IND vs WI: ‘ನಮಗೆ ಐಷಾರಾಮಿ ಸೌಕರ್ಯ ಬೇಕಿಲ್ಲ, ಆದರೆ..’; ವಿಂಡೀಸ್ ಬೋರ್ಡ್ ವಿರುದ್ಧ ಹಾರ್ದಿಕ್ ಅಸಮಾಧಾನ

Hardik Pandya: ಇದೀಗ ಐದು ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಸಜ್ಜಾಗುತ್ತಿದ್ದು, ಈ ನಡುವೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ವಿಂಡೀಸ್ ಮಂಡಳಿಯ ವಿರುದ್ಧ ಹರಿಹಾಯ್ದಿದ್ದಾರೆ.

IND vs WI: ‘ನಮಗೆ ಐಷಾರಾಮಿ ಸೌಕರ್ಯ ಬೇಕಿಲ್ಲ, ಆದರೆ..’; ವಿಂಡೀಸ್ ಬೋರ್ಡ್ ವಿರುದ್ಧ ಹಾರ್ದಿಕ್ ಅಸಮಾಧಾನ
ಹಾರ್ದಿಕ್ ಪಾಂಡ್ಯ
Follow us
ಪೃಥ್ವಿಶಂಕರ
|

Updated on:Aug 02, 2023 | 11:34 AM

ಟ್ರಿನಿಡಾಡ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (Team India)  200 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎಲ್ಲ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡುವಲ್ಲಿ ಭಾರತ ಯುವ ಪಡೆ (India vs West Indies) ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್​​ಗಳಲ್ಲಿ ನಾಲ್ಕು ಆಟಗಾರರ ಅರ್ಧಶತಕದ ನೆರವಿನಿಂದ 351 ರನ್ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ವಿಂಡೀಸ್ ಪಡೆ, ಟೀಂ ಇಂಡಿಯಾ ವೇಗಿಗಳ ದಾಳಿಗೆ ನಲುಗಿ 151 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇದೀಗ ಐದು ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಸಜ್ಜಾಗುತ್ತಿದ್ದು, ಈ ನಡುವೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya), ವಿಂಡೀಸ್ ಮಂಡಳಿಯ ವಿರುದ್ಧ ಹರಿಹಾಯ್ದಿದ್ದಾರೆ.

ನಮಗೆ ಯಾವುದೇ ಐಷಾರಾಮಿ ಸೌಕರ್ಯ ಬೇಡ

ವಾಸ್ತವವಾಗಿ ಮೂರನೇ ಏಕದಿನ ಪಂದ್ಯ ಮುಗಿದ ಬಳಿಕ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬಳಿ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿನ ಸೌಲಭ್ಯಗಳ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಹಾರ್ದಿಕ್, ಇದು ಅತ್ಯುತ್ತಮವಾದ ಸ್ಥಳಗಳಲ್ಲಿ ಒಂದಾಗಿದೆ ಎಂದರು. ಆದರೆ ಆ ಬಳಿಕ ವಿಂಡೀಸ್ ಮಂಡಳಿಯ ವೈಫಲ್ಯಗಳ ಮಾತನಾಡಲಾರಂಭಿಸಿದ ಪಾಂಡ್ಯ, ‘ನಾವು ಕಳೆದ ವರ್ಷ ವಿಂಡೀಸ್ ಪ್ರವಾಸ ಮಾಡಿದ್ದಾಗಲೂ ನಮಗೆ ವಿಂಡೀಸ್ ಕ್ರಿಕೆಟ್ ಮಂಡಳಿ ಉತ್ತಮ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿತ್ತು. ಇದೀಗ ಈ ಸರಣಿಯಲ್ಲೂ ಆ ವೈಫಲ್ಯ ಮುಂದುವರೆದಿದೆ. ವೆಸ್ಟ್ ಇಂಡೀಸ್ ಬೋರ್ಡ್ ಈ ಬಗ್ಗೆ ಕಾಳಜಿ ವಹಿಸಬೇಕಿದೆ. ನಮಗೆ ಯಾವುದೇ ಐಷಾರಾಮಿ ಸೌಕರ್ಯ ಬೇಡ. ಆದರೆ ಕನಿಷ್ಠ ಪಕ್ಷ ಮೂಲ ಸೌಕರ್ಯಗಳನ್ನಾದರೂ ಸರಿಯಾಗಿ ಕಲ್ಪಿಸಬೇಕು’ ಎಂದು ಪಾಂಡ್ಯ ಹೇಳಿದ್ದಾರೆ.

IND vs WI: 6 ಆಟಗಾರರು ಔಟ್, ಐವರು ಇನ್; ಭಾರತ ಟಿ20 ತಂಡದಲ್ಲಾಗಿರುವ ಬದಲಾವಣೆಗಳಿವು

ನಾಲ್ಕು ಗಂಟೆಗಳಷ್ಟು ವಿಳಂಬ

ವಾಸ್ತವವಾಗಿ ಪ್ರಯಾಣದ ವಿಚಾರದಲ್ಲಿ ವಿಂಡೀಸ್ ಮಂಡಳಿಯ ವಿರುದ್ಧ ಪಾಂಡ್ಯ ಗರಂ ಆದರು. ಏಕದಿನ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಟ್ರಿನಿಡಾಡ್‌ನಿಂದ ಬಾರ್ಬಡೋಸ್‌ಗೆ ತಡರಾತ್ರಿ ವಿಮಾನ ಪ್ರಯಾಣ ಮಾಡಬೇಕಿತ್ತು. ಆದರೆ ವಿಮಾನ ನಿಗದಿತ ಸಮಯಕ್ಕೆ ಹಾರದೆ, ಸುಮಾರು ನಾಲ್ಕು ಗಂಟೆಗಳಷ್ಟು ವಿಳಂಬವಾಯಿತು. ಇದರಿಂದ ಟೀಂ ಇಂಡಿಯಾ ಆಟಗಾರರು ನಾಲ್ಕು ತಾಸುಗಳನ್ನು ವಿಮಾನ ನಿಲ್ದಾಣದಲ್ಲೇ ಕಳೆಯಬೇಕಾಯಿತು. ಇದರಿಂದ ಅಸಮಾಧಾನಗೊಂಡಿದ್ದ ಭಾರತೀಯ ಕ್ರಿಕೆಟಿಗರು ಈ ಬಗ್ಗೆ ಬಿಸಿಸಿಐ ಬಳಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಅಂತಿಮ ಪಂದ್ಯದಲ್ಲಿ ಅಬ್ಬರಿಸಿದ ಪಾಂಡ್ಯ

ಟ್ರಿನಿಡಾಡ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ ಬೌಲರ್‌ಗಳನ್ನು ಸರಿಯಾಗಿ ಚೆಂಡಾಡಿದರು. ಪಾಂಡ್ಯರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದಾಗಿ ಟೀಂ ಇಂಡಿಯಾ ವಿಂಡೀಸ್ ವಿರುದ್ಧ 351 ರನ್​ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಆರಂಭದಲ್ಲಿ ನಿದಾನಗತಿಯ ಬ್ಯಾಟಿಂಗ್ ಮಾಡಿದ ಪಾಂಡ್ಯ ಆ ಬಳಿಕ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಪ್ರಾರಂಭಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 52 ಎಸೆತಗಳನ್ನು ಎದುರಿಸಿದ ಪಾಂಡ್ಯ 5 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿ ಒಳಗೊಂಡಂತೆ ಅಜೇಯ 70 ರನ್ ಸಿಡಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:32 am, Wed, 2 August 23

ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್
ಧೋನಿ ಸಂಪ್ರದಾಯ ಮುಂದುವರಿಸಿದ ಸೂರ್ಯಕುಮಾರ್ ಯಾದವ್