Mayank Agarwal: ಮತ್ತೋರ್ವ ಕನ್ನಡಿಗನಿಗೆ ಕ್ಯಾಪ್ಟನ್ ಪಟ್ಟ: ಪಂಜಾಬ್ ಕಿಂಗ್ಸ್ಗೆ ಮಯಾಂಕ್ ಅಗರ್ವಾಲ್ ನಾಯಕ
Punjab Kings Captain: ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ನೂತನ ನಾಯಕನ ಹೆಸರು ಘೋಷಣೆ ಮಾಡಿದೆ. ಭಾರತ ತಂಡದ ಆರಂಭಿಕ ಬ್ಯಾಟರ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಕಳೆದ ಕೆಲವು ದಿನಗಳಿಂದ ಬಾರಿ ಸುದ್ದಿಯಾಗುತ್ತಿದ್ದ ಪಂಜಾಬ್ ಕಿಂಗ್ಸ್ (Punjab Kings) ತಂಡದ ನೂತನ ನಾಯಕ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ನೂತನ ನಾಯಕನ ಹೆಸರು ಘೋಷಣೆ ಮಾಡಿದೆ. ಭಾರತ ತಂಡದ ಆರಂಭಿಕ ಬ್ಯಾಟರ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ ಪಂಜಾಬ್ ಕೆಎಲ್ ರಾಹುಲ್ ಬಳಿಕ ಇದೀಗ ಮತ್ತೋರ್ವ ಕನ್ನಡಿಗನಿಗೆ ಕ್ಯಾಪ್ಟನ್ ಪಟ್ಟ ನೀಡಿದೆ. ಇದಕ್ಕೂ ಮುನ್ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 8.25 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದ ಶಿಖರ್ ಧವನ್ ಅವರಿಗೆ ಪಂಜಾಬ್ ತಂಡದ ನಾಯಕತ್ವವನ್ನು ನೀಡಲಾಗುವುದು ಎನ್ನಲಾಗುತ್ತಿತ್ತು. ಆದರೀಗ ಎಲ್ಲ ಗೊಂದಲಗಳಿಗೆ ತೆರೆಬಿದ್ದಿದ್ದು, ಮಯಾಂಕ್ ಐಪಿಎಲ್ 2022 (IPL 2022) ರಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಲಿದ್ದಾರೆ. ಮಯಾಂಕ್ ಅಗರ್ವಾಲ್ ಪಂಜಾಬ್ ತಂಡದ ಪರ ಸ್ಥಿರ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದಾರೆ. 15ನೇ ಆವೃತ್ತಿಯ ಹರಾಜಿಗೂ ಮುನ್ನ ಮಯಾಂಕ್ರನ್ನು ಫ್ರಾಂಚೈಸಿ ರೀಟೈನ್ ಮಾಡಿಕೊಂಡಿತ್ತು.
? Attention #SherSquad ?
Our ?© ➜ Mayank Agarwal
Send in your wishes for the new #CaptainPunjab ?#SaddaPunjab #PunjabKings #TATAIPL2022 @mayankcricket pic.twitter.com/hkxwzRyOVA
— Punjab Kings (@PunjabKingsIPL) February 28, 2022
ಭಾರತ ಟೆಸ್ಟ್ ತಂಡದ ಖಾಯಂ ಆರಂಭಿಕ ಬ್ಯಾಟರ್ ಅಗಿರುವ ಮಯಾಂಕ್ ಅಗರ್ವಾಲ್ ಮತ್ತು ಯುವ ವೇಗಿ ಅರ್ಶದೀಪ್ ಸಿಂಗ್ ಅವರನ್ನು ಮಾತ್ರಾ ಪಂಜಾಬ್ ಕಿಂಗ್ಸ್ ಮೆಗಾ ಹರಾಜಿಗೂ ಮುನ್ನ ರಿಟೈನ್ ಮಾಡಿಕೊಂಡಿತ್ತು. ಈ ಹಿಂದಿನ ಆವೃತ್ತಿಯಲ್ಲಿ ರಾಹುಲ್ ಗಾಯಗೊಂಡಾಗ ಒಂದೆರಡು ಪಂದ್ಯಗಳಲ್ಲಿ ಮಯಾಂಕ್ ತಂಡವನ್ನು ಮುನ್ನಡೆಸಿದ್ದಾರೆ. 31 ವರ್ಷದ ಕರ್ನಾಟಕ ಬ್ಯಾಟರ್ 2011ರ ಐಪಿಎಲ್ನಿಂದ ಅವರು 100 ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಇದೀಗ ಹೊಸ ನಾಯಕತ್ವದಲ್ಲಿ ಪಂಜಾಬ್‌ಗೆ ಟ್ರೋಫಿ ಗೆಲ್ಲಲು ಸಾಧ್ಯವೇ ಎಂಬುದನ್ನು ಕಾದು ನೋಡಬೇಕಿದೆ. 2014ರಲ್ಲಿ ರನ್ನರ್-ಅಪ್ ಪ್ರಶಸ್ತಿ ಗೆದ್ದಿರುವುದು ತಂಡದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ.
ಈ ಬಾರಿಯ ಹರಾಜಿನಲ್ಲಿ ಹೆಚ್ಚು ಹಣದೊಂದಿಗೆ ಭಾಗವಹಿಸಿದ್ದ ಪಂಜಾಬ್ ಅತ್ಯುತ್ತಮ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಕಗಿಸೊ ರಬಾಡ, ಒಡಿಯನ್ ಸ್ಮಿತ್ ಹಾಗೂ ಎಡಗೈ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ ಮತ್ತು ತಮಿಳು ನಾಡಿನ ಸ್ಫೋಟಕ ಬ್ಯಾಟರ್ ಶಾರುಖ್ ಖಾನ್ರನ್ನು ತಂಡಕ್ಕೆ ಬರಮಾಡಿಕೊಂಡಿದೆ.
ಪಂಜಾಬ್ ತಂಡ:
ಮಯಾಂಕ್ ಅಗರ್ವಾಲ್ (ನಾಯಕ), ಅರ್ಶ್ದೀಪ್ ಸಿಂಗ್, ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ರಾಹುಲ್ ಚಾಹರ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಓಡಿಯನ್ ಸ್ಮಿತ್, ಸಂದೀಪ್ ಶರ್ಮಾ, ರಾಜ್ ಬಾವಾ, ಪ್ರೀರಾಕ್ ಮಾನ್ಕಾ , ವೈಭವ್ ಅರೋರಾ, ರಿಟಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅನ್ಶ್ ಪಟೇಲ್, ನಾಥನ್ ಎಲ್ಲಿಸ್, ಅಥರ್ವ ತೈದೆ, ಭಾನುಕಾ ರಾಜಪಕ್ಸೆ, ಬೆನ್ನಿ ಹೋವೆಲ್.
IND vs SL T20: ಸರಣಿ ಗೆದ್ದ ಬಳಿಕ ರೋಹಿತ್ ಶರ್ಮಾ ಟ್ರೋಫಿ ನೀಡಿದ್ದು ಯಾರ ಕೈಗೆ ಗೊತ್ತೇ?: ಕೇಳಿದ್ರೆ ಶಾಕ್ ಆಗ್ತೀರಾ
Rohit Sharma: ವೈಟ್ವಾಷ್ ಖುಷಿಯಲ್ಲಿ ರೋಹಿತ್ ಶರ್ಮಾರಿಂದ ನಾಯಕನ ಮಾತು: ಏನಂದ್ರು ಕೇಳಿ
Published On - 11:20 am, Mon, 28 February 22