IND vs WI ಪಂದ್ಯಕ್ಕೆ ಮಳೆ ಭೀತಿ: 15 ನಿಮಿಷಗಳಲ್ಲಿ ರೆಡಿಯಾಗಲಿದೆ ಮೈದಾನ!

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5ನೇ ಹಾಗೂ ಅಂತಿಮ ಟಿ20 ಪಂದ್ಯವು ಈಗ ಫೈನಲ್ ಫೈಟ್ ಆಗಿ ಮಾರ್ಪಟ್ಟಿದೆ. ಏಕೆಂದರೆ, ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ, ದ್ವಿತೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ಜಯ ಸಾಧಿಸಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಮತ್ತೆ ಭಾರತ ತಂಡ ಜಯಭೇರಿ ಬಾರಿಸಿದರೆ, ನಾಲ್ಕನೇ ಟಿ20 ಪಂದ್ಯದಲ್ಲಿ ಕಿವೀಸ್ ಪಡೆ ತಿರುಗೇಟು ನೀಡಿ ಗೆದ್ದು ಬೀಗಿತ್ತು. ಅದರಂತೆ ಇದೀಗ 5 ಪಂದ್ಯಗಳ ಸರಣಿಯು 2-2 ಅಂತರದಿಂದ ಸಮಬಲದಲ್ಲಿದ್ದು, ಅಂತಿಮ ಪಂದ್ಯದಲ್ಲಿ ಗೆಲ್ಲುವ ತಂಡ ಟ್ರೋಫಿ ಎತ್ತಿ ಹಿಡಿಯಲಿದೆ. ಆದರೀಗ ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

IND vs WI ಪಂದ್ಯಕ್ಕೆ ಮಳೆ ಭೀತಿ: 15 ನಿಮಿಷಗಳಲ್ಲಿ ರೆಡಿಯಾಗಲಿದೆ ಮೈದಾನ!
Ind Vs Wi
Image Credit source: BCCI

Updated on: Oct 17, 2026 | 11:32 AM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ 5ನೇ ಹಾಗೂ ಸರಣಿ ನಿರ್ಣಾಯಕ ಟಿ20 ಪಂದ್ಯ ಇಂದು (ಅಕ್ಟೋಬರ್ 17) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜರುಗಲಿದೆ. ಆದರೆ, ಈ ಹೈ-ವೋಲ್ಟೇಜ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಇಂದಿನ ಪಂದ್ಯಕ್ಕೂ ವರುಣ ಅಡಚಣೆ ಉಂಟುಮಾಡುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಮುನ್ಸೂಚನೆ ಏನು ಹೇಳುತ್ತದೆ?

ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಪ್ರಮುಖ ಹವಾಮಾನ ಅಪ್ಲಿಕೇಶನ್ AccuWeather ಪ್ರಕಾರ, ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಮತ್ತು ಸಂಜೆಯ ಅವಧಿಯಲ್ಲಿ ಭಾರಿ ಮಳೆ ಹಾಗೂ ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆ ದಟ್ಟವಾಗಿದೆ. ಅಕ್ಯುವೆದರ್ ವರದಿಯ ಪ್ರಕಾರ, ಇಂದು ನಗರದಲ್ಲಿ ಮಳೆಯಾಗುವ ಸಾಧ್ಯತೆ ಶೇ. 90 ರಷ್ಟಿದೆ.

ಮಳೆ ಮುನ್ಸೂಚನೆ (ಅಂದಾಜು):

  •  ಸಂಜೆ 4:00 – 5:00: ಶೇ. 68 – 71 ರಷ್ಟು ಮಳೆಯ ಸಾಧ್ಯತೆ.
  • ಸಂಜೆ 6:00 (ಟಾಸ್ ಸಮಯದ ವೇಳೆ): ಶೇ. 49 ರಷ್ಟು ಮಳೆಯ ಸಾಧ್ಯತೆ.
  • ರಾತ್ರಿ 7:00 (ಪಂದ್ಯ ಆರಂಭದ ಸಮಯ): ಶೇ. 64 ರಷ್ಟು ಮಳೆಯ ಸಾಧ್ಯತೆ.
  • ರಾತ್ರಿ 8:00 ರಿಂದ 11:00 ರವರೆಗೆ: ಶೇ. 49 ರಿಂದ 56 ರಷ್ಟು ಮಳೆಯಾಗುವ ಸಾಧ್ಯತೆ.

ಅಂದರೆ, ಇಂದು ರಾತ್ರಿ 7 ಗಂಟೆಯ ಬಳಿಕ ಶೇ. 40 ರಿಂದ 65 ರಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಪಂದ್ಯಕ್ಕೆ ವರುಣನ ಅಡಚಣೆ ಬಹುತೇಕ ಖಚಿತ ಎನ್ನಲಾಗಿದೆ. ಇದರಿಂದಾಗಿ ಪಂದ್ಯದ ಆರಂಭ ವಿಳಂಬವಾಗುವ ಭೀತಿ ಎದುರಾಗಿದೆ. ಅಷ್ಟೇ ಅಲ್ಲದೆ, ಮಳೆಯ ತೀವ್ರತೆ ಹೆಚ್ಚಾದರೆ ಪಂದ್ಯದ ಓವರ್‌ಗಳನ್ನು ಕಡಿತಗೊಳಿಸುವ ಸಾಧ್ಯತೆಯೂ ದಟ್ಟವಾಗಿದೆ.

ಪಂದ್ಯ ನಡೆಯುವುದು ಬಹುತೇಕ ಖಚಿತ!

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ವಿಶ್ವದ ಅತ್ಯಾಧುನಿಕ ‘ಸಬ್-ಏರ್’ ಸೂಪರ್ ಸಾಕ್ಷನ್ ಡ್ರೈನೇಜ್ ವ್ಯವಸ್ಥೆಯನ್ನು ಹೊಂದಿದೆ. ಇದು ಮಳೆ ಬಂದರೂ ಪಂದ್ಯವನ್ನು ಪುನರಾರಂಭಿಸಲು ಇರುವ ದೊಡ್ಡ ಶಕ್ತಿಯಾಗಿದೆ. ಈ ತಂತ್ರಜ್ಞಾನವು ಸಾಂಪ್ರದಾಯಿಕ ವ್ಯವಸ್ಥೆಗಿಂತ 36 ಪಟ್ಟು ವೇಗವಾಗಿ ಅಂದರೆ ನಿಮಿಷಕ್ಕೆ ಸುಮಾರು 10,000 ಲೀಟರ್ ನೀರನ್ನು ಮೈದಾನದಿಂದ ಸಂಪೂರ್ಣವಾಗಿ ಹೀರಿಕೊಂಡು ಹೊರಹಾಕುತ್ತದೆ.

ಅಂದರೆ, ಮಳೆ ನಿಂತ ಕೇವಲ 15 ರಿಂದ 20 ನಿಮಿಷಗಳಲ್ಲಿ ಔಟ್‌ಫೀಲ್ಡ್ ಅನ್ನು ಪಂದ್ಯಕ್ಕೆ ಸಿದ್ಧಪಡಿಸುವ ಅದ್ಭುತ ಸಾಮರ್ಥ್ಯ ಈ ಮೈದಾನಕ್ಕಿದೆ. ಹೀಗಾಗಿ, ಇಂದು ಭಾರಿ ಮಳೆಯಾಗಿ ಅಡಚಣೆಯಾದರೂ, ವರುಣ ಬಿಡುವು ನೀಡಿದ ತಕ್ಷಣವೇ ಪಂದ್ಯವನ್ನು ಪುನರಾರಂಭಿಸಲು ಚಿನ್ನಸ್ವಾಮಿ ಕ್ರೀಡಾಂಗಣ ಸಂಪೂರ್ಣ ಸುಸಜ್ಜಿತವಾಗಿದೆ. ಈ ಅತ್ಯಾಧುನಿಕ ತಂತ್ರಜ್ಞಾನದ ಬಲದಿಂದಾಗಿ, ಎಷ್ಟೇ ಮಳೆ ಬಂದರೂ ಪಂದ್ಯದ ಫಲಿತಾಂಶಕ್ಕೆ ಬೇಕಾದ ಕನಿಷ್ಠ 5 ಓವರ್‌ಗಳ ಪಂದ್ಯವನ್ನಂತೂ ಸುಲಭವಾಗಿ ಆಯೋಜಿಸಬಹುದಾಗಿದೆ.

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ನಾಯಕ), ಶಿವಂ ದುಬೆ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ನಮನ್ ಧೀರ್, ರವಿ ಬಿಷ್ಣೋಯ್, ನಿತೀಶ್ ಕುಮಾರ್ ರೆಡ್ಡಿ, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.

ಇದನ್ನೂ ಓದಿ: ಟೀಮ್ ಇಂಡಿಯಾದ 37 ಆಟಗಾರರಲ್ಲಿ ಮೂವರು ಕನ್ನಡಿಗರು

ವೆಸ್ಟ್ ಇಂಡೀಸ್ ಟಿ20 ತಂಡ: ಶಾಯ್ ಹೋಪ್ (ನಾಯಕ), ಅಮೀರ್ ಜಂಗೂ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಅಕೇಲ್ ಹೊಸೈನ್, ಶಮರ್ ಜೋಸೆಫ್, ಗುಡಾಕೇಶ್ ಮೋಟಿ, ಕೀಮೋ ಪೌಲ್, ಕಮಿಲ್ ಪೂರನ್, ರೋವ್‌ಮನ್ ಪೊವೆಲ್, ಶೆರ್ಫೇನ್ ರದರ್‌ಫೋರ್ಡ್, ಕ್ವೆಂಟಿನ್ ಸ್ಯಾಂಪ್ಸನ್, ರೊಮಾರಿಯೋ ಶೆಫರ್ಡ್, ಶಮರ್ ಸ್ಪ್ರಿಂಗರ್.

 

Published On - 11:29 am, Sat, 17 October 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us