Rohit Sharma: ವೈಟ್​ವಾಷ್ ಖುಷಿಯಲ್ಲಿ ರೋಹಿತ್ ಶರ್ಮಾರಿಂದ ನಾಯಕನ ಮಾತು: ಏನಂದ್ರು ಕೇಳಿ

IND vs SL 3rd T20: ಭಾರತೀಯ ನೆಲದಲ್ಲಿ ಶ್ರೀಲಂಕಾ ಮತ್ತೊಮ್ಮೆ ಸರಣಿ ಸೋತು ಭಾರೀ ಮುಖಬಂಗಕ್ಕೆ ಒಳಗಾಯಿತು. ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸರಣಿ ಗೆದ್ದ ಖಷಿಯಲ್ಲಿ ಏನು ಮಾತನಾಡಿದರು ಎಂಬುದನ್ನು ನೋಡಿ.

Rohit Sharma: ವೈಟ್​ವಾಷ್ ಖುಷಿಯಲ್ಲಿ ರೋಹಿತ್ ಶರ್ಮಾರಿಂದ ನಾಯಕನ ಮಾತು: ಏನಂದ್ರು ಕೇಳಿ
Rohit Sharma post-match presentation IND vs SL 3rd T20
Follow us
TV9 Web
| Updated By: Vinay Bhat

Updated on: Feb 28, 2022 | 9:04 AM

ಟಿ20 ಕ್ರಿಕೆಟ್​ನಲ್ಲಿ ತವರಿನಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಟೀಮ್ ಇಂಡಿಯಾ (Team India) ಸತತ ಮೂರನೇ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧನೆ ಮಾಡಿದೆ. ಪ್ರವಾಸಿ ಶ್ರೀಲಂಕಾ ತಂಡದ ಎದುರು ಮತ್ತೊಮ್ಮೆ ಅಬ್ಬರಿಸಿ ಬೊಬ್ಬಿರಿದ ರೋಹಿತ್ ಶರ್ಮ (Rohit Sharma) ಬಳಗ 6 ವಿಕೆಟ್​ಗಳಿಂದ ಗೆದ್ದು ಬೀಗಿತು. ಶ್ರೇಯಸ್ ಅಯ್ಯರ್ (Shreyas Iyer) 45 ಎಸೆತಗಳಲ್ಲಿ 1 ಸಿಕ್ಸರ್, 9 ಬೌಂಡರಿ ಸಿಡಿಸಿ ಅಜೇಯ 73 ರನ್​ಗಳ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಜಯ ಸಾಧಿಸಿ ಸತತ 12ನೇ ಗೆಲುವಿನ ವಿಶ್ವದಾಖಲೆ ಸರಿಗಟ್ಟಿತು. ಅಚ್ಚರಿ ಎಂದರೆ ಇದರಲ್ಲಿ ಕೊನೇ 9 ಗೆಲುವು ರೋಹಿತ್ ಶರ್ಮ ನಾಯಕತ್ವದಲ್ಲಿ ಎಂಬುದು ವಿಶೇಷ. ಈ ಮೂಲಕ ಹಿಟ್​ಮ್ಯಾನ್ ದಾಖಲೆಯನ್ನೂ ಬರೆದಿದ್ದಾರೆ. ಭಾರತೀಯ ನೆಲದಲ್ಲಿ ಶ್ರೀಲಂಕಾ ಮತ್ತೊಮ್ಮೆ ಸರಣಿ ಸೋತು ಭಾರೀ ಮುಖಬಂಗಕ್ಕೆ ಒಳಗಾಯಿತು. ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸರಣಿ ಗೆದ್ದ ಖಷಿಯಲ್ಲಿ ಏನು ಮಾತನಾಡಿದರು ಎಂಬುದನ್ನು ನೋಡಿ.

“ನಾನು ಅತ್ಯುತ್ತಮ ಆಟ ಪ್ರದರ್ಶಿಸಿದ್ದೇವೆ. ಈ ಸರಣಿ ಗೆಲುವಿನಿಂದ ಅನೇಕ ಪಾಸಿಟಿವ್ ವಿಚಾರಗಳು ಬೆಳಕಿಗೆ ಬಂದಿವೆ. ನಮ್ಮಲ್ಲಿ ಯಾವತೀತಿಯ ಬೆಂಚ್ ಸ್ಟ್ರೆಂತ್ ಇದೆ ಎಂಬುದನ್ನು ಅರಿತುಕೊಂಡಿದ್ದೇವೆ. ಎಲ್ಲ ಆಟಗಾರರಿಗೆ ಅವಕಾಶ ನೀಡಿರುವುದು ಖುಷಿ ನೀಡಿದೆ. ತಂಡದಲ್ಲಿ ಆಟಗಾರರಿಗೆ ನಿಮ್ಮ ಸ್ಥಾನ ಏನು ಮತ್ತು ಆ ಸ್ಥಾನದ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ಎಂಬುದು ತಿಳಿ ಹೇಳುವುದು ಮುಖ್ಯ. ನಮ್ಮಲ್ಲಿ ಏನು ಲೋಪಗಳಿತ್ತು ಅದೀಗ ಪೂರ್ತಿಯಾಗಿದೆ. ಇದನ್ನೆ ತಲೆಯಲ್ಲಿ ಇಟ್ಟುಕೊಂಡು ಮುಂದೆ ಸಾಗುತ್ತೇವೆ. ಮುಂದೆ ದೊಡ್ಡ ಸವಾಲುಗಳಿವೆ ಆದರೆ, ಆಟಗಾರರು ಫಾರ್ಮ್​ನಲ್ಲಿರುವುದು ಒಳ್ಳೆಯ ವಿಚಾರ. ಮೊಹಾಲಿಗೆ ತಲುಪಿದ ತಕ್ಷಣ ಟೆಸ್ಟ್ ಸರಣಿ ಬಗ್ಗೆ ಯೋಚಿಸಬೇಕಿದೆ,” ಎಂದು ಹೇಳಿದ್ದಾರೆ.

ಇನ್ನು ಮೂರು ಟಿ20 ಪಂದ್ಯಗಳಲ್ಲಿ ಮೂರು ಅರ್ಧಶತಕ ಸಿಡಿಸಿ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಬಾಜಿಕೊಂಡ ಶ್ರೇಯಸ್ ಅಯ್ಯರ್ ಮಾತನಾಡಿದ್ದು, “ಈ ಮೂರು ಅರ್ಧಶತಕ ನನ್ನ ಪಾಲಿಗೆ ತುಂಬಾನೆ ಸ್ಪೆಷಲ್. ಅದರಲ್ಲೂ ದ್ವಿತೀಯ ಟಿ20 ಯಲ್ಲಿ ಆಡಿದ ಆಟ ನನಗೆ ತುಂಬಾ ಇಷ್ಟವಾಯಿತು. ಚೆಂಡನ್ನು ಚೆನ್ನಾಗಿ ಗಮನಿಸಬೇಕು ಮತ್ತು ಅದಕ್ಕೆ ಯಾವ ಹೊಡೆತ ಆಯ್ಕೆ ಮಾಡಬೇಕು ಎಂಬ ಅರಿವು ಇರುವವರಿಗೆ ಫಾರ್ಮ್​ಗೆ ಬರಲು ಕೇವಲ ಒಂದು ಚೆಂಡು ಸಾಕಷ್ಟೆ. ಎರಡನೇ ಪಂದ್ಯಕ್ಕಿಂತ ಈ ಪಂದ್ಯಕ್ಕೆ ವಿಕೆಟ್ ಕೊಂಚ ಬದಲಾವಣೆ ಇತ್ತು. ಔಟ್​ಫೀಲ್ಡ್ ವೇಗವಾಗಿದ್ದ ಕಾರಣ ಗ್ಯಾಪ್​ನಲ್ಲಿ ಹೊಡೆಯಲು ಸುಲಭವಾಗಿತ್ತು. ಇಂಜುರಿ ಬಳಿಕ ಕಮ್​ಬ್ಯಾಕ್ ಮಾಡಿರುವುದು ಸಂತಸ ನೀಡಿದೆ,” ಎಂದು ಹೇಳಿದರು.

ಇನ್ನು ಇದೇವೇಳೆ ಶ್ರೀಲಂಕಾ ನಾಯಕ ಶನಕ ಮಾತನಾಡಿ, “ಅದ್ಭುತ ಪ್ರದರ್ಶನ ತೋರಿದ ಭಾರತ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಹಿರಿಯ ಬೌಲರ್​ಗಳು ಇಲ್ಲದ ಕಾರಣ ಈ ಸರಣಿ ನಮಗೆ ಕಷ್ಟವಾಯಿತು. ಮೊದಲ 6 ಓವರ್​ಗಳಲ್ಲಿ ನಾವು ಬ್ಯಾಟಿಂಗ್​ ಮಾಡುವಾಗ ಉತ್ತಮ ಪ್ರದರ್ಶನ ತೋರಲಿಲ್ಲ. ಕಳೆದ ವರ್ಷಕ್ಕಿಂತ ವೇಗಿಗಳು ಉತ್ತಮ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್. ನಾವು ಕಂಡೀಷನ್ ಬಗ್ಗೆ ದೂರಲು ಸಾಧ್ಯವಿಲ್ಲ. ಸಂದರ್ಭಕ್ಕೆ ತಕ್ಕಂತೆ ಆಟವಾಡುವ ಸಾಮರ್ಥ್ಯ ನಮ್ಮಲ್ಲಿರಬೇಕು,” ಎಂದು ನುಡಿದರು.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದರೆ, ಭಾರತ 16.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿ ಗೆಲುವು ಕಂಡಿತು.

IND vs SL 3rd T20: ಸತತ 12ನೇ ಟಿ20 ಪಂದ್ಯ ಗೆದ್ದು ಬೀಗಿದ ಭಾರತ: ನಾಯಕ ರೋಹಿತ್​ರಿಂದ ದಾಖಲೆ ಮೇಲೆ ದಾಖಲೆ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ