IND vs SL: 3ನೇ ಟಿ20 ಗೆಲುವಿನೊಂದಿಗೆ ಪಾಕ್ ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದ ಭಾರತ..!

| Updated By: ಪೃಥ್ವಿಶಂಕರ

Updated on: Feb 28, 2022 | 2:48 PM

IND vs SL: ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಕೊನೆಯ ಟಿ 20 ಪಂದ್ಯವನ್ನು ಗೆದ್ದು ಭಾರತ ತಮ್ಮ ಹೆಸರಿನಲ್ಲಿ ವಿಶ್ವದಾಖಲೆಯನ್ನು ಬರೆದುಕೊಂಡಿದೆ. ಇದು ಭಾರತದ 54ನೇ ಟಿ20 ಅಂತಾರಾಷ್ಟ್ರೀಯ ಜಯವಾಗಿಸಿದೆ.

IND vs SL: 3ನೇ ಟಿ20 ಗೆಲುವಿನೊಂದಿಗೆ ಪಾಕ್ ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದ ಭಾರತ..!
ಟೀಂ ಇಂಡಿಯಾ
Follow us on

ಟಿ20 ಸರಣಿಯಲ್ಲಿ ಶ್ರೀಲಂಕಾ (Sri Lanka)ವನ್ನು ಭಾರತ ವೈಟ್ ವಾಷ್ ಮಾಡಿದೆ. ಆದರೆ ಇದು ಮತ್ತೊಂದು ನೆರೆಯ ಪಾಕಿಸ್ತಾನದ ಮೇಲೂ ಪರಿಣಾಮ ಬೀರಿದೆ. ಶ್ರೀಲಂಕಾವನ್ನು ಹೀನಾಯವಾಗಿ ಸೋಲಿಸಿದ ನಂತರ ಭಾರತ ತಂಡವು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನದ ದಾಖಲೆಯನ್ನು ಮುರಿದಿದೆ. ಈ ಮೂಲಕ ಈಗ ಈ ವಿಷಯದಲ್ಲಿ ನಂಬರ್ ಒನ್ ತಂಡವಾಗಿ ಮಾರ್ಪಟ್ಟಿದೆ. ಶ್ರೀಲಂಕಾದ ಸೋಲಿನ ಪರಿಣಾಮ ಪಾಕಿಸ್ತಾನದ ಮೇಲೆ ಹೇಗೆ ಆಯಿತು ಎಂದು ಈಗ ನೀವು ಯೋಚಿಸುತ್ತಿರಬೇಕು. ಹಾಗಾಗಿ ಇದು ಗೆಲುವಿಗೆ ಸಂಬಂಧಿಸಿದ ವಿಶ್ವ ದಾಖಲೆಯಾಗಿದ್ದು, ಟೀಂ ಇಂಡಿಯಾ (Team India) ತನ್ನ ಹೆಸರಿನಲ್ಲಿ ಮಾಡಿದೆ. ಧರ್ಮಶಾಲಾದಲ್ಲಿ ನಡೆದ ಕೊನೆಯ ಟಿ20ಯನ್ನು 6 ವಿಕೆಟ್‌ಗಳಿಂದ ಗೆದ್ದ ನಂತರ ಭಾರತ ಈ ದಾಖಲೆಗೆ ಕೊರಳೊಡ್ಡಿದೆ.

ಕೊನೆಯ ಟಿ20 ಪಂದ್ಯದಲ್ಲಿ ಭಾರತ ಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ ಶ್ರೀಲಂಕಾವನ್ನು ಸೋಲಿಸಿತು. ಇದರೊಂದಿಗೆ 3 ಟಿ20 ಸರಣಿಯಲ್ಲೂ ಕ್ಲೀನ್ ಸ್ವೀಪ್ ಮಾಡಿತು ಭಾರತ ಸರಣಿಯ 3 ಪಂದ್ಯಗಳಲ್ಲಿ 2 ಬಾರಿ ರನ್ ಚೇಸಿಂಗ್​ನಲ್ಲಿ ಗೆದ್ದಿದೆ. ಧರ್ಮಶಾಲಾದ ರನ್ ಚೇಸ್ ನಲ್ಲಿ ಈ ಎರಡು ಗೆಲುವಿನೊಂದಿಗೆ ಭಾರತ ಪಾಕ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದಿದೆ.

ಧರ್ಮಶಾಲಾದಲ್ಲಿ ಪಾಕಿಸ್ತಾನದ ವಿಶ್ವ ದಾಖಲೆ ಮುರಿದಿದೆ
ವಾಸ್ತವವಾಗಿ, ಪಾಕಿಸ್ತಾನಕ್ಕೆ ಸಂಬಂಧಿಸಿದ ಈ ವಿಶ್ವ ದಾಖಲೆಯು T20 ಪಂದ್ಯಗಳಲ್ಲಿ ರನ್‌ ಚೇಸಿಂಗ್ ಮಾಡಿ ಹೆಚ್ಚು ಗೆಲುವು ದಾಖಲಿಸಿರುವುದಕ್ಕೆ ಸಂಬಂಧಿಸಿದೆ. ಗುರಿ ಬೆನ್ನಟ್ಟಿದ ಪಾಕಿಸ್ತಾನ 86 ಪಂದ್ಯಗಳಲ್ಲಿ 53 ಗೆಲುವು ಸಾಧಿಸಿತ್ತು. ಧರ್ಮಶಾಲಾದಲ್ಲಿ ಭಾರತ ಈ ದಾಖಲೆಯನ್ನು ಮುರಿದಿದೆ.

ಧರ್ಮಶಾಲಾದಲ್ಲಿ ನಡೆದ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ಭಾರತ ರನ್ ಚೇಸಿಂಗ್ ಮೂಲಕ ಪಂದ್ಯ ಗೆದ್ದುಕೊಂಡಿದೆ. ಎರಡನೇ ಟಿ20ಯಲ್ಲಿ ಗೆಲುವು ದಾಖಲಿಸಿದ ಬಳಿಕ ಪಾಕಿಸ್ತಾನದ ದಾಖಲೆಯನ್ನು ಸರಿಗಟ್ಟಿತ್ತು. ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಕೊನೆಯ ಟಿ 20 ಪಂದ್ಯವನ್ನು ಗೆದ್ದು ಭಾರತ ತಮ್ಮ ಹೆಸರಿನಲ್ಲಿ ವಿಶ್ವದಾಖಲೆಯನ್ನು ಬರೆದುಕೊಂಡಿದೆ. ಇದು ಭಾರತದ 54ನೇ ಟಿ20 ಅಂತಾರಾಷ್ಟ್ರೀಯ ಜಯವಾಗಿಸಿದೆ. ಟೀಂ ಇಂಡಿಯಾ 74 ಪಂದ್ಯಗಳಲ್ಲಿ ಅಂದರೆ ಪಾಕಿಸ್ತಾನಕ್ಕಿಂತ 12 ಪಂದ್ಯಗಳನ್ನು ಕಡಿಮೆ ಆಡುವ ಮೂಲಕ ಈ ದಾಖಲೆ ಮಾಡಿದೆ.

ಭಾರತ ಮತ್ತು ಪಾಕಿಸ್ತಾನದ ನಂತರ ಆಸ್ಟ್ರೇಲಿಯಾ
ಭಾರತ ಮತ್ತು ಪಾಕಿಸ್ತಾನ ಹೊರತುಪಡಿಸಿ, ಆಸ್ಟ್ರೇಲಿಯ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗುರಿ ಬೆನ್ನಟ್ಟಿ ಅತಿ ಹೆಚ್ಚು ಗೆಲುವು ಸಾಧಿಸಿದೆ. ಈ ವಿಷಯದಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳ 91 ಪಂದ್ಯಗಳಲ್ಲಿ ಗುರಿ ಬೆನ್ನಟ್ಟಿದ ಅವರು 51ರಲ್ಲಿ ಗೆಲುವು ಸಾಧಿಸಿದ್ದಾರೆ. ಆಶಾದಾಯಕವಾಗಿ, ರೋಹಿತ್ ಶರ್ಮಾ ನಾಯಕತ್ವದಲ್ಲಿ, ಭಾರತ ತಂಡವು ಅದೇ ರೀತಿಯಲ್ಲಿ ಇನ್ನೂ ಕೆಲವು ಹೊಸ ಯಶಸ್ಸಿನ ಕಥೆಗಳನ್ನು ಬರೆಯುವುದನ್ನು ಕಾಣಬಹುದು.

ಇದನ್ನೂ ಓದಿ:IND vs SL: ದಾಖಲೆಗಳ ಸರದಾರ ರೋಹಿತ್! ಟಿ20 ಕ್ರಿಕೆಟ್​ನಲ್ಲಿ ಪಾಕ್​ ಕ್ರಿಕೆಟಿಗನ ದಾಖಲೆ ಮುರಿದ ಹಿಟ್​ಮ್ಯಾನ್