AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ZIM: ರವಿ ಬಿಷ್ಣೋಯ್ ಸೂಪರ್‌ಮ್ಯಾನ್ ಕ್ಯಾಚ್​​ಗೆ ಇಡೀ ಕ್ರೀಡಾಂಗಣವೇ ಗಪ್ ​ಚುಪ್; ವಿಡಿಯೋ

Ravi Bishnoi: ಜಿಂಬಾಬ್ವೆ ಇನ್ನಿಂಗ್ಸ್​ನ ನಾಲ್ಕನೇ ಓವರ್‌ ಈ ಅದ್ಭುತ ದೃಶ್ಯಕ್ಕೆ ಸಾಕ್ಷಿಯಾಯಿತು. ಅವೇಶ್ ಖಾನ್ ಬೌಲ್ ಮಾಡಿದ ಈ ಓವರ್​ನ ಮೊದಲ ಎಸೆತವನ್ನು, ಬ್ರಿಯಾನ್ ಬೆನೆಟ್ ಪಾಯಿಂಟ್ ಕಡೆಗೆ ಬಾರಿಸಿದರು. ಚೆಂಡು ಬೌಂಡರಿ ದಾಟುವಂತೆ ಕಾಣುತ್ತಿತ್ತು. ಆದರೆ ಇಲ್ಲಿ ನಿಂತಿದ್ದ ರವಿ ಬಿಷ್ಣೋಯ್, ಮೇಲಕ್ಕೆ ನೆಗೆದು ಅದ್ಭುತ ಕ್ಯಾಚ್ ಹಿಡಿದರು.

IND vs ZIM: ರವಿ ಬಿಷ್ಣೋಯ್ ಸೂಪರ್‌ಮ್ಯಾನ್ ಕ್ಯಾಚ್​​ಗೆ ಇಡೀ ಕ್ರೀಡಾಂಗಣವೇ ಗಪ್ ​ಚುಪ್; ವಿಡಿಯೋ
ರವಿ ಬಿಷ್ಣೋಯ್
ಪೃಥ್ವಿಶಂಕರ
|

Updated on: Jul 10, 2024 | 9:41 PM

Share

ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಭಾರತ ತಂಡ ಬಲಿಷ್ಠ ಪುನರಾಗಮನ ಮಾಡಿದೆ. ಎರಡನೇ ಪಂದ್ಯವನ್ನು 100 ರನ್‌ಗಳಿಂದ ಗೆದ್ದಿದ್ದ ಟೀಂ ಇಂಡಿಯಾ ಇದೀಗ 5 ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ 23 ರನ್‌ಗಳ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಶುಭ್​ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ 4 ವಿಕೆಟ್‌ಗೆ 182 ರನ್ ಗಳಿಸಿತು. ಉತ್ತರವಾಗಿ ಜಿಂಬಾಬ್ವೆ 6 ವಿಕೆಟ್‌ಗೆ 158 ರನ್ ಗಳಿಸಲಷ್ಟೇ ಶಕ್ತವಾಯಿತು. ಆದಾಗ್ಯೂ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬೌಲರ್ ರವಿ ಬಿಷ್ಣೋಯ್ ಹಿಡಿದ ಅದೊಂದು ಅತ್ಯುತ್ತಮ ಕ್ಯಾಚ್ ಪಂದ್ಯದ ಹೈಲೇಟ್ ಎನಿಸಿಕೊಂಡಿತು.

ನಾಲ್ಕನೇ ಓವರ್‌ನಲ್ಲಿ ಅದ್ಭುತ ಕ್ಯಾಚ್

ವಾಸ್ತವವಾಗಿ ಜಿಂಬಾಬ್ವೆ ಇನ್ನಿಂಗ್ಸ್​ನ ನಾಲ್ಕನೇ ಓವರ್‌ ಈ ಅದ್ಭುತ ದೃಶ್ಯಕ್ಕೆ ಸಾಕ್ಷಿಯಾಯಿತು. ಅವೇಶ್ ಖಾನ್ ಬೌಲ್ ಮಾಡಿದ ಈ ಓವರ್​ನ ಮೊದಲ ಎಸೆತವನ್ನು, ಬ್ರಿಯಾನ್ ಬೆನೆಟ್ ಪಾಯಿಂಟ್ ಕಡೆಗೆ ಬಾರಿಸಿದರು. ಚೆಂಡು ಬೌಂಡರಿ ದಾಟುವಂತೆ ಕಾಣುತ್ತಿತ್ತು. ಆದರೆ ಇಲ್ಲಿ ನಿಂತಿದ್ದ ರವಿ ಬಿಷ್ಣೋಯ್, ಮೇಲಕ್ಕೆ ನೆಗೆದು ಅದ್ಭುತ ಕ್ಯಾಚ್ ಹಿಡಿದರು. ಬಿಷ್ಣೋಯ್ ಅವರ ಈ ಸೂಪರ್‌ಮ್ಯಾನ್ ಅವತಾರವನ್ನು ನೋಡಿ ತಂಡದ ಸಹ ಆಟಗಾರರು ಕೂಡ ಬೆರಗಾದರು. ಈ ಮೂಲಕ ಬಿಷ್ಣೋಯ್ ಅವರ ಅತ್ಯುತ್ತಮ ಫೀಲ್ಡಿಂಗ್​ನಿಂದಾಗಿ ಬೆನೆಟ್ ಕೇವಲ 4 ರನ್ ಗಳಿಗೆ ಪೆವಿಲಿಯನ್​ಗೆ ಮರಳಬೇಕಾಯಿತು.

ಬೌಲಿಂಗ್​ನಲ್ಲಿ ಒಂದೇ ಒಂದು ವಿಕೆಟ್ ಸಿಗಲಿಲ್ಲ

ಈ ಪಂದ್ಯದಲ್ಲಿ ಫೀಲ್ಡಿಂಗ್ ಮೂಲಕ ಎಲ್ಲರ ಗಮನ ಸೆಳೆದ ಬಿಷ್ಣೋಯ್​ಗೆ ಈ ಪಂದ್ಯದಲ್ಲಿ ಒಂದೂ ವಿಕೆಟ್ ಬೀಳಲಿಲ್ಲ. ತಮ್ಮ ಖೋಟಾದ ಪೂರ್ಣ 4 ಓವರ್‌ಗಳನ್ನು ಬೌಲ್ ಮಾಡಿದ ಅವರು ತುಂಬಾ ದುಬಾರಿಯಾಗಿದ್ದಲ್ಲದೆ 37 ರನ್ ನೀಡಿದರು. ಬಿಷ್ಣೋಯ್ ಮೊದಲ ಪಂದ್ಯದಲ್ಲಿ 13 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಎರಡನೇ ಪಂದ್ಯದಲ್ಲೂ ಅವರು ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಕೇವಲ 11 ರನ್ ನೀಡಿ 2 ವಿಕೆಟ್ ಪಡೆದಿದ್ದರು.

ಪಂದ್ಯ ಹೇಗಿತ್ತು?

ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ಇದಕ್ಕುತ್ತರವಾಗಿ ಜಿಂಬಾಬ್ವೆ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 159 ರನ್‌ ಗಳಿಸಿ 23 ರನ್‌ಗಳಿಂದ ಸೋಲನುಭವಿಸಿತು. ಟೀಂ ಇಂಡಿಯಾದ ಪರ ಯಶಸ್ವಿ ಜೈಸ್ವಾಲ್ 36 ರನ್, ನಾಯಕ ಶುಭ್​ಮನ್ ಗಿಲ್ 66 ರನ್, ಅಭಿಷೇಕ್ ಶರ್ಮಾ 10 ರನ್, ರುತುರಾಜ್ ಗಾಯಕ್ವಾಡ್ 49 ರನ್ ಮತ್ತು ಸಂಜು ಸ್ಯಾಮ್ಸನ್ 12 ರನ್ ಕೊಡುಗೆ ನೀಡಿದರು. ಬೌಲಿಂಗ್​ನಲ್ಲಿ ಮ್ಯಾಜಿಕ್ ಮಾಡಿದ ವಾಷಿಂಗ್ಟನ್ ಸುಂದರ್ 4 ಓವರ್​ಗಳಲ್ಲಿ 15 ರನ್ ನೀಡಿ 3 ವಿಕೆಟ್ ಪಡೆದರು. ಅವೇಶ್ ಖಾನ್ 2 ಮತ್ತು ಖಲೀಲ್ ಅಹ್ಮದ್ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ