ವೆಸ್ಟ್ ಇಂಡೀಸ್ ತಂಡವನ್ನು ಕ್ಲೀನ್ ಸ್ವೀಪ್ ಮಾಡಿದ ನಂತರ, ಭಾರತ ಈಗ ಶ್ರೀಲಂಕಾ ವಿರುದ್ಧ (India vs Sri Lanka T20I Series) ಸೆಣಸಾಡುತ್ತಿದೆ. ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಮೊದಲ ಪಂದ್ಯದೊಂದಿಗೆ ಆರಂಭವಾಗಿದೆ. ಶ್ರೀಲಂಕಾ ನಾಯಕ ದಸುನ್ ಶಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಆಲ್‌ರೌಂಡರ್ ದೀಪಕ್ ಹೂಡಾ (Deepak Hooda) ಟೀಂ ಇಂಡಿಯಾ ಪರ ಟಿ20 ಪಾದಾರ್ಪಣೆ ಮಾಡುತ್ತಿದ್ದಾರೆ. ಹೂಡಾ ಕೆಲವು ದಿನಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇವರೊಂದಿಗೆ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (Sanju Samson) ಕೂಡ ಬಹಳ ಸಮಯದ ನಂತರ ಆಡುವ XI ಗೆ ಮರಳಿದ್ದಾರೆ.
ಇಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ತನ್ನ ಆಟಗಾರರ XI ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಫೆಬ್ರವರಿ 20 ರಂದು ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಟಿ20 ಆಡಿದ ತಂಡದಲ್ಲಿ 6 ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಅತ್ಯಂತ ವಿಶೇಷವೆಂದರೆ ದೀಪಕ್ ಹೂಡಾ ಚೊಚ್ಚಲ ಮತ್ತು ಸಂಜು ಸ್ಯಾಮ್ಸನ್ ಪುನರಾಗಮನ. ಸ್ಯಾಮ್ಸನ್ ಕೊನೆಯದಾಗಿ ಜುಲೈ 2021 ರಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಪರ T20 ಪಂದ್ಯವನ್ನು ಆಡಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿ, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಸುದೀರ್ಘ ವಿರಾಮದ ನಂತರ ಮರಳಿದ್ದಾರೆ. ಆದರೆ ರವೀಂದ್ರ ಜಡೇಜಾ ಕೂಡ ತಮ್ಮ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಮತ್ತು ತಂಡದ ಭಾಗವಾಗಿದ್ದಾರೆ.
Sri Lanka have won the toss and they will bowl first in the 1st T20I.
A look at our Playing XI for the game.
Live – https://t.co/RpSRuIlfLe #INDvSL @Paytm pic.twitter.com/2o5iyU3WeK
— BCCI (@BCCI) February 24, 2022
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ಕೀಪರ್), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ
ಶ್ರೀಲಂಕಾದ ಆಡುವ XI
ದಸುನ್ ಶನಕ (ನಾಯಕ), ಪಾತುಮ್ ನಿಸಂಕಾ, ಕಮಿಲ್ ಮಿಶ್ರಾ, ಚರಿತ್ ಅಸಲಂಕಾ, ಜನಿತ್ ಲಿಯಾಂಗೆ, ದಿನೇಶ್ ಚಂಡಿಮಲ್, ಚಮಿಕಾ ಕರುಣಾರತ್ನೆ, ದುಷ್ಮಂತ ಚಮೀರಾ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ಲಹಿರು ಕುಮಾರ
ಇದನ್ನೂ ಓದಿ:IND vs SL 1st T20, LIVE Score: ಟಾಸ್ ಗೆದ್ದ ಲಂಕಾ ಬೌಲಿಂಗ್; ಭಾರತ ಬ್ಯಾಟಿಂಗ್
Published On - 6:41 pm, Thu, 24 February 22