World Cup 2023: ‘ಐಸಿಸಿ ಲಿಖಿತ ಭರವಸೆ ನೀಡಿದರೆ ಮಾತ್ರ ಭಾರತಕ್ಕೆ ಕಳುಹಿಸುತ್ತೇವೆ’; ಪಾಕ್ ಸರ್ಕಾರದ ಹೊಸ ಷರತ್ತು

World Cup 2023: ಐಸಿಸಿಯಿಂದ ಲಿಖಿತ ಭರವಸೆ ಸಿಕ್ಕರಷ್ಟೇ ಪಾಕ್ ತಂಡವನ್ನು ಭಾರತದಲ್ಲಿ ವಿಶ್ವಕಪ್ ಆಡಲು ಕಳುಹಿಸುತ್ತೇವೆ ಎಂಬ ಹೊಸ ಷರತ್ತನ್ನು ಪಾಕ್ ಸರ್ಕಾರ ಐಸಿಸಿ ಮುಂದಿಟ್ಟಿದೆ ಎಂದು ವರದಿಯಾಗಿದೆ.

World Cup 2023: ‘ಐಸಿಸಿ ಲಿಖಿತ ಭರವಸೆ ನೀಡಿದರೆ ಮಾತ್ರ ಭಾರತಕ್ಕೆ ಕಳುಹಿಸುತ್ತೇವೆ’; ಪಾಕ್ ಸರ್ಕಾರದ ಹೊಸ ಷರತ್ತು
ಪಾಕಿಸ್ತಾನ ಕ್ರಿಕೆಟ್ ತಂಡ
Follow us
ಪೃಥ್ವಿಶಂಕರ
|

Updated on:Aug 04, 2023 | 9:16 AM

ಈ ಬಾರಿಯ ವಿಶ್ವಕಪ್‌ನಲ್ಲಿ (World Cup 2023) ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಹಣಾಹಣಿಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅದಕ್ಕೂ ಮುನ್ನ ವಿಶ್ವಕಪ್ ವೇಳಾಪಟ್ಟಿಯ ಬಗ್ಗೆ ಎದ್ದಿರುವ ಅಪಸ್ಪರ ಶಮನವಾಗಬೇಕಿದೆ. ವಾಸ್ತವವಾಗಿ ಈ ಹಿಂದೆ ಪ್ರಕಟಗೊಂಡ ವಿಶ್ವಕಪ್ ವೇಳಾಪಟ್ಟಿಯಲ್ಲಿ ಕೆಲವು ಪಂದ್ಯಗಳ ದಿನಾಂಕವನ್ನು ಬದಲಿಸಲು ಐಸಿಸಿ (ICC) ಹಾಗೂ ಬಿಸಿಸಿಐ (BCCI) ಮುಂದಾಗಿದೆ. ಇಷ್ಟರಲ್ಲೇ ನವೀಕೃತ ವಿಶ್ವಕಪ್ ವೇಳಾಪಟ್ಟಿ ಹೊರಬರಲಿದೆ. ಆ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಫೈಟ್​ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಆದರೆ ಅದಕ್ಕೂ ಮುನ್ನ ಪಾಕ್ ತಂಡ ಭಾರತಕ್ಕೆ ವಿಶ್ವಕಪ್ ಆಡಲು ಬರುತ್ತಾ ಎಂಬುದು ಸ್ಪಷ್ಟವಾಗಬೇಕಿದೆ. ಏಕೆಂದರೆ ಪಾಕ್ ತಂಡ ಭಾರತಕ್ಕೆ ಬರಲು ಇನ್ನು ಪಾಕ್ ಸರ್ಕಾರದಿಂದ ಯಾವುದೇ ಅನುಮತಿ ಸಿಕ್ಕಿಲ್ಲ. ಹೀಗಾಗಿ ಸರ್ಕಾರದ ತೀರ್ಮಾನಕ್ಕಾಗಿ ಪಾಕ್ ತಂಡ ಕಾಯುತ್ತಿದೆ. ಈ ನಡುವೆ ಐಸಿಸಿಯಿಂದ ಲಿಖಿತ ಭರವಸೆ ಸಿಕ್ಕರಷ್ಟೇ ಪಾಕ್ ತಂಡವನ್ನು ಭಾರತದಲ್ಲಿ ವಿಶ್ವಕಪ್ ಆಡಲು ಕಳುಹಿಸುತ್ತೇವೆ ಎಂಬ ಹೊಸ ಷರತ್ತನ್ನು ಪಾಕ್ ಸರ್ಕಾರ ಐಸಿಸಿ ಮುಂದಿಟ್ಟಿದೆ ಎಂದು ವರದಿಯಾಗಿದೆ.

ಐಸಿಸಿಯಿಂದ ಲಿಖಿತ ಗ್ಯಾರಂಟಿ ಬೇಕು

ವಾಸ್ತವವಾಗಿ ಪಾಕ್ ಸರ್ಕಾರ, ಪಾಕ್ ತಂಡವನ್ನು ಭಾರತಕ್ಕೆ ವಿಶ್ವಕಪ್ ಆಡಲು ಕಳುಹಿಸಬೇಕೋ ಅಥವಾ ಬೇಡವೋ ಎಂಬುದನ್ನು ತೀರ್ಮಾನಿಸಲು ಸಮಿತಿಯೊಂದನ್ನು ರಚಿಸಿದೆ. ಆ ಸಮಿತಿ ಇತ್ತೀಚೆಗಷ್ಟೇ ಸಭೆ ನಡೆಸಿದ್ದು, ಈ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಪ್ರಕಾರ, ತಂಡದ ಸಂಪೂರ್ಣ ಭದ್ರತೆಯನ್ನು ಒದಗಿಸುವುದಾಗಿ ಐಸಿಸಿಯಿಂದ ಲಿಖಿತ ಗ್ಯಾರಂಟಿ ಸಿಕ್ಕರೆ ಮಾತ್ರ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸುವುದಾಗಿ ಷರತ್ತು ವಿಧಿಸಿದೆ ಎಂದು ವರದಿಯಾಗಿದೆ.

ಅಕ್ಟೋಬರ್ 5 ರಿಂದ ಭಾರತದಲ್ಲಿ ಏಕದಿನ ವಿಶ್ವಕಪ್ ಪ್ರಾರಂಭವಾಗಲಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅದರಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದೆ. ಅದರಲ್ಲೂ ಏಷ್ಯಾಕಪ್‌ಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿದ ನಂತರ, ಪಾಕಿಸ್ತಾನಿ ಮಂಡಳಿಯು ವಿಶ್ವಕಪ್‌ನ ಬಗ್ಗೆ ಮೊಂಡುತನದ ಧೋರಣೆ ಅನುಸರಿಸಲು ಪ್ರಾರಂಭಿಸಿದೆ.

BREAKING: ಭಾರತ- ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ದಿನಾಂಕ ಬದಲಾವಣೆ! ವರದಿ

ಪಾಕಿಸ್ತಾನಕ್ಕೆ ಐಸಿಸಿಯಿಂದ ಗ್ಯಾರಂಟಿ ಬೇಕು

ಆದಾಗ್ಯೂ, ಜೂನ್‌ನಲ್ಲಿ ಐಸಿಸಿ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ, ಪಾಕಿಸ್ತಾನವು ಈ ವಿಷಯದಲ್ಲಿ ತನ್ನ ನಿಲುವನ್ನು ಮೃದುಗೊಳಿಸಿತ್ತು. ಸರ್ಕಾರ ಅನುಮತಿ ನೀಡಿದರೆ ತಂಡವನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ಪಾಕ್ ಮಂಡಳಿ ಹೇಳಿಕೆ ನೀಡಿತ್ತು. ನಂತರ ಕಳೆದ ವಾರವಷ್ಟೇ, ಪಾಕಿಸ್ತಾನ ಸರ್ಕಾರವು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದಲ್ಲಿ ವಿಶೇಷ ಸಮಿತಿಯನ್ನು ರಚಿಸಿ, ಈ ವಿಷಯದ ಬಗ್ಗೆ ಸಲಹೆಗಳನ್ನು ನೀಡುವ ಜವಾಬ್ದಾರಿಯನ್ನು ನೀಡಿತ್ತು.

ಬುಧವಾರ ಇದೇ ಸಮಿತಿ ಸಭೆ ನಡೆಸಿದ ಬಳಿಕ ಪಾಕ್ ತಂಡದ ಭದ್ರತೆಗೆ ಐಸಿಸಿಯಿಂದ ಲಿಖಿತ ಗ್ಯಾರಂಟಿ ಪಡೆಯಲು ನಿರ್ಧರಿಸಲಾಗಿದ್ದು, ಬಳಿಕವಷ್ಟೇ ತಂಡ ಕಳುಹಿಸಲು ಅನುಮತಿ ನೀಡಲು ನಿರ್ಧರಿಸಿವೆ ಎಂದು ವರದಿಯಾಗಿದೆ. ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಝಾಕಾ ಅಶ್ರಫ್ ಶೀಘ್ರದಲ್ಲೇ ಐಸಿಸಿಯ ಮುಂದೆ ವಿಶೇಷ ಸಮಿತಿಯ ಈ ಷರತ್ತನ್ನು ಮಂಡಿಸಲಿದ್ದು, ಒಂದು ವೇಳೆ ಐಸಿಸಿಯಿಂದ ಅಂತಹ ಗ್ಯಾರಂಟಿ ಸಿಕ್ಕರೆ ಪಾಕಿಸ್ತಾನ ಸರ್ಕಾರವೂ ಭಾರತಕ್ಕೆ ತಂಡವನ್ನು ಕಳುಹಿಸಲು ಗ್ರೀನ್ ಸಿಗ್ನಲ್ ಪಡೆಯಲಿದೆ ಎಂದು ವರದಿಯಾಗಿದೆ.

ತಂಡ ಕಳುಹಿಸುವ ಪರವಾಗಿ ಪಾಕ್ ಸಚಿವರು

ಮಾಹಿತಿಯ ಪ್ರಕಾರ, ಈ ಸಭೆಯಲ್ಲಿ ವಿದೇಶಾಂಗ ಸಚಿವ ಭುಟ್ಟೊ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹಿನಾ ರಬ್ಬಾನಿ ಖಾರ್, ವಾರ್ತಾ ಸಚಿವೆ ಮರ್ಯಮ್ ಔರಂಗಜೇಬ್ ಮತ್ತು ಕಾನೂನು ಸಚಿವ ನಜೀರ್ ತಾರಾದ್ ಅವರು ತಂಡವನ್ನು ಭಾರತಕ್ಕೆ ಕಳುಹಿಸುವುದನ್ನು ಬೆಂಬಲಿಸಿದ್ದಾರೆ ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ಫೆಡರಲ್ ಸಚಿವ ಎಹ್ಸಾನ್ ಮಜ್ರಿ ಮತ್ತು ಕಾಶ್ಮೀರ ವ್ಯವಹಾರಗಳ ಕುರಿತು ಪಾಕಿಸ್ತಾನಿ ಪ್ರಧಾನಿಯ ಸಲಹೆಗಾರ ಪಾಕ್ ತಂಡವನ್ನು ಭಾರತಕ್ಕೆ ಕಳುಹಿಸುವುದನ್ನು ವಿರೋಧಿಸಿದರು ಎಂದು ವರದಿಯಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:14 am, Fri, 4 August 23

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ