ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ (T20 series)ಗೂ ಮುನ್ನ ಭಾರತ ಕ್ರಿಕೆಟ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಉಪನಾಯಕ ಕೆಎಲ್ ರಾಹುಲ್ (KL Rahul) ಮತ್ತು ಆಲ್ ರೌಂಡರ್ ಅಕ್ಷರ್ ಪಟೇಲ್ (Axar Patel) ಸರಣಿಯಿಂದ ಹೊರಗುಳಿದಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಫೆಬ್ರವರಿ 11 ರಂದು ಶುಕ್ರವಾರ ಹೇಳಿಕೆ ನೀಡಿದ್ದು, ಫಿಟ್‌ನೆಸ್ ಕಾರಣಗಳಿಂದಾಗಿ ಇಬ್ಬರೂ ಆಟಗಾರರು ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಈ ಸರಣಿಯು ಫೆಬ್ರವರಿ 16 ರಿಂದ ಆರಂಭವಾಗಲಿದ್ದು, ಎಲ್ಲಾ ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ರಾಹುಲ್ ಇತ್ತೀಚೆಗೆ ODI ಸರಣಿಯ ಭಾಗವಾಗಿದ್ದರು, ಆದರೆ ಎರಡನೇ ODI ನಲ್ಲಿ ಮಾತ್ರ ಕಾಣಿಸಿಕೊಳ್ಳಲು ಸಾಧ್ಯವಾಯಿತು.
ಎರಡನೇ ಏಕದಿನ ಪಂದ್ಯದ ವೇಳೆ ರಾಹುಲ್ ಗಾಯಗೊಂಡಿದ್ದು, ಅಕ್ಸರ್ ಪಟೇಲ್ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಭಾರತೀಯ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಫೆಬ್ರವರಿ 9 ರಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ರಾಹುಲ್ ಎಡ ಮಂಡಿರಜ್ಜು ನೋವಿಗೆ ಒಳಗಾದರೆ, ಅಕ್ಸರ್ ಪಟೇಲ್ ಅವರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಎನ್ಸಿಎನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
? NEWS ?: KL Rahul and Axar Patel ruled out of @Paytm #INDvWI T20I Series. #TeamIndia
The All-India Senior Selection Committee has named Rututaj Gaikwad and Deepak Hooda as replacements.
More Details ?
— BCCI (@BCCI) February 11, 2022
ಈ ಇಬ್ಬರು ಆಟಗಾರರಿಗೆ ಸ್ಥಾನ
ಇದರೊಂದಿಗೆ ಬಿಸಿಸಿಐ ರಾಹುಲ್, ಅಕ್ಷರ್ ಬದಲಿಗೆ ಸ್ಥಾನ ಪಡೆದಿರುವ ಇಬ್ಬರೂ ಆಟಗಾರರ ಹೆಸರನ್ನೂ ಕೂಡ ಪ್ರಕಟಿಸಿದೆ. ಮಂಡಳಿಯು ಯುವ ಆರಂಭಿಕ ಆಟಗಾರ ರಿತುರಾಜ್ ಗಾಯಕ್ವಾಡ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅರೆಕಾಲಿಕ ಆಫ್ ಸ್ಪಿನ್ನರ್ ದೀಪಕ್ ಹೂಡಾ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ. ಇಬ್ಬರೂ ಆಟಗಾರರು ಏಕದಿನ ಸರಣಿಯ ಭಾಗವಾಗಿದ್ದರು. ODI ಸರಣಿಗೆ ಸ್ವಲ್ಪ ಮೊದಲು ರಿತುರಾಜ್ ಸ್ವತಃ ಸೋಂಕಿಗೆ ಒಳಗಾಗಿದ್ದರು, ಇದರಿಂದಾಗಿ ಅವರು ಯಾವುದೇ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ, ದೀಪಕ್ ಹೂಡಾ ಮೊದಲ ಎರಡು ODIಗಳೊಂದಿಗೆ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ಜೊತೆಗೆ ಎರಡೂ ODIಗಳಲ್ಲಿ ಉಪಯುಕ್ತ ಇನ್ನಿಂಗ್ಸ್ ಆಡಿದರು ಮತ್ತು ವಿಕೆಟ್ ಪಡೆದರು.
ಶ್ರೀಲಂಕಾ ಸರಣಿಗೆ ಮರಳುವ ನಿರೀಕ್ಷೆ
ರಾಹುಲ್ ವಿಷಯಕ್ಕೆ ಬಂದರೆ, ಭಾರತದ ಉಪನಾಯಕ ಏಕದಿನ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ. ತನ್ನ ಸಹೋದರಿಯ ಮದುವೆಯಿಂದಾಗಿ, ಅವರು ಮೊದಲ ODI ಆಡಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ODI ನಲ್ಲಿ ಅವರು 49 ರನ್ಗಳ ಇನ್ನಿಂಗ್ಸ್ ಆಡಿದರು. ಗಾಯದ ಸಮಸ್ಯೆಯಿಂದಾಗಿ ಅವರು ಮೂರನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧದ T20I ಸರಣಿಗೆ ರಾಹುಲ್ ಮತ್ತು ಅಕ್ಷರ್ ಮರಳುವ ಭರವಸೆಯಲ್ಲಿದ್ದಾರೆ.
ಟಿ20 ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್ , ಹರ್ಷಲ್ ಪಟೇಲ್, ರಿತುರಾಜ್ ಗಾಯಕ್ವಾಡ್ ಮತ್ತು ದೀಪಕ್ ಹೂಡಾ
ಇದನ್ನೂ ಓದಿ:IND vs WI: ಪಂತ್- ಅಯ್ಯರ್ ಅರ್ಧಶತಕ, ದೀಪಕ್- ಸುಂದರ್ ಜೊತೆಯಾಟ; ವಿಂಡೀಸ್ ಗೆಲುವಿಗೆ 266 ರನ್ ಟಾರ್ಗೆಟ್
Published On - 6:46 pm, Fri, 11 February 22