IND vs WI 1st Test Day 2: 2ನೇ ದಿನದಾಟ ಅಂತ್ಯ; ರೋಹಿತ್- ಜೈಸ್ವಾಲ್ ಶತಕ, ಭಾರತಕ್ಕೆ ಭಾರಿ ಮುನ್ನಡೆ

IND vs WI 1st Test Day 2: ಇಡೀ ದಿನ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಮೊದಲ ಟೆಸ್ಟ್​ನಲ್ಲಿ 162 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

IND vs WI 1st Test Day 2: 2ನೇ ದಿನದಾಟ ಅಂತ್ಯ; ರೋಹಿತ್- ಜೈಸ್ವಾಲ್ ಶತಕ, ಭಾರತಕ್ಕೆ ಭಾರಿ ಮುನ್ನಡೆ
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on:Jul 14, 2023 | 7:15 AM

ಡೊಮಿನಿಕಾ (Dominica) ಟೆಸ್ಟ್‌ನ ಎರಡನೇ ದಿನವೂ ಭಾರತ (Team India), ವೆಸ್ಟ್ ಇಂಡೀಸ್ ಮೇಲೆ ತನ್ನ ಪ್ರಾಬಲ್ಯವನ್ನು ಮುಂದುವರೆಸಿ, ಪಂದ್ಯದಲ್ಲಿ ಪ್ರಬಲ ಮುನ್ನಡೆ ಸಾಧಿಸಿದೆ. ಮೊದಲ ದಿನ ವೆಸ್ಟ್ ಇಂಡೀಸ್ ತಂಡವನ್ನು 150 ರನ್​ಗಳಿಗೆ ಕಟ್ಟಿಹಾಕುವಲ್ಲಿ ಬೌಲರ್​ಗಳು ಯಶಸ್ವಿಯಾದರೆ, ಮರುದಿನ ಬ್ಯಾಟ್ಸ್‌ಮನ್‌ಗಳು ವಿಂಡೀಸ್ ಬೌಲರ್‌ಗಳನ್ನು ಸಮರ್ಥವಾಗಿ ದಂಡಿಸಿದರು. ಇಡೀ ದಿನ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಮೊದಲ ಟೆಸ್ಟ್​ನಲ್ಲಿ 162 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಎರಡನೇ ದಿನ ಆರಂಭಿಕ ಯಶಸ್ವಿ ಜೈಸ್ವಾಲ್ (Yashasvi Jaiswal) ಚೊಚ್ಚಲ ಪಂದ್ಯದಲ್ಲೇ ಅದ್ಭುತ ಶತಕ ಸಿಡಿಸಿ ಮಿಂಚಿದರೆ, ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 10ನೇ ಶತಕ ಸಿಡಿಸಿ ಸಂಭ್ರಮಿಸಿದರು.

ಯಶಸ್ವಿ ಚೊಚ್ಚಲ ಟೆಸ್ಟ್ ಶತಕ

ಎರಡನೇ ದಿನದಾಟದಲ್ಲಿ ಎರಡು ವಿಕೆಟ್ ಉರುಳಿಸುವಲ್ಲಿ ವಿಂಡೀಸ್ ಬೌಲರ್​ಗಳು ಯಶಸ್ವಿಯಾದರಾದರೂ ರನ್ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ಎರಡನೇ ದಿನದಾಟದ ಎರಡನೇ ಸೆಷನ್‌ನ ಅರ್ಧ ಗಂಟೆ ಬಿಟ್ಟರೆ ಎರಡನೇ ದಿನವೂ ವೆಸ್ಟ್ ಇಂಡೀಸ್‌ ಪ್ರದರ್ಶನ ನಿರಾಸೆ ಮೂಡಿಸಿತು. ಎರಡನೇ ದಿನದಾಟವನ್ನು ಆರಂಭಿಸಿದ ರೋಹಿತ್ ಹಾಗೂ ಯಶಸ್ವಿ, ಮೊದಲ ಸೆಷನ್‌ನಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಮಾಡಿ, ತಮ್ಮ ತಮ್ಮ ಅರ್ಧಶತಕಗಳನ್ನು ಪೂರೈಸಿದರು. ಊಟದ ನಂತರ ರನ್ ವೇಗ ಹೆಚ್ಚಿಸಿದ 21 ವರ್ಷದ ಯುವ ಬ್ಯಾಟ್ಸ್‌ಮನ್ ಜೈಸ್ವಾಲ್, ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದರು.

10ನೇ ಟೆಸ್ಟ್ ಶತಕ ಸಿಡಿಸಿದ ರೋಹಿತ್

ಮತ್ತೊಂದೆಡೆ ನಾಯಕ ರೋಹಿತ್ ಕೂಡ ತಮ್ಮ ಆಕ್ರಮಣಕಾರಿ ಶೈಲಿಯನ್ನು ಹತೋಟಿಯಲ್ಲಿಟ್ಟುಕೊಂಡು ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿ ಯಶಸ್ವಿಗೆ ಉತ್ತಮ ಸಾಥ್ ನೀಡಿದರು. ಈ ವೇಳೆ ರೋಹಿತ್ 220 ಎಸೆತಗಳಲ್ಲಿ ತಮ್ಮ 10ನೇ ಟೆಸ್ಟ್ ಶತಕವನ್ನೂ ಪೂರೈಸಿದರು. ಅಲ್ಲದೆ ಈ ಇಬ್ಬರ ನಡುವೆ 229 ರನ್‌ಗಳ ಜೊತೆಯಾಟ ಕೂಡ ನಡೆಯಿತು. ಆದರೆ ರೋಹಿತ್ (103) ಶತಕ ಪೂರೈಸಿದ ನಂತರದ ಎಸೆತದಲ್ಲಿಯೇ ಔಟಾದರು. ರೋಹಿತ್ ನಂತರ ಬಂದ ಗಿಲ್, ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 6 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು.

ಆತುರದಲ್ಲಿ ಎಡವಿದ ವಿಂಡೀಸ್

ಎರಡನೇ ಸೆಷನ್​ನಲ್ಲಿ ಪಂದ್ಯಕ್ಕೆ ಮರಳುವ ಯತ್ನ ಮಾಡಿದ ವೆಸ್ಟ್ ಇಂಡೀಸ್, ತಾನು ಮಾಡಿದ ತಪ್ಪುಗಳಿಂದಲೇ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಪಂದ್ಯದ ಎರಡನೇ ದಿನ ಮೊದಲ ಡಿಆರ್​ಎಸ್ ಕಳೆದುಕೊಂಡಿದ್ದ ವಿಂಡೀಸ್, ಕೊಹ್ಲಿ ವಿರುದ್ಧ ಎರಡು ಡಿಆರ್​ಎಸ್​ ತೆಗೆದುಕೊಂಡಿತು. ಆದರೆ ಈ ಎರಡೂ ಡಿಆರ್​ಎಸ್​ಗಳು ವಿಂಡೀಸ್ ಪರ ಹೋಗಲಿಲ್ಲ. ಹೀಗಾಗಿ ವಿಂಡೀಸ್ ತನ್ನ ಖೋಟಾದ ಮೂರೂ ಡಿಆರ್​ಎಸ್​ಗಳನ್ನು ಕಳೆದುಕೊಂಡಿತು. ಇದರಿಂದ ಜೈಸ್ವಾಲ್ ವಿಕೆಟ್ ಪಡೆಯುವ ಅವಕಾಶದಿಂದ ವಿಂಡೀಸ್ ವಂಚಿತವಾಯಿತು.

ವಿಂಡೀಸ್ ಮಾಡಿಕೊಂಡ ಎಡವಟ್ಟಿನ ಲಾಭ ಪಡೆದ ಜೈಸ್ವಾಲ್, ಕೊಹ್ಲಿ ಜತೆಗೂಡಿ ಎರಡನೇ ದಿನವನ್ನೂ ಅಜೇಯವಾಗಿ ಅಂತ್ಯಗೊಳಿಸಿದರು. ದಿನದಾಟದಂತ್ಯಕ್ಕೆ ಕೊಹ್ಲಿ 36 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರೆ, ಜೈಸ್ವಾಲ್ ಕೂಡ 143 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಲ್ಲದೆ ಇಬ್ಬರ ನಡುವೆ 72 ರನ್‌ಗಳ ಜೊತೆಯಾಟವಿದ್ದು, ತಂಡದ ಮೊತ್ತ 312 ರನ್​ಗಳಿಗೆ ಏರಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:13 am, Fri, 14 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ