IPL 2022: CSK ತಂಡದ ಪ್ರಮುಖ ಆಟಗಾರ ಐಪಿಎಲ್ನಿಂದ ಹೊರಬೀಳುವ ಸಾಧ್ಯತೆ..!
Deepak Chahar: ಈ ಬಾರಿಯ ಮೆಗಾ ಹರಾಜಿನಲ್ಲಿ ದೀಪಕ್ ಚಹರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 14 ಕೋಟಿ ರೂ. ನೀಡಿ ಮತ್ತೆ ಖರೀದಿಸಿತ್ತು.
Updated on: Feb 24, 2022 | 6:00 PM

ಐಪಿಎಲ್ ಸೀಸನ್ 15 ಆರಂಭಕ್ಕೆ ಇನ್ನು ತಿಂಗಳು ಮಾತ್ರ ಉಳಿದಿವೆ. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಗಾಯಗೊಂಡಿರುವುದು ಸಿಎಸ್ಕೆ ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಹೌದು, ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ದೀಪಕ್ ಚಹರ್ ಗಾಯಗೊಂಡಿದ್ದರು. ಬೌಲಿಂಗ್ ಮಾಡುತ್ತಿದ್ದ ವೇಳೆ ಗಾಯಗೊಂಡ ಚಹರ್ ಆ ಬಳಿಕ ಮೈದಾನಕ್ಕೆ ಇಳಿದಿರಲಿಲ್ಲ. ಅಷ್ಟೇ ಅಲ್ಲದೆ ಗಾಯದ ಕಾರಣ ಶ್ರೀಲಂಕಾ ವಿರುದ್ದದ ಸರಣಿಯಿಂದ ಕೂಡ ಹೊರಗುಳಿದಿದ್ದರು.

ಇದೀಗ ದೀಪಕ್ ಚಹರ್ ಮಂಡಿರಜ್ಜು ಸಮಸ್ಯೆ ಒಳಗಾಗಿರುವುದು ಖಚಿತವಾಗಿದೆ. ಹೀಗಾಗಿ ಹೆಚ್ಚಿನ ವಿಶ್ರಾಂತಿ ಪಡೆಯಬೇಕಾಗುತ್ತದೆ. ಅತ್ತ ಮಾರ್ಚ್ 26 ಅಥವಾ 27 ರಿಂದ ಐಪಿಎಲ್ ಶುರುವಾಗುವ ಸಾಧ್ಯತೆಯಿದೆ. ಇದರೊಳಗೆ ದೀಪಕ್ ಚಹರ್ ಚೇತರಿಸಿಕೊಂಡರೆ ಮಾತ್ರ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಆದರೆ ಶ್ರೀಲಂಕಾ ವಿರುದ್ದದ ಸಂಪೂರ್ಣ ಸರಣಿಯಿಂದ ಹೊರಗುಳಿದಿರುವ ಕಾರಣ ಚಹರ್ ಗಂಭೀರ ಗಾಯಕ್ಕೆ ಒಳಗಾಗಿರುವುದು ಸ್ಪಷ್ಟ. ಹೀಗಾಗಿ ಐಪಿಎಲ್ ಆರಂಭದ ವೇಳೆಗೆ ದೀಪಕ್ ಚಹರ್ ಗುಣಮುಖರಾಗುವುದು ಕೂಡ ಅನುಮಾನ ಎನ್ನಲಾಗಿದೆ.

ಈ ಬಾರಿಯ ಮೆಗಾ ಹರಾಜಿನಲ್ಲಿ ದೀಪಕ್ ಚಹರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 14 ಕೋಟಿ ರೂ. ನೀಡಿ ಮತ್ತೆ ಖರೀದಿಸಿತ್ತು. ತಂಡದ ಪ್ರಮುಖ ವೇಗಿಯಾಗಿ ಆಯ್ಕೆಯಾಗಿದ್ದ ಚಹರ್ ಇದೀಗ ಗಾಯಗೊಂಡು ಟೀಮ್ ಇಂಡಿಯಾದಿಂದ ಹೊರಬಿದ್ದಿರುವುದು ಸಿಎಸ್ಕೆ ತಂಡದ ಚಿಂತೆಯನ್ನು ಹೆಚ್ಚಿಸಿದೆ.
