IND vs WI: 2ನೇ ಟಿ20 ಪಂದ್ಯಕ್ಕೆ ಮಳೆ ಕಾಟ?ಇಲ್ಲಿದೆ ಜಾರ್ಜ್‌ಟೌನ್ ಹವಾಮಾನ ವರದಿ
IND vs WI 2nd T20 Georgetown Weather Report: ಭಾನುವಾರ, ಆಗಸ್ಟ್ 06 ರಂದು ಜಾರ್ಜ್ಟೌನ್ನಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣ ಇರಲಿದೆ. ಆದರೆ ಸಾಂದರ್ಭಿಕವಾಗಿ ಚದುರಿದ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಎರಡನೇ ಟಿ20 ಪಂದ್ಯ ಗಯಾನಾದ ಪೊವಿಡೆನ್ಸ್ ಸ್ಟೇಡಿಯಂನಲ್ಲಿ (Providence Stadium in Guyana) ನಡೆಯಲಿದೆ. ಮೊದಲ ಪಂದ್ಯದಲ್ಲಿ ಭಾರತವನ್ನು 4 ರನ್‌ಗಳಿಂದ ಸೋಲಿಸಿದ ವೆಸ್ಟ್ ಇಂಡೀಸ್ ತಂಡ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇತ್ತ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ (Team India), ವಿಂಡೀಸ್ ಪಡೆಗೆ ತಿರುಗೇಟು ನೀಡಲು ಸಜ್ಜಾಗಿದೆ. ಹೀಗಾಗಿ ಎರಡನೇ ಪಂದ್ಯದಲ್ಲಿ ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದು ಕ್ರೀಡಾ ಪ್ರೇಮಿಗಳ ಕುತೂಹಲ ಹೆಚ್ಚಿಸಿದೆ. ಉಭಯ ತಂಡಗಳ ನಡುವಣ ಎರಡನೇ ಟಿ20 ಸಮರ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಪಂದ್ಯದ ಟಾಸ್ 7:30 ಕ್ಕೆ ನಡೆಯಲ್ಲಿದೆ. ಇನ್ನು ಇದೇ ಮೈದಾನದಲ್ಲಿ ಮೂರನೇ ಟಿ20 ಪಂದ್ಯ ಕೂಡ ನಡೆಯುವುದರಿಂದ, ಎರಡನೇ ಟಿ20 ಪಂದ್ಯದ ಗೆಲುವು ಭಾರತಕ್ಕೆ ಅತ್ಯವಶ್ಯಕವಾಗಿದೆ.
ಪಿಚ್ ವರದಿ
ಗಯಾನಾದ ಪೊವಿಡೆನ್ಸ್ ಮೈದಾನವು ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಿಗೆ ಸ್ವರ್ಗವಾಗಿದೆ. ಆದ್ದರಿಂದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಈ ಮೈದಾನದಲ್ಲಿ ಸಮಾನ ಅವಕಾಶ ಹೊಂದಿದ್ದಾರೆ. ಇಲ್ಲಿಯವರೆಗೆ ಈ ಮೈದಾನದಲ್ಲಿ ನಡೆದ ಪಂದ್ಯ ಬಿಗ್ ಸ್ಕೋರ್ಗೆ ಸಾಕ್ಷಿಯಾಗಿದೆ. ಹಾಗಾಗಿ ಈ ಪಂದ್ಯದಲ್ಲೂ ಬಿಗ್ ಸ್ಕೋರ್ ಕಲೆಹಾಕಲು ಉಭಯ ತಂಡಗಳು ಪ್ರಯತ್ನಿಸಲಿವೆ.
IND vs WI: 2ನೇ ಟಿ20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ಗೆ ಸಿಗುತ್ತಾ ಅವಕಾಶ..?
ಜಾರ್ಜ್‌ಟೌನ್ ಹವಾಮಾನ ವರದಿ
ಭಾನುವಾರ, ಆಗಸ್ಟ್ 06 ರಂದು ಜಾರ್ಜ್ಟೌನ್ನಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣ ಇರಲಿದೆ. ಆದರೆ ಸಾಂದರ್ಭಿಕವಾಗಿ ಚದುರಿದ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಿನ ಕಳೆದಂತೆ ಶೇ.50ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ ಸಂಜೆ ಸಮೀಪಿಸುತ್ತಿದ್ದಂತೆ, ಮಳೆಯಿಂದಾಗಿ ಯಾವುದೇ ಅಡೆತಡೆಗಳಿಲ್ಲದೆ ಪಂದ್ಯವನ್ನು ವೀಕ್ಷಿಸಬಹುದಾಗಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಎರಡನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿಲ್ಲ ಎಂಬುದು ಸ್ಪಷ್ಟವಾಗಿದೆ.
ಉಭಯ ಸಂಭಾವ್ಯ ತಂಡಗಳು
ಭಾರತ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಅರ್ಷ್‌ದೀಪ್ ಸಿಂಗ್, ಮುಖೇಶ್ ಕುಮಾರ್
ವೆಸ್ಟ್ ಇಂಡೀಸ್ ತಂಡ: ಕೈಲ್ ಮೈಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್ (ನಾಯಕ), ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಅಕೀಲ್ ಹೊಸೈನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ