IND vs WI: ಟೆಸ್ಟ್, ಏಕದಿನದ ಬಳಿಕ ಟಿ20 ಸರಣಿಯಲ್ಲೂ ಸೂರ್ಯ- ಗಿಲ್ ಫ್ಲಾಪ್

IND vs WI: ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರನ್ ಬರ ಎದುರಿಸುತ್ತಿರುವ ಸ್ಟಾರ್ ಬ್ಯಾಟರ್​ಗಳಾದ ಶುಭ್​ಮನ್ ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ಟಿ20 ಸರಣಿಯಲ್ಲೂ ತಮ್ಮ ಕಳಪೆ ಆಟವನ್ನು ಮುಂದುವರೆಸಿದ್ದಾರೆ.

IND vs WI: ಟೆಸ್ಟ್, ಏಕದಿನದ ಬಳಿಕ ಟಿ20 ಸರಣಿಯಲ್ಲೂ ಸೂರ್ಯ- ಗಿಲ್ ಫ್ಲಾಪ್
ಶುಭ್​ಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್
Follow us
ಪೃಥ್ವಿಶಂಕರ
|

Updated on:Aug 04, 2023 | 8:08 AM

ಪ್ರಸ್ತುತ ವೆಸ್ಟ್ ಇಂಡೀಸ್‌ ಪ್ರವಾಸದಲ್ಲಿರುವ ಟೀಂ ಇಂಡಿಯಾ (India vs West Indies) ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಆಡಿ ಮುಗಿಸಿದ ಬಳಿಕ ಇದೀಗ ಟಿ20 ಸರಣಿಯನ್ನು ಆಡುತ್ತಿದೆ. ಈ ಪ್ರವಾಸದಲ್ಲಿ ಈಗಾಗಲೇ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಗೆದ್ದು ಬೀಗಿರುವ ಭಾರತ ತಂಡಕ್ಕೆ ಟಿ20 ಸರಣಿಯಲ್ಲಿ ಮಾತ್ರ ಶುಭಾರಂಭ ಸಿಕ್ಕಿಲ್ಲ. ಆಡಿದ ಮೊದಲ ಪಂದ್ಯದಲ್ಲೇ 4 ರನ್​ಗಳ ಸೋಲನುಭವಿಸಿರುವ ಹಾರ್ದಿಕ್ (Hardik Pandya) ಪಡೆ ಐದು ಪಂದ್ಯಗಳ ಸರಣಿಯಲ್ಲಿ 0-1 ಅಂತರದಿಂದ ಹಿನ್ನಡೆ ಅನುಭವಿಸಿದೆ. ಪಂದ್ಯ ಆರಂಭದಿಂದಲೂ ಗೆಲುವಿನ ಸೀಟ್​ನಲ್ಲಿದ್ದ ಟೀಂ ಇಂಡಿಯಾದ ಸೋಲಿಗೆ ತಂಡದ ಬ್ಯಾಟರ್​ಗಳು ಕೈಕೊಟ್ಟಿದ್ದೆ ಪ್ರಮುಖ ಕಾರಣವಾಯ್ತು. ಅದರಲ್ಲೂ ಟಿ20 ಸ್ಪೆಷಲಿಸ್ಟ್​ಗಳೇ ತಂಡದಲ್ಲಿದ್ದರು ವೆಸ್ಟ್ ಇಂಡೀಸ್ ನೀಡಿದ 150 ರನ್​ಗಳ ಅಲ್ಪ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಆದರೆ ಟಿ20 ಸರಣಿಯಲ್ಲಿ ಚೊಚ್ಚಲ ಅವಕಾಶ ಪಡೆದ ಯುವ ಆಟಗಾರರು ತಂಡದ ಪರ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರೆ ಮತ್ತೊಂದೆಡೆ ಇಡೀ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರನ್ ಬರ ಎದುರಿಸುತ್ತಿರುವ ಸ್ಟಾರ್ ಬ್ಯಾಟರ್​ಗಳಾದ ಶುಭ್​ಮನ್ ಗಿಲ್ (shubman gill) ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಟಿ20 ಸರಣಿಯಲ್ಲೂ ತಮ್ಮ ಕಳಪೆ ಆಟವನ್ನು ಮುಂದುವರೆಸಿದ್ದಾರೆ.

ವಾಸ್ತವವಾಗಿ ಎರಡು ತಿಂಗಳ ಹಿಂದಷ್ಟೆ ನಡೆದ ಐಪಿಎಲ್​ನಲ್ಲಿ ರನ್​ಗಳ ಶಿಖರ್ ಕಟ್ಟಿದ್ದ ಈ ಇಬ್ಬರು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಾತ್ರ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಅದರಲ್ಲೂ ಈ ಬಾರಿಯ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದ ಶುಭ್​ಮನ್ ಗಿಲ್ ಆ ಬಳಿಕ ತಮ್ಮ ಲಯ ಕಳೆದುಕೊಂಡಂತೆ ತೋರುತ್ತಿದೆ. ಇನ್ನ ಐಪಿಎಲ್​ನಲ್ಲಿ ಮುಂಬೈ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಸೂರ್ಯ, ಎಂದಿನಂತೆ ಟೀಂ ಇಂಡಿಯಾ ಪರ ತಮ್ಮ ಕಳಪೆ ಫಾರ್ಮ್​ ಮುಂದುವರೆಸಿದ್ದಾರೆ. ಈ ಇಬ್ಬರು ಬ್ಯಾಟರ್​ಗಳ ದಯನೀಯ ಪ್ರದರ್ಶನ ಟೀಂ ಇಂಡಿಯಾಕ್ಕೆ ಇದೀಗ ಹೊಸ ತಲೆನೋವು ತಂದೊಡ್ಡಿದೆ. ಏಕೆಂದರೆ ಈ ಪ್ರವಾಸ ಮುಗಿದ ಬಳಿಕ ಭಾರತ ತಂಡ ಏಷ್ಯಾಕಪ್ ಹಾಗೂ ವಿಶ್ವಕಪ್ ಆಡಬೇಕಿದೆ.

WTC Final 2023: ನಿರೀಕ್ಷೆ ಹುಸಿಗೊಳಿಸಿದ ಐಪಿಎಲ್ ಹೀರೋ ಶುಭ್​ಮನ್ ಗಿಲ್

ಮೂರು ಸ್ವರೂಪದಲ್ಲೂ ಗಿಲ್ ಫೇಲ್

ವಾಸ್ತವವಾಗಿ ಕಳೆದೊಂದು ವರ್ಷದಿಂದ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ಶುಭ್​ಮನ್ ಅವರಿಂದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಪ್ರಬಲ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಅವರ ಫಾರ್ಮ್‌ನ ಹೊರತಾಗಿ ವಿಂಡೀಸ್ ಕ್ರಿಕೆಟ್‌ನ ಕಳಪೆ ಪ್ರದರ್ಶನವೂ ಇದಕ್ಕೆ ಸಾಕ್ಷಿಯಾಗಿತ್ತು. ಆದರೆ ಇಲ್ಲಿಯವರೆಗೆ ಶುಭ್​ಮನ್ ದೊಡ್ಡ ಪರಿಣಾಮ ಬೀರಲು ವಿಫಲರಾಗಿದ್ದಾರೆ. ಈ ಪ್ರವಾಸದಲ್ಲಿ ಎಲ್ಲಾ ಮೂರು ಸರಣಿಗಳಲ್ಲಿ ತಂಡದ ಭಾಗವಾಗಿರುವ ಗಿಲ್ ಒಂದು ಇನ್ನಿಂಗ್ಸ್ ಹೊರತುಪಡಿಸಿ ಯಾವುದೇ ಪ್ರಮುಖ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ.

29ರ ಸರಾಸರಿಯಲ್ಲಿ 174 ರನ್

ಗಿಲ್ ಟೆಸ್ಟ್ ಸರಣಿಯ ಮೂರು ಇನ್ನಿಂಗ್ಸ್‌ಗಳಲ್ಲಿ 6, 10 ಮತ್ತು 29 (ಔಟಾಗದೆ) ಗಳಿಸಿದರು. ಬಳಿಕ ಮೊದಲ ಮತ್ತು ಎರಡನೇ ಏಕದಿನ ಪಂದ್ಯದಲ್ಲಿ ಅವರ ಬ್ಯಾಟ್​ನಿಂದ ಕೇವಲ 7 ಮತ್ತು 34 ರನ್ ಬಂದಿದ್ದವು. ಆದರೆ ಮೂರನೇ ಏಕದಿನ ಪಂದ್ಯದಲ್ಲಿ ಹಳೆಯ ಲಯಕ್ಕೆ ಮರಳಿದ್ದ ಗಿಲ್, 85 ರನ್‌ಗಳ ಪ್ರಬಲ ಇನ್ನಿಂಗ್ಸ್ ಆಡಿದ್ದರು. ಇದೀಗ ಮೊದಲ ಟಿ20 ಪಂದ್ಯದಲ್ಲಿ ಮತ್ತೆ ಲಯ ಕಳೆದುಕೊಂಡಿರುವ ಗಿಲ್, 3 ರನ್ ಗಳಿಸಲಷ್ಟೇ ಶಕ್ತರಾದರು. ಅಂದರೆ, ಗಿಲ್ ಆಡಿರುವ 7 ಇನ್ನಿಂಗ್ಸ್‌ಗಳಲ್ಲಿ 29ರ ಸರಾಸರಿಯಲ್ಲಿ 174 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಮತ್ತೆ ಮಂಕಾದ ಸೂರ್ಯ

ಮತ್ತೊಂದೆಡೆ , ಸೂರ್ಯಕುಮಾರ್ ಯಾದವ್ ಕೂಡ ಏಕದಿನ ಮಾದರಿಯಲ್ಲಿ ತಮ್ಮ ಕಳಪೆ ಪ್ರದರ್ಶನವನ್ನು ಈ ಸರಣಿಯಲ್ಲೂ ಮುಂದುವರೆಸಿದರು. ವಿಂಡೀಸ್ ವಿರುದ್ಧ ಆಡಿದ ಮೂರು ಏಕದಿನ ಪಂದ್ಯಗಳಲ್ಲಿ ಸೂರ್ಯ 19, 24 ಮತ್ತು 35 ರನ್ ಗಳಿಸಿದ್ದರು. ಈ ವೈಫಲ್ಯದ ನಂತರ, ತಮ್ಮ ನೆಚ್ಚಿನ ಟಿ20 ಸ್ವರೂಪದಲ್ಲಿ ಸೂರ್ಯ ಅಬ್ಬರಿಸಲ್ಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೊದಲ ಟಿ20 ಪಂದ್ಯದಲ್ಲಿ ಕೇವಲ 21 ರನ್ ಕಲೆಹಾಕಿದ ಸೂರ್ಯ, ತಂಡವನ್ನು ಸೋಲಿನ ದವಡೆಗೆ ತಳ್ಳಿ ಪೆವಿಲಿಯನ್ ಸೇರಿಕೊಂಡರು. ಅಂದರೆ ಈ ಪ್ರವಾಸದಲ್ಲಿ ಇದುವರೆಗೆ ಒಟ್ಟು 4 ಇನಿಂಗ್ಸ್‌ಗಳನ್ನಾಡಿರುವ ಸೂರ್ಯ 25ರ ಸರಾಸರಿಯಲ್ಲಿ 99 ರನ್ ಮಾತ್ರ ಕಲೆಹಾಕಿದ್ದಾರೆ. ಹೀಗಾಗಿ ನಿಸ್ಸಂಶಯವಾಗಿ, ಇವರಿಬ್ಬರ ಈ ಪ್ರದರ್ಶನವು ಏಷ್ಯಾಕಪ್‌ಗೆ ಮೊದಲು ಟೀಂ ಇಂಡಿಯಾವನ್ನು ಚಿಂತೆಗೀಡು ಮಾಡಿರುವುದರಲ್ಲಿ ಎರಡು ಮಾತಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:05 am, Fri, 4 August 23

ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು