ಭಾರತ ಮತ್ತು ಜಿಂಬಾಬ್ವೆ (India and Zimbabwe) ನಡುವಿನ ಏಕದಿನ ಸರಣಿ ಆರಂಭವಾಗಿದೆ. ಟೀಂ ಇಂಡಿಯಾದ ಕೆಲವು ಆಟಗಾರರಿಗೆ ಈ ಸರಣಿಯನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗುತ್ತಿದ್ದು, ಇದರಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (KL Rahul) ಕೂಡ ಇದ್ದಾರೆ. ಎರಡು ತಿಂಗಳಿಗೂ ಹೆಚ್ಚು ಕಾಲ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ರಾಹುಲ್, ಸುಮಾರು ಮೂರು ತಿಂಗಳ ನಂತರ ಮೊದಲ ಬಾರಿಗೆ ಮೈದಾನಕ್ಕಿಳಿದಿದ್ದಾರೆ. ಬ್ಯಾಟ್ಸ್‌ಮನ್ ಆಗಿ ಇದು ಅವರಿಗೆ ಉತ್ತಮ ಅವಕಾಶವಾಗಿದೆ, ಆದರೆ ಆಯ್ಕೆ ಮಂಡಳಿಯ ಕಣ್ಣುಗಳು ಅವರ ನಾಯಕತ್ವದ ಮೇಲೂ ಇದೆ. ಯಾಕೆಂದರೆ ನಾಯಕನಾಗಿ ರಾಹುಲ್ ಇದುವರೆಗೆ ಯಾವುದೇ ಯಶಸ್ಸು ಸಾಧಿಸಿರಲಿಲ್ಲ. ಆದರೆ ಆರಂಭಿಕ ವೈಫಲ್ಯದ ನಂತರ ಇದೀಗ ರಾಹುಲ್ ಗೆಲುವಿನ ಖಾತೆ ತೆರೆಯಲಾಗಿದೆ.
ಕೊರೊನಾದಿಂದ ಗುಣಮುಖರಾಗಿದ್ದ ರಾಹುಲ್ ಕೊನೆಯ ಕ್ಷಣದಲ್ಲಿ ಈ ಪ್ರವಾಸಕ್ಕೆ ಸೇರ್ಪಡೆಗೊಂಡರು. ಅವರಿಗಿಂತ ಮೊದಲು, ತಂಡದ ಕಮಾಂಡ್ ಶಿಖರ್ ಧವನ್ ಕೈಯಲ್ಲಿತ್ತು, ಆದರೆ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಏಷ್ಯಾಕಪ್‌ಗೆ ಮೊದಲು ವೇಗವನ್ನು ಪಡೆಯಲು ರಾಹುಲ್ ಅವರನ್ನು ಈ ಸರಣಿಯಲ್ಲಿ ಟೀಮ್ ಇಂಡಿಯಾದ ಭಾಗವಾಗಿ ಮಾಡಲಾಯಿತು. ತಂಡದ ನಿಯಮಿತ ಉಪನಾಯಕನಾಗಿದ್ದರಿಂದ ನಾಯಕತ್ವವನ್ನು ಅವರಿಗೆ ಹಸ್ತಾಂತರಿಸಲಾಯಿತು.
ಸತತ ನಾಲ್ಕು ಸೋಲುಗಳ ನಂತರ ಗೆಲುವು
ಆಗಸ್ಟ್ 18 ಗುರುವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು ಟೀಂ ಇಂಡಿಯಾ 10 ವಿಕೆಟ್‌ಗಳಿಂದ ಸೋಲಿಸಿತು. ಭಾರತ ಮೊದಲು ಜಿಂಬಾಬ್ವೆಯನ್ನು ಕೇವಲ 189 ರನ್‌ಗಳಿಗೆ ಆಲೌಟ್ ಮಾಡಿತು. ನಂತರ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಶತಕದ ಆರಂಭಿಕ ಜೊತೆಯಾಟದ ಆಧಾರದಲ್ಲಿ ಸುಲಭ ಜಯ ಸಾಧಿಸಿತು. ಈ ಮೂಲಕ ಐದನೇ ಪಂದ್ಯದಲ್ಲಿ ನಾಯಕನಾಗಿ ರಾಹುಲ್ ಮೊದಲ ಗೆಲುವು ಪಡೆದಿದ್ದಾರೆ.
That's that from the 1st ODI.
An unbeaten 192 run stand between @SDhawan25 & @ShubmanGill as #TeamIndia win by 10 wickets.
Scorecard – https://t.co/P3fZPWilGM #ZIMvIND pic.twitter.com/jcuGMG0oIG
— BCCI (@BCCI) August 18, 2022
ಈ ವರ್ಷದ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ರಾಹುಲ್ ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿದ್ದರು. ನಂತರ ಈ ಪ್ರವಾಸದಲ್ಲಿ ಅವರು ODI ಸರಣಿಯಲ್ಲಿ ಎಲ್ಲಾ ಮೂರು ಪಂದ್ಯಗಳಿಗೆ ನಾಯಕರಾಗಿದ್ದರು. ಆದರೆ ಈ ಎಲ್ಲಾ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋತಿತ್ತು.
ರಾಹುಲ್‌ಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ
ಆದರೆ, ಈ ಪಂದ್ಯದಲ್ಲಿ ರಾಹುಲ್‌ಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಏಷ್ಯಾಕಪ್‌ಗೆ ಮೊದಲು ಬ್ಯಾಟಿಂಗ್ ಲಯ ಪಡೆಯಲು ಧವನ್ ಅವರೊಂದಿಗೆ ಓಪನಿಂಗ್ ಮಾಡಲಿದ್ದು, ಇದರಿಂದ ಅವರು ಕ್ರೀಸ್‌ನಲ್ಲಿ ಹೆಚ್ಚು ಸಮಯ ನಿಂತು ಮತ್ತೆ ಲಯಕ್ಕೆ ಮರಳುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದರು. ಆದರೆ ಈ ಪಂದ್ಯದಲ್ಲಿ ನಡೆದದ್ದೆ ಬೇರೆ. ರಾಹುಲ್ ಬದಲಿಗೆ ಗಿಲ್ ಆರಂಭಿಕರಾಗಿ ಕಣಕ್ಕಿಳಿದು ಅಜೇಯರಾಗಿ ಪಂದ್ಯವನ್ನು ಮುಗಿಸಿದ್ದರು. ಇದರಿಂದ ರಾಹುಲ್‌ಗೆ ಬ್ಯಾಟಿಂಗ್ ಮಾಡುವ ಅವಕಾಶವೇ ಸಿಗಲಿಲ್ಲ. ಈಗ ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ರಾಹುಲ್‌ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗುವ ನಿರೀಕ್ಷೆ ಇದೆ. ಆದರೆ, ಬ್ಯಾಟಿಂಗ್ ಅವಕಾಶ ಸಿಗದಿದ್ದರೂ ನಾಯಕತ್ವದ ದಾಖಲೆಯನ್ನು ಸುಧಾರಿಸಿಕೊಳ್ಳಲು ರಾಹುಲ್ ಅವರೇ ಆದ್ಯತೆ ನೀಡಲಿದ್ದಾರೆ.