IND vs WI: ಅರ್ಷದೀಪ್ ಸಿಂಗ್ 2 ವಿಕೆಟ್ ಪಡೆದ ಆ ಓವರ್ ಟೀಂ ಇಂಡಿಯಾ ಸೋಲಿಗೆ ಕಾರಣವಾಯ್ತು..!
Arshdeep Singh: ಮೇಲ್ನೋಟಕ್ಕೆ ಹಾರ್ದಿಕ್ ಪಡೆಯ ಸೋಲಿಗೆ ತಂಡದ ಹೀನಾಯ ಬ್ಯಾಟಿಂಗ್ ಪ್ರದರ್ಶನವೇ ಕಾರಣವಾಗಿದ್ದರೂ, ಬೌಲಿಂಗ್ನಲ್ಲಿ ಅರ್ಷದೀಪ್ ಸಿಂಗ್ ಬೌಲ್ ಮಾಡಿದ 19ನೇ ಓವರ್ ಕೂಡ ಒಂದರ್ಥದಲ್ಲಿ ಕಾರಣವಾಯ್ತು.
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವುದರೊಂದಿಗೆ ಎರಡೂ ಸರಣಿಯಲ್ಲೂ ಶುಭಾರಂಭ ಮಾಡಿದ್ದ ಟೀಂ ಇಂಡಿಯಾಕ್ಕೆ (India vs West Indies), ಟಿ20 ಸರಣಿಯಲ್ಲಿ ನಿರೀಕ್ಷಿತ ಶುಭಾರಂಭ ಸಿಗಲಿಲ್ಲ. ಟ್ರಿನಿಡಾಡ್ನ ಬ್ರಿಯಾನ್ ಲಾರಾ ಮೈದಾನದಲ್ಲಿ (Brian Lara Stadium, Trinidad) ನಡೆದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ 150 ರನ್ಗಳ ಸುಲಭ ಗುರಿ ಬೆನ್ನಟ್ಟುವಲ್ಲಿ ಎಡವಿದ ಭಾರತ 4 ರನ್ಗಳ ಸೋಲು ಅನುಭವಿಸುವಂತ್ತಾಗಿದೆ. ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಟೀಂ ಇಂಡಿಯಾ (Team India), ವಿಂಡೀಸ್ ದಾಂಡಿಗರನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಆದರೆ ಈ ಗುರಿ ಬೆನ್ನಟ್ಟಿದ ಯುವ ಪಡೆಗೆ ಸುಲಭ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಮೇಲ್ನೋಟಕ್ಕೆ ಹಾರ್ದಿಕ್ ಪಡೆಯ ಸೋಲಿಗೆ ತಂಡದ ಹೀನಾಯ ಬ್ಯಾಟಿಂಗ್ ಪ್ರದರ್ಶನವೇ ಕಾರಣವಾಗಿದ್ದರೂ, ಬೌಲಿಂಗ್ನಲ್ಲಿ ಅರ್ಷದೀಪ್ ಸಿಂಗ್ (Arshdeep Singh) ಬೌಲ್ ಮಾಡಿದ 19ನೇ ಓವರ್ ಕೂಡ ಒಂದರ್ಥದಲ್ಲಿ ಕಾರಣವಾಯ್ತು.
ಹಳೆಯ ತಪ್ಪನ್ನು ತಿದ್ದಿಕೊಳ್ಳದ ಅರ್ಷದೀಪ್
ವಾಸ್ತವವಾಗಿ ಈ ಐದು ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ ಹಿರಿಯ ಆಟಗಾರರು ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಹಲವು ಯುವ ಪ್ರತಿಭೆಗಳಿಗೆ ಈ ಸರಣಿಯಲ್ಲಿ ಅವಕಾಶ ನೀಡಲಾಗುತ್ತಿದೆ. ನಿರೀಕ್ಷೆಯಂತೆ ಮೊದಲ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಮತ್ತು ಮುಖೇಶ್ ಕುಮಾರ್ಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಈ ಇಬ್ಬರು ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಆದರೆ ಟೀಂ ಇಂಡಿಯಾದಲ್ಲಿ ಹಲವು ಅವಕಾಶಗಳ ಹೊರತಾಗಿಯೂ ಡೆತ್ ಓವರ್‌ನಲ್ಲಿ ತಪ್ಪಿನ ಮೇಲೆ ತಪ್ಪುಗಳನ್ನು ಮಾಡುತ್ತಿರುವ ಅರ್ಷದೀಪ್ ಸಿಂಗ್ ಮಾತ್ರ ತಮ್ಮ ಹಳೆಯ ತಪ್ಪನ್ನು ತಿದ್ದಿಕೊಳ್ಳುವ ಗೊಜಿಗೆ ಹೊದಂತೆ ತೋರುತ್ತಿಲ್ಲ.
IND vs SL: ಹ್ಯಾಟ್ರಿಕ್ ನೋಬಾಲ್, ಒಂದೇ ಎಸೆತದಲ್ಲಿ 14 ರನ್! ಬೇಡದ ವಿಶ್ವ ದಾಖಲೆ ಬರೆದ ಅರ್ಷದೀಪ್ ಸಿಂಗ್
ವಾಸ್ತವವಾಗಿ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಟೀಂ ಇಂಡಿಯಾ ವೇಗಿಗಳು ಆರಂಭದಿಂದಲೂ ಸುಲಭವಾಗಿ ರನ್ ಕಲೆಹಾಕಲು ಅವಕಾಶ ನೀಡಲಿಲ್ಲ. ಆಗಾಗ್ಗೆ ವಿಂಡೀಸ್ ಪಡೆಯ ವಿಕೆಟ್ ಉರುಳಿಸುತ್ತ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಟೀಂ ಇಂಡಿಯಾ ಯುವ ಪಡೆ ಯಶಸ್ವಿ ಕೂಡ ಆಯಿತು. ಆದರೆ ಅರ್ಷದೀಪ್ ಸಿಂಗ್ ಬೌಲ್ ಮಾಡಿದ 19ನೇ ಓವರ್ ಟೀಂ ಇಂಡಿಯಾ ಪಾಲಿಗೆ ಸೋಲಿನ ದುಸ್ವಪ್ನವಾಯಿತು.
ಒಂದು ಓವರ್‌ನಲ್ಲಿ 10 ಎಸೆತಗಳು
ವಾಸ್ತವವಾಗಿ, 18 ನೇ ಓವರ್ ಆಗುವಷ್ಟರಲ್ಲಿ ವೆಸ್ಟ್ ಇಂಡೀಸ್ ತಂಡ 4 ವಿಕೆಟ್ ಕಳೆದುಕೊಂಡು 134 ರನ್ ಕಲೆಹಾಕಿತ್ತು. ಇದಾದ ನಂತರ 19ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಅರ್ಷದೀಪ್‌ಗೆ ನೀಡಲಾಯಿತು. ಆದರೆ ಡೆತ್ ಓವರ್ಗಳಲ್ಲಿ ಸತತ ವೈಡ್ ಹಾಗೂ ನೋ ಬಾಲ್ಗಳಿಗೆ ಹೆಸರುವಾಸಿಯಾಗಿರುವ ಅರ್ಷದೀಪ್, ಈ ಪಂದ್ಯದಲ್ಲೂ ತಮ್ಮ 6 ಎಸೆತದ ಓವರ್‌ನಲ್ಲಿ ಒಟ್ಟು 10 ಎಸೆತಗಳನ್ನು ಎಸೆದರು. ಇದರಲ್ಲಿ ಬರೋಬ್ಬರಿ 4 ವೈಡ್‌ಗಳನ್ನು ಬೌಲ್ ಮಾಡಿದರು. ಇದರಲ್ಲಿ ಇನ್ನೊಂದು ಬೇಸರದ ಸಂಗತಿಯೆಂದರೆ, ತಮ್ಮ ಓವರ್ನ ಮೊದಲ ಎಸೆತದಲ್ಲೇ ಸ್ಫೋಟಕ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ನ್ನು ಬಲಿ ಹಾಕಿದ ಅರ್ಷದೀಪ್ ಸಿಂಗ್, ವಿಂಡೀಸ್ ಬೌಲರ್ ರೊಮಾರಿಯೋ ಶೆಫರ್ಡ್ ಎದುರು 4 ವೈಡ್ ಬಾಲ್ ಎಸೆದಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯ್ತು.
2 ವಿಕೆಟ್ ಕೂಡ ಪಡೆದರು
ಅರ್ಷದೀಪ್ ಸಿಂಗ್ ಎಸೆದ 19ನೇ ಓವರ್‌ನಲ್ಲಿ 4 ವೈಡ್ ಬಂದ ಹೊರತಾಗಿಯೂ, ಈ ಓವರ್‌ನಲ್ಲಿ ಅವರು ಶಿಮ್ರಾನ್ ಹೆಟ್ಮೆಯರ್ ಮತ್ತು ರೋವ್‌ಮನ್ ಪೊವೆಲ್ ಅವರನ್ನು ಸಹ ಔಟ್ ಮಾಡಿದರು. ಆದರೆ ಫೆಬ್ರುವರಿ ನಂತರ ಟೀಂ ಇಂಡಿಯಾಕ್ಕೆ ವಾಪಸಾದ ಅರ್ಷದೀಪ್ ಸಿಂಗ್ ಎಸೆದ ಆ ದುಬಾರಿ 4 ವೈಡ್ಗಳು ಟೀಂ ಇಂಡಿಯಾವನ್ನು ಸೋಲಿನ ದವಡೆಗೆ ಥಳಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:07 am, Fri, 4 August 23