ಭಾರತ-ವೆಸ್ಟ್ ಇಂಡೀಸ್ (IND vs WI) ನಡುವಣ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಕಾದಿತ್ತು. ಅದೇನೆಂದರೆ ಟೀಮ್ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ (Suryakumar Yadav) ಆರಂಭಿಕರಾಗಿ ಕಾಣಿಸಿಕೊಂಡಿದ್ದರು. ತಂಡದಲ್ಲಿ ಹಲವು ಆರಂಭಿಕ ಆಟಗಾರರಿದ್ದರೂ ಸೂರ್ಯಕುಮಾರ್ ಯಾದವ್ ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸುವ ಮೂಲಕ ಗಮನ ಸೆಳೆದರು. ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಯತ್ನಿಸಿದ ಸೂರ್ಯ ಕುಮಾರ್ ಯಾದವ್ ಅತ್ಯುತ್ತಮ ಶಾಟ್ಗಳನ್ನು ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು.
ಅದರಲ್ಲೂ ಅಲ್ಝಾರಿ ಜೋಸೆಫ್ ಎಸೆದ ನಾಲ್ಕನೇ ಓವರ್ನ 2ನೇ ಎಸೆತದಲ್ಲಿ ವಿಚಿತ್ರ ಶಾಟ್ ಮೂಲಕ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಅಲ್ಝಾರಿ ಎಸೆದ 146 ಕಿಮೀ ವೇಗದ ಬಾಲ್ ಅನ್ನು ಸೂರ್ಯಕುಮಾರ್ ಯಾದವ್ ಲಾಂಗ್ ಲೆಗ್ ನಲ್ಲಿ ವಿಶಿಷ್ಟವಾಗಿ ಸಿಕ್ಸರ್ ಬಾರಿಸಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದರು. ಇದಾಗ್ಯೂ ದೀರ್ಘ ಇನಿಂಗ್ಸ್ ಆಡುವಲ್ಲಿ ಸೂರ್ಯಕುಮಾರ್ ಯಾದವ್ ವಿಫಲರಾದರು. ಕೇವಲ 16 ಎಸೆತಗಳಲ್ಲಿ 3 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 24 ರನ್ ಬಾರಿಸಿ ಸೂರ್ಯಕುಮಾರ್ ಯಾದವ್ ವಿಕೆಟ್ ಒಪ್ಪಿಸಿದ್ದರು.
#SuryakumarYadav start with his own way #surya #rohit #INDvsWIt20 #six pic.twitter.com/qUGJPNprtN
— cricket_lover♥️ (@cricket_lover55) July 29, 2022
31ರ ಹರೆಯದ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಟಿ20 ದಾಖಲೆ ಅತ್ಯುತ್ತಮವಾಗಿದೆ. ಈ ಪಂದ್ಯಕ್ಕೂ ಮುನ್ನ ಅವರು 19 ಪಂದ್ಯಗಳ 17 ಇನ್ನಿಂಗ್ಸ್‌ಗಳಲ್ಲಿ 38ರ ಸರಾಸರಿಯಲ್ಲಿ 537 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು 4 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇನ್ನು ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅವರ ಒಟ್ಟಾರೆ T20 ವೃತ್ತಿಜೀವನದ ಅಂಕಿ ಅಂಶಗಳನ್ನು ನೋಡುವುದಾದರೆ, 213 ಪಂದ್ಯಗಳ 191 ಇನ್ನಿಂಗ್ಸ್‌ಗಳಲ್ಲಿ 32 ರ ಸರಾಸರಿಯಲ್ಲಿ 4760 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು 28 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್ನಲ್ಲಿ 490 ಕ್ಕೂ ಹೆಚ್ಚು ಬೌಂಡರಿಗಳು ಮತ್ತು 170 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿ ಸೂರ್ಯಕುಮಾರ್ ಯಾದವ್ ಮಿಂಚಿದ್ದಾರೆ. ಇದೀಗ ಆರಂಭಿಕನಾಗಿ ಕಣಕ್ಕಿಳಿಯುವ ಮೂಲಕ ಸೂರ್ಯಕುಮಾರ್ ಟೀಮ್ ಇಂಡಿಯಾ ಪರ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.