IND vs WI: ಭಾರತ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ

IND vs WI: ಭಾರತ ಮಹಿಳಾ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಟಿ20 ಮತ್ತು ಏಕದಿನ ಸರಣಿ ಆಡಲಿದೆ. ಟಿ20 ಸರಣಿಯು ಡಿಸೆಂಬರ್ 15 ರಿಂದ 19 ರವರೆಗೆ ಮುಂಬೈನಲ್ಲಿ ನಡೆಯಲಿದ್ದು, ಏಕದಿನ ಸರಣಿಯು ಡಿಸೆಂಬರ್ 22 ರಿಂದ 27 ರವರೆಗೆ ಬರೋಡಾದಲ್ಲಿ ನಡೆಯಲಿದೆ. ಇದೀಗ ಈ ಎರಡೂ ಸರಣಿಗಳಿಗಾಗಿ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ.

IND vs WI: ಭಾರತ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ
ಭಾರತ- ವೆಸ್ಟ್ ಇಂಡೀಸ್ ವನಿತಾ ಪಡೆ
Follow us
ಪೃಥ್ವಿಶಂಕರ
|

Updated on:Nov 28, 2024 | 3:18 PM

ತವರಿನಲ್ಲಿ ನ್ಯೂಜಿಲೆಂಡ್ ಮಹಿಳಾ ತಂಡವನ್ನು ಬಗ್ಗುಬಡಿದಿದ್ದ ಭಾರತ ವನಿತಾ ಪಡೆದ ಇದೀಗ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿ ನಿಂತಿದೆ. ಉಭಯ ತಂಡಗಳ ನಡುವೆ ಡಿಸೆಂಬರ್ 5 ರಿಂದ 11 ರವರೆಗೆ 3 ಪಂದ್ಯಗಳ ಏಕದಿನ ಸರಣಿ ನಡೆಯಲ್ಲಿದೆ. ಆ ಬಳಿಕ ಟೀಂ ಇಂಡಿಯಾ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯನ್ನು ಆಡಲಿದೆ. ಭಾರತ ಪ್ರವಾಸದಲ್ಲಿ ವಿಂಡೀಸ್ ಟಿ20 ಮತ್ತು ಏಕದಿನ ಸರಣಿಗಳನ್ನು ಆಡಲಿದೆ. ಇದೀಗ ಈ ಎರಡೂ ಸರಣಿಗಳಿಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ 14 ಸದಸ್ಯರ ತಂಡವನ್ನು ಪ್ರಕಟಿಸಿದೆ. ಡಿಸೆಂಬರ್ 15 ರಿಂದ 19 ರವರೆಗೆ ನಡೆಯಲ್ಲಿರುವ ಟಿ20 ಸರಣಿಯೊಂದಿಗೆ ವಿಂಡೀಸ್ ತಂಡದ ಭಾರತ ಪ್ರವಾಸ ಆರಂಭವಾಗಲಿದೆ. ಟಿ20 ಸರಣಿಯಲ್ಲಿ ಹೇಲಿ ಮ್ಯಾಥ್ಯೂಸ್ ವಿಂಡೀಸ್ ತಂಡವನ್ನು ಮುನ್ನಡೆಸಲಿದ್ದು, ಶೆಮೈನ್ ಕ್ಯಾಂಪ್ಬೆಲ್ ಉಪನಾಯಕತ್ವವನ್ನು ನಿರ್ವಹಿಸಲಿದ್ದಾರೆ.

ಒಂದೇ ಕ್ರೀಡಾಂಗಣದಲ್ಲಿ 3 ಪಂದ್ಯಗಳು

ಈ ಸರಣಿಯ ಎಲ್ಲಾ ಮೂರು ಪಂದ್ಯಗಳು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಇದರಿಂದ ಉಭಯ ತಂಡಗಳ ಆಟಗಾರರು ಒಂದು ಕ್ರೀಡಾಂಗಣದಿಂದ ಇನ್ನೊಂದು ಕ್ರೀಡಾಂಗಣಕ್ಕೆ ಪ್ರಯಾಣಿಸಲು ಸಮಯ ಉಳಿತಾಯವಾಗಲಿದೆ. ಹಾಗಾಗಿ ಎರಡೂ ತಂಡಗಳಿಗೆ ಅಭ್ಯಾಸಕ್ಕೆ ಹೆಚ್ಚಿನ ಸಮಯ ಸಿಗಲಿದೆ.

ಟೀಂ ಇಂಡಿಯಾ ಘೋಷಣೆ ಯಾವಾಗ?

ಈ ಟಿ20 ಸರಣಿಗೆ ಭಾರತ ಮಹಿಳಾ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಅಥವಾ ಆಸ್ಟ್ರೇಲಿಯಾ ಪ್ರವಾಸದ ನಂತರ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಬಹುದು. ಏತನ್ಮಧ್ಯೆ, ಈ ಟಿ20 ಸರಣಿಯ ನಂತರ, ಎರಡೂ ತಂಡಗಳು ಏಕದಿನ ಸರಣಿಯನ್ನು ಆಡಲಿವೆ. ಈ ಏಕದಿನ ಸರಣಿಯನ್ನು ಡಿಸೆಂಬರ್ 22 ರಿಂದ 27 ರವರೆಗೆ ಆಯೋಜಿಸಲಾಗಿದೆ. ಈ ಸರಣಿಯ ಎಲ್ಲಾ ಮೂರು ಪಂದ್ಯಗಳು ಬರೋಡಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.

ಟಿ20 ಸರಣಿ ವೇಳಾಪಟ್ಟಿ ಹೀಗಿದೆ

  1. ಮೊದಲ ಪಂದ್ಯ, ಡಿಸೆಂಬರ್ 15, ಸಂಜೆ 7 ಗಂಟೆಗೆ, ನವಿ ಮುಂಬೈ
  2. ಎರಡನೇ ಪಂದ್ಯ, ಡಿಸೆಂಬರ್ 17, ಸಂಜೆ 7 ಗಂಟೆಗೆ, ನವಿ ಮುಂಬೈ
  3. ಮೂರನೇ ಪಂದ್ಯ, ಡಿಸೆಂಬರ್ 19, ಸಂಜೆ 7 ಗಂಟೆಗೆ, ನವಿ ಮುಂಬೈ

ಏಕದಿನ ಸರಣಿ ವೇಳಾಪಟ್ಟಿ

  1. ಮೊದಲ ಪಂದ್ಯ, ಡಿಸೆಂಬರ್ 22, ಮಧ್ಯಾಹ್ನ 1.30, ಬರೋಡಾ
  2. ಎರಡನೇ ಪಂದ್ಯ, ಡಿಸೆಂಬರ್ 24, ಮಧ್ಯಾಹ್ನ 1.30, ಬರೋಡಾ
  3. ಮೂರನೇ ಪಂದ್ಯ, ಡಿಸೆಂಬರ್ 27, ಬೆಳಗ್ಗೆ 9:30, ಬರೋಡಾ

ಟಿ20 ಸರಣಿಗೆ ವಿಂಡೀಸ್ ತಂಡ: ಹೇಲಿ ಮ್ಯಾಥ್ಯೂಸ್ (ನಾಯಕಿ), ಶೆಮೈನ್ ಕ್ಯಾಂಪ್ಬೆಲ್ (ಉಪನಾಯಕಿ), ಆಲಿಯಾ ಅಲೆನ್, ಶಾಮಿಲಿಯಾ ಕಾನೆಲ್, ನೆರಿಸ್ಸಾ ಕ್ರಾಫ್ಟನ್, ಡಿಯಾಂಡ್ರಾ ಡಾಟಿನ್, ಅಫೀ ಫ್ಲೆಚರ್, ಶಬಿಕಾ ಘಜ್ನಬಿ, ಚಿನೆಲ್ ಹೆನ್ರಿ, ಜೈದಾ ಜೇಮ್ಸ್, ಕಿಯಾನಾ ಮನ್ಸ್ ಜೋಸೆಫ್, ಕಿಯಾನಾ ಮನ್ಸ್ ಜೋಸೆಫ್, ಕರಿಷ್ಮಾ ರಾಮ್ಹರಕ್ ಮತ್ತು ರಶಾದಾ ವಿಲಿಯಮ್ಸ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Thu, 28 November 24

Daily Devotional: ಹಲ್ಲಿನ ಮೇಲೆ ಹಲ್ಲು ಬಂದರೆ ಅದೃಷ್ಟವೇ?
Daily Devotional: ಹಲ್ಲಿನ ಮೇಲೆ ಹಲ್ಲು ಬಂದರೆ ಅದೃಷ್ಟವೇ?
ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ
ಈ ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ
ಯುಐ, ಮ್ಯಾಕ್ಸ್ ಒಟ್ಟಿಗೆ ರಿಲೀಸ್ ಆಗುತ್ತಿರುವ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ
ಯುಐ, ಮ್ಯಾಕ್ಸ್ ಒಟ್ಟಿಗೆ ರಿಲೀಸ್ ಆಗುತ್ತಿರುವ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..