್ಯಡನ್ ಮರ್ಕ್ರಮ್ ಹಾಗೂ ರೀಜಾ ಹೆನ್ರಿಕ್ಸ್ ಅರ್ಧಶತಕ ಸಿಡಿಸಿದರು. ಹರಿಣಗಳ ಪರ ಹೆನ್ರಿಚ್ ಕ್ಲಾಸೆನ್ ಕೂಡ ಅಪಾಯಕಾರಿ ಆಗಿ ಗೋಚರಿಸಿದರು. ಆದರೆ, ಇವರನ್ನು ಪೆವಿಲಿಯನ್ಗೆ ಅಟ್ಟಿದ್ದು ಕುಲ್ದೀಪ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ (Mohammed Siraj).
ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್ಗೆ ಮುಂದಾದರು. ಹೀಗಾಗಿ ಇವರ ವಿಕೆಟ್ ಭಾರತಕ್ಕೆ ಮುಖ್ಯವಾಯಿತು. ಇದಕ್ಕಾಗಿ ಕುಲ್ದೀಪ್ ಯಾದವ್ 38ನೇ ಓವರ್ನಲ್ಲಿ ಗೂಗ್ಲಿ ಎಸೆದರು. ಇದನ್ನು ಅರಿಯದ ಕ್ಲಾಸೆನ್ ಸಿಕ್ಸ್ ಸಿಡಿಸಲು ಮುಂದಾದರು. ಚೆಂಡು ಸರಿಯಾದ ಸಮಯಕ್ಕೆ ಬ್ಯಾಟ್ಗೆ ತಾಗದ ಕಾರಣ ಸಾಕಷ್ಟು ಮೇಲೋಯಿತು. ಈ ಸಂದರ್ಭ ಫೀಲ್ಡ್ನಲ್ಲಿದ್ದ ಮೊಹಮ್ಮದ್ ಸಿರಾಜ್ ಓಡಿ ಬಂದು ಕಷ್ಟಕರವಾದ ಕ್ಯಾಚ್ ಅನ್ನು ಡೈವ್ ಬಿದ್ದು ಹಿಡಿದರು. ಇವರ ರೋಚಕ ಕ್ಯಾಚ್ ಕಂಡು ಸ್ವತಃ ಭಾರತೀಯ ಇತರೆ ಆಟಗಾರರು ಒಂದು ಕ್ಷಣ ದಂಗಾದರು. 26 ಎಸೆತಗಳಲ್ಲಿ 2 ಫೋರ್, 2 ಸಿಕ್ಸರ್ ಸಿಡಿಸಿದ್ದ ಕ್ಲಾಸೆನ್ 30 ರನ್ಗೆ ಪೆವಿಲಿಯನ್ ಸೇರಿಕೊಂಡರು.
WHAT. A. CATCH! ? ?@mdsirajofficial takes a stunner to dismiss Heinrich Klaasen. ? ? #TeamIndia
South Africa lose their 4th wicket.
Follow the match ▶️ https://t.co/6pFItKiAHZ
Don’t miss the LIVE coverage of the #INDvSA match on @StarSportsIndia. pic.twitter.com/Yy8NrpdXGm
— BCCI (@BCCI) October 9, 2022
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡವು ನಿಗದಿತ 50 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತು. ಆ್ಯಡನ್ ಮರ್ಕ್ರಮ್ ಹಾಗೂ ರೀಜಾ ಹೆನ್ರಿಕ್ಸ್ ಮೂರನೇ ವಿಕೆಟ್‌ಗೆ 129 ರನ್‌ಗಳ ಜೊತೆಯಾಟ ಆಡಿದರು. 76 ಎಸೆತಗಳನ್ನು ಎದುರಿಸಿದ ರೀಜಾ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 74 ರನ್ ಗಳಿಸಿದರು. ಇನ್ನೊಂದೆಡೆ ಮರ್ಕ್ರಮ್ 89 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 79 ರನ್ ಚಚ್ಚಿದರು. ಭಾರತದ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಿತ್ತರು.
279 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ 45.5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತು. ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಜೋಡಿ ಮೂರನೇ ವಿಕೆಟ್‌ಗೆ 161 ರನ್ ಜೊತೆಯಾಟವಾಡಿದರು. ಹರಿಣಗಳ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಇಬ್ಬರೂ ಬ್ಯಾಟರ್ಗಳು ತಂಡಕ್ಕೆ ಆಸರೆಯಾಗಿ ನಿಂತರು. 84 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 93 ರನ್ ಬಾರಿಸಿದ ಕಿಶನ್ 7 ರನ್ ಅಂತರದಲ್ಲಿ ಶತಕವನ್ನು ಮಿಸ್ ಮಾಡಿಕೊಂಡರು. ಇನ್ನೊಂದೆಡೆ ಅಜೇಯ ಆಟವಾಡಿದ ಶ್ರೇಯಸ್ ಅಯ್ಯರ್ (113) ಭರ್ಜರಿ ಶತಕ ದಾಖಲಿಸಿ ಸಂಭ್ರಮಿಸಿದರು. ಜೊತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ತಮ್ಮದಾಗಿಸಿದರು.