IND vs ZIM: ಹರಾರೆಯಲ್ಲಿ 4ನೇ ಟಿ20 ಪಂದ್ಯ; ಪಿಚ್ ಯಾರಿಗೆ ಸಹಕಾರಿ? ಪಂದ್ಯದ ದಿನ ಹವಾಮಾನ ಹೇಗಿರಲಿದೆ?
IND vs ZIM: ಈ ಪಂದ್ಯವು ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ. ಅಕ್ಯುವೆದರ್ ವರದಿಯ ಪ್ರಕಾರ, ಈ ಅವಧಿಯಲ್ಲಿ ತಾಪಮಾನವು ಸುಮಾರು 23 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಪಂದ್ಯದ ವೇಳೆ ಗಾಳಿಯ ವೇಗ ಗಂಟೆಗೆ 9 ಕಿಲೋಮೀಟರ್ ಆಗಿರಬಹುದು. ಇದರರ್ಥ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆಗಳಿಲ್ಲ ಎಂಬುದು ಖಚಿತವಾಗಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಎರಡೂ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯವನ್ನು ಗೆದ್ದರೆ ಭಾರತ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸಲಿದೆ. ಇತ್ತ ಜಿಂಬಾಬ್ವೆ ಕೂಡ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಪುನರಾಗಮನ ಮಾಡಲು ಬಯಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎರಡೂ ತಂಡಗಳು ಶತಾಯಗತಾಯ ಗೆಲ್ಲುವ ಇರಾದೆಯೊಂದಿಗೆ ಅಖಾಡಕ್ಕಿಳಿಯಲಿವೆ. ಅದಕ್ಕೂ ಮುನ್ನ ಹರಾರೆ ಪಿಚ್ ಯಾರಿಗೆ ಸಹಕಾರಿ? ಹಾಗೂ ಪಂದ್ಯದ ದಿನ ಹವಾಮಾನ ಹೇಗಿರಲಿದೆ ಎಂಬುದನ್ನು ತಿಳಿಯೋಣ.
ಪಿಚ್ ವರದಿ ಹೀಗಿದೆ
ಈ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭವಿದೆ. ಗುರಿ ಬೆನ್ನಟ್ಟಿದ ತಂಡ ಪ್ರತಿ ಬಾರಿಯೂ ಸಂಕಷ್ಟ ಎದುರಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ತಂಡಗಳು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತವೆ. ಇಲ್ಲಿ ಆಡಿದ 44 ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 24 ಬಾರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರೆ, 18 ಬಾರಿ ಗುರಿ ಬೆನ್ನತ್ತಿದ ತಂಡ ಗೆದ್ದಿದೆ. ಇಲ್ಲಿ ಸರಾಸರಿ ಸ್ಕೋರ್ 160 ರನ್.
ಹವಾಮಾನ ಹೇಗಿರಲಿದೆ?
ನಾವು ಹವಾಮಾನದ ಬಗ್ಗೆ ಮಾತನಾಡಿದರೆ, ಈ ಪಂದ್ಯವು ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಗುತ್ತದೆ. ಅಕ್ಯುವೆದರ್ ವರದಿಯ ಪ್ರಕಾರ, ಈ ಅವಧಿಯಲ್ಲಿ ತಾಪಮಾನವು ಸುಮಾರು 23 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಪಂದ್ಯದ ವೇಳೆ ಗಾಳಿಯ ವೇಗ ಗಂಟೆಗೆ 9 ಕಿಲೋಮೀಟರ್ ಆಗಿರಬಹುದು. ಹೀಗಾಗಿ ಪಂದ್ಯದ ಆರಂಭದಲ್ಲಿ ವೇಗದ ಬೌಲರ್‌ಗಳು ಸಹಾಯ ಪಡೆಯಬಹುದು. ಇದರರ್ಥ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆಗಳಿಲ್ಲ ಎಂಬುದು ಖಚಿತವಾಗಿದೆ.
ಎರಡೂ ತಂಡಗಳು
ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಮುಖೇಶ್ ಕುಮಾರ್, ರಿಯಾನ್ ಪರಾಗ್, ಧ್ರುವ ಜುರೆಲ್, ಖಲೀಲ್ ಅಹ್ಮದ್, ತುಷಾರ್ ದೇಷ್ಪಾನ್.
ಜಿಂಬಾಬ್ವೆ ತಂಡ: ಸಿಕಂದರ್ ರಾಝಾ (ನಾಯಕ), ಫರಾಜ್ ಅಕ್ರಮ್, ಬ್ರಿಯಾನ್ ಬೆನೆಟ್, ಜೊನಾಥನ್ ಕ್ಯಾಂಪ್‌ಬೆಲ್, ಟೆಂಡೈ ಚಟಾರಾ, ಲ್ಯೂಕ್ ಜೊಂಗ್ವೆ, ಇನ್ನೋಸೆಂಟ್ ಕೀಯಾ, ಕ್ಲೈವ್ ಎಂ, ವೆಸ್ಲಿ ಮೆಡ್ವೆರೆ, ಟಿ ಮರುಮಣಿ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ರೆಂಡನ್ ಮಾವುತಾ, ಬ್ಲೆಸ್ಸಿಂಗ್ ಮುಜರಬಾನಿ, ಡಿಯೋನ್ ಮೈಯರ್ಸ್, ಆಂಟಮ್ ನಕ್ವಿಯರ್ಸ್, ರಿಚರ್ಡ್ ಅಂಗರಾವಾ, ಮಿಲ್ಟನ್ ಶುಂಬಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
