IND vs WI: ‘ಐ ಲವ್ ಯೂ’.. ಲೈವ್ ಪಂದ್ಯದಲ್ಲೇ ಸುಂದರಿಯಿಂದ ಶುಭ್ಮನ್ ಗಿಲ್ಗೆ ಪ್ರೇಮ ನಿವೇದನೆ
Shubman Gill Fan Proposes with Placard: ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ಕ್ರೀಸ್ನಲ್ಲಿದ್ದಾಗ ಯುವತಿಯೊಬ್ಬಳು ಪ್ಲಕಾರ್ಡ್ ಹಿಡಿದು ಗಿಲ್ಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ. 'ಐ ಲವ್ ಯೂ ಶುಭ್ಮನ್ ಗಿಲ್' ಎಂದು ಬರೆದಿದ್ದ ಪ್ಲಕಾರ್ಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕ್ರೀಡಾಂಗಣದಲ್ಲಿ ಶುಭ್ಮನ್ ಗಿಲ್ಗೆ ಯುವತಿಯರಿಂದ ಈ ರೀತಿ ಪ್ರಪೋಸಲ್ ಬಂದಿರುವುದು ಇದು ಮೊದಲೇನಲ್ಲ, ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ.

ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ಗೆ (Shubman Gill) ಶುಕ್ರದೆಸೆ ಆರಂಭವಾಗಿದೆ. ಕೆಲವೇ ತಿಂಗಳುಗಳ ಹಿಂದೆ ಭಾರತ ಟೆಸ್ಟ್ ತಂಡದ ನಾಯಕನಾಗಿ ನೇಮಕವಾಗಿದ್ದ ಗಿಲ್ಗೆ ಆ ಬಳಿಕ ಟಿ20 ತಂಡದ ಉಪನಾಯಕತ್ವವೂ ಸಿಕ್ಕಿತು. ಮುಂದಿನ ದಿನಗಳಲ್ಲಿ ಅವರಿಗೆ ಟಿ20 ತಂಡದ ನಾಯಕತ್ವ ಸಿಗುವುದು ಖಚಿತವಾಗಿದೆ. ಇದೆಲ್ಲದರ ನಡುವೆ ಕೆಲವೇ ದಿನಗಳ ಹಿಂದೆ ಅವರಿಗೆ ಏಕದಿನ ತಂಡದ ನಾಯಕತ್ವವೂ ಸಿಕ್ಕಿದೆ. ಹೀಗಾಗಿ ಭಾರತ ತಂಡದಲ್ಲಿ ಶುಭ್ಮನ್ ಗಿಲ್ ಯುಗ ಆರಂಭವಾಗಿದೆ. ಹೀಗಾಗಿ ಅವರ ಅಭಿಮಾನಿಗಳ ಬಳಗವೂ ಹೆಚ್ಚಾಗಿದೆ. ಇದರಲ್ಲಿ ಯುವತಿಯರದ್ದೇ ಸಿಂಹಪಾಲು. ಅದು ಕ್ರೀಡಾಂಗಣದಲ್ಲೂ ರುಜುವಾತಾಗಿದ್ದು, ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂದು ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡುವ ವೇಳೆ ಯುವತಿಯೊಬ್ಬಳು ಪ್ಲಕಾರ್ಡ್ ಮೂಲಕ ಪ್ರೇಮ ನಿವೇದನೆ ಮಾಡಿದ್ದಾಳೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ ಪಂದ್ಯದ ಎರಡನೇ ದಿನದಂದು, ಶುಭ್ಮನ್ ಗಿಲ್ ತಮ್ಮ ಟೆಸ್ಟ್ ವೃತ್ತಿಜೀವನದ 10 ನೇ ಶತಕವನ್ನು ಪೂರ್ಣಗೊಳಿಸಿದರು. ಹಾಗೆಯೇ ಯಶಸ್ವಿ, ನಿತೀಶ್ ಮತ್ತು ಜುರೆಲ್ ಅವರೊಂದಿಗೆ ಉತ್ತಮ ಜೊತೆಯಾಟವನ್ನು ಕಟ್ಟಿದರು. ಹೀಗಾಗಿ ಭಾರತ 518 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಟಿತು.
ಶುಭ್ಮನ್ ಗಿಲ್ಗೆ ಪ್ರೇಮ ನಿವೇದನೆ
ವಾಸ್ತವವಾಗಿ ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ಕ್ರೀಸ್ನಲ್ಲಿದ್ದ ವೇಳೆ ಯುವತಿಯೊಬ್ಬಳು ಪ್ಲಕಾರ್ಡ್ ಮೂಲಕ ಶುಭ್ಮನ್ ಗಿಲ್ಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ. ಇದೀಗ ಅದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ವೈರಲ್ ಫೋಟೋದಲ್ಲಿ ಇರುವಂತೆ ಆ ಹುಡುಗಿ ತನ್ನ ಪ್ಲಕಾರ್ಡ್‌ನಲ್ಲಿ ‘ಐ ಲವ್ ಯೂ ಶುಭ್ಮನ್ ಗಿಲ್’ ಎಂದು ಬರೆದಿದ್ದು, ಮೈದಾನದಲ್ಲಿ ಪ್ರದರ್ಶಿಸಿದ್ದಾಳೆ. ಯುವತಿ ಪ್ಲಕಾರ್ಡ್ ಹಿಡಿದು ಗಿಲ್ಗೆ ಲವ್ ಪ್ರಪೋಸಲ್ ಮಾಡುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು, ಇದೀಗ ಅದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ರೀತಿ ಶುಭ್ಮನ್ ಗಿಲ್ಗೆ ಕ್ರೀಡಾಂಗಣದಲ್ಲಿ ಯುವತಿಯರು ಪ್ರೇಮ ನಿವೇದನೆ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಈ ರೀತಿಯ ಘಟನೆಗಳು ನಡೆದಿವೆ. ಇದೀಗ ಮತ್ತೊಮ್ಮೆ ಯುವತಿಯೊಬ್ಬಳು ಗಿಲ್ಗೆ ಪ್ರಪೋಸ್ ಮಾಡಿ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾಳೆ.
Cutie with i love board for shubman gill . pic.twitter.com/VcJn22rot8
— Hitman 45 (@Hitman450745) October 11, 2025
ಶುಭ್ಮನ್ ಗಿಲ್ ಪ್ರದರ್ಶನ
ಇನ್ನು ಈ ಪಂದ್ಯದಲ್ಲಿ ಶುಭ್ಮನ್ ಗಿಲ್ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ತಮ್ಮ ಇನ್ನಿಂಗ್ಸ್ನಲ್ಲಿ 196 ಎಸೆತಗಳನ್ನು ಎದುರಿಸಿದ ಗಿಲ್ 16 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಿತ ಅಜೇಯ 129 ರನ್ ಬಾರಿಸಿದರು. ಹಾಗೆಯೇ ಐದನೇ ವಿಕೆಟ್‌ಗೆ ಜುರೆಲ್ ಜೊತೆ 102 ರನ್‌ಗಳ ಜೊತೆಯಾಟವನ್ನು ಆಡಿದರು. ಇದರೊಂದಿಗೆ ಗಿಲ್, ಕ್ಯಾಲೆಂಡರ್ ವರ್ಷದಲ್ಲಿ ಐದು ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ನಾಯಕ ಎನಿಸಿಕೊಂಡರು. ಗಿಲ್ಗೂ ಮೊದಲು ವಿರಾಟ್ ಕೊಹ್ಲಿ 2017 ಮತ್ತು 2018 ರಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:57 pm, Sat, 11 October 25
