Shaheen Afridi: ರೋಹಿತ್ ಶರ್ಮಾ, ಸ್ಮಿತ್ ದಾಖಲೆ ಉಡೀಸ್: ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಬರೆದ ಶಹೀನ್ ಅಫ್ರೀದಿ
PSL 2022, Multan Sultans vs Lahore Qalandars: ಪಾಕಿಸ್ತಾನದಲ್ಲಿ ಮುಕ್ತಾಯಗೊಂಡ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಶಹೀನ್ ನಾಯಕತ್ವದ ಮುಲ್ತಾನ್ ಸುಲ್ತಾನ್ ತಂಡ ಟ್ರೋಫಿ ಎತ್ತಿ ಹಿಡಿದಿದೆ. ಈ ಮೂಲಕ 21 ವರ್ಷದ ಶಹೀನ್ ಅಫ್ರಿದಿ ವಿಶ್ವದ ಪ್ರಮುಖ ಟಿ20 ಕ್ರಿಕೆಟ್ ಲೀಗ್ ಟೂರ್ನಮೆಂಟ್ನಲ್ಲಿ ಪ್ರಶಸ್ತಿ ಗೆದ್ದ ಯುವ ನಾಯಕ ಎಂಬ ಸಾಧನೆ ಮಾಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಶಹೀನ್ ಅಫ್ರೀದಿ (Shaheen Afridi) ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದುಕೂಡ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಸ್ಟೀವ್ ಸ್ಮಿತ್ ಅವರ ದೊಡ್ಡ ದಾಖಲೆಯನ್ನೇ ಹಿಂದಿಕ್ಕಿ ಎಂಬುದು ವಿಶೇಷ. ಪಾಕಿಸ್ತಾನದಲ್ಲಿ ಮುಕ್ತಾಯಗೊಂಡ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ (PSL 2022) ಶಹೀನ್ ನಾಯಕತ್ವದ ಮುಲ್ತಾನ್ ಸುಲ್ತಾನ್ ತಂಡ ಟ್ರೋಫಿ ಎತ್ತಿ ಹಿಡಿದಿದೆ. ಈ ಮೂಲಕ 21 ವರ್ಷದ ಶಹೀನ್ ಅಫ್ರಿದಿ ವಿಶ್ವದ ಪ್ರಮುಖ ಟಿ20 ಕ್ರಿಕೆಟ್ ಲೀಗ್ ಟೂರ್ನಮೆಂಟ್ನಲ್ಲಿ ಪ್ರಶಸ್ತಿ ಗೆದ್ದ ಯುವ ನಾಯಕ ಎಂಬ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ 2012 ರ ಬಿಗ್ಬ್ಯಾಷ್ನಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ನಾಯಕನಾಗಿ ಸ್ಟೀವ್ ಸ್ಮಿತ್ 22 ವರ್ಷವಿದ್ದಾಗ ಪ್ರಶಸ್ತಿ ಗೆದ್ದಿದ್ದರು. ನಂತರ ರೋಹಿತ್ ಶರ್ಮಾ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ 2013 ರಲ್ಲಿ 26 ವರ್ಷಕ್ಕೆ ಟ್ರೋಫಿ ಎತ್ತಿ ಹಿಡಿದ ಸಾಧನೆ ಗೈದಿದ್ದರು.
ಇದೀಗ ಶಹೀನ್ ಅಫ್ರಿಕಾ ತಮ್ಮ 21ನೇ ವಯಸ್ಸಿನಲ್ಲಿ ಪ್ರಮುಖ ಟಿ20 ಲೀಗ್ ಪಂದ್ಯ ಗೆದ್ದ ನಾಯಕ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ನಾಯಕತ್ವದ ಮುಲ್ತಾನ್ ಸುಲ್ತಾನ್ ವಿರುದ್ಧ ನಡೆದ ಅಂತಿಮ ಫೈನಲ್ ಪಂದ್ಯದಲ್ಲಿ ಅಫ್ರಿದಿ ನಾಯಕತ್ವದ ಲಾಹೋರ್ ಖಲಂದರ್ಸ್ ತಂಡ 42 ರನ್ಗಳ ಭರ್ಜರಿ ಜಯ ಸಾಧಿಸಿ ಪಿಎಸ್ಎಲ್ 2022 ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಾಹೋರ್ ಖಲಂದರ್ಸ್ ಉತ್ತಮ ಆರಂಭ ಪಡೆದುಕೊಂಡಿಲ್ಲ. 25 ರನ್ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಫಖರ್ ಜಮಾನ್(3), ಶಫೀಕ್(14) ಮತ್ತು ಘೀಶಮ್ ಅಶ್ರಫ್ (7) ಬೇಗನೆ ಪೆವಿಲಿಯನ್ ಸೇರಿಕೊಂಡರು. ಕಮ್ರಾನ್ ಘುಲಾಂ 15 ರನ್ಗೆ ಔಟಾದರು. ಆದರೆ, ಮೊಹಮ್ಮದ್ ಹಫೀಜ್ ಹಾಗೂ ಹ್ಯಾರಿ ಬ್ರೂಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಹಫೀಜ್ 46 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ನೊಂದಿಗೆ ಅಜೇಯ 69 ರನ್ ಸಿಡಿಸಿದರು.
ಕೊನೇಯಲ್ಲಿ ಬ್ರೂಕ್ ಜೊತೆಯಾದ ಡೇವಿಡ್ ವೈಸ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಬ್ರೂಕ್ 22 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ನೊಂದಿಗೆ ಅಜೇಯ 41 ರನ್ ಬಾರಿಸಿದರೆ, ವೈಸ್ ಕೇವಲ 8 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ನೊಂದಿಗೆ ಅಜೇಯ 28 ರನ್ ಚಚ್ಚಿದರು. ಈ ಮೂಲಕ ಲಾಹೋರ್ ಖಲಂದರ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿತು.
ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಮುಲ್ತಾನ್ ಸುಲ್ತಾನ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಖುಷ್ದಿಲ್ ಶಾ 32 ರನ್ ಮತ್ತು ಟಿಮ್ ಡೇವಿಡ್ 27 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಸ್ಕೋರ್ 20ರ ಗಡಿ ದಾಟಲಿಲ್ಲ. ಪರಿಣಾಮ ಮುಲ್ತಾನ್ 19.3 ಓವರ್ನಲ್ಲಿ 138 ರನ್ಗೆ ಆಲೌಟ್ ಆಗುವ ಮೂಲಕ ಸೋಲಿಗೆ ಶರಣಾಯಿತು. ನಾಯಕ ಶಹೀನ್ ಅಫ್ರಿದಿ 3 ವಿಕೆಟ್ ಕಿತ್ತು ಮಿಂಚಿದರು. 42 ರನ್ಗಳ ಭರ್ಜರಿ ಜಯದೊಂದಿಗೆ ಲಾಹೋರ್ ಖಲಂದರ್ಸ್ ತಂಡ ಚೊಚ್ಚಲ ಬಾರಿಗೆ ಪಾಕಿಸ್ತಾನ ಸೂಪರ್ ಲೀಗ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.
Mayank Agarwal: ಮತ್ತೋರ್ವ ಕನ್ನಡಿಗನಿಗೆ ಕ್ಯಾಪ್ಟನ್ ಪಟ್ಟ: ಪಂಜಾಬ್ ಕಿಂಗ್ಸ್ಗೆ ಮಯಾಂಕ್ ಅಗರ್ವಾಲ್ ನಾಯಕ
IND vs SL T20: ಸರಣಿ ಗೆದ್ದ ಬಳಿಕ ರೋಹಿತ್ ಶರ್ಮಾ ಟ್ರೋಫಿ ನೀಡಿದ್ದು ಯಾರ ಕೈಗೆ ಗೊತ್ತೇ?: ಕೇಳಿದ್ರೆ ಶಾಕ್ ಆಗ್ತೀರಾ