ವಿಶ್ವಕಪ್ ಸೂಪರ್ ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ ಬದಲಾವಣೆ: ಪಾಕಿಸ್ತಾನಕ್ಕೆ ಲಾಭ; ಟೀಂ ಇಂಡಿಯಾದ ಸ್ಥಾನವೇನು?

World Cup Super League: ಅಂದಹಾಗೆ, ಈ ಲೀಗ್‌ನಲ್ಲಿ ಪ್ರತಿ ಪಂದ್ಯವನ್ನು ಗೆಲ್ಲುವ ತಂಡವು 10 ಅಂಕಗಳನ್ನು ಪಡೆಯುತ್ತದೆ. ಪಂದ್ಯ ಟೈ ಆಗಿದ್ದರೆ ಐದು ಅಂಕಗಳನ್ನು ನೀಡಲಾಗುತ್ತದೆ. ಫಲಿತಾಂಶ ಇಲ್ಲದಿದ್ದಲ್ಲಿ, ಪಂದ್ಯ ರದ್ದತಿ ಮತ್ತು ಸೋಲಿನ ಸಂದರ್ಭದಲ್ಲಿ ಯಾವುದೇ ಅಂಕಗಳನ್ನು ನೀಡಲಾಗುವುದಿಲ್ಲ.

ವಿಶ್ವಕಪ್ ಸೂಪರ್ ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ ಬದಲಾವಣೆ: ಪಾಕಿಸ್ತಾನಕ್ಕೆ ಲಾಭ; ಟೀಂ ಇಂಡಿಯಾದ ಸ್ಥಾನವೇನು?
Follow us
TV9 Web
| Updated By: ಪೃಥ್ವಿಶಂಕರ

Updated on: Aug 19, 2022 | 2:24 PM

2023 ರ ಕ್ರಿಕೆಟ್ ವಿಶ್ವಕಪ್ (World Cup 2023) ಮುಂದಿನ ವರ್ಷ ಭಾರತದಲ್ಲಿ ನಡೆಯಲಿದೆ. ಇದರಲ್ಲಿ 10 ತಂಡಗಳು ಭಾಗವಹಿಸಲಿವೆ. ಈ 10 ತಂಡಗಳಲ್ಲಿ 8 ತಂಡಗಳನ್ನು ವಿಶ್ವಕಪ್ ಸೂಪರ್ ಲೀಗ್ (World Cup Super League) ಪಾಯಿಂಟ್ಸ್ ಟೇಬಲ್ ನಿರ್ಧರಿಸುತ್ತದೆ. ಈ ಪಾಯಿಂಟ್ ಪಟ್ಟಿಯಲ್ಲಿ ಪಾಕಿಸ್ತಾನ ಭಾರಿ ಜಿಗಿತ ಕಂಡಿದೆ. ಪಾಕಿಸ್ತಾನ ಕ್ರಿಕೆಟ್ ತಂಡ (Pakistan cricket team) ಸದ್ಯ ನೆದರ್ಲೆಂಡ್ಸ್ ಪ್ರವಾಸದಲ್ಲಿದ್ದು, ಈ ಸರಣಿಯಲ್ಲಿ ತಂಡ ಅಮೋಘ ಆಟ ಪ್ರದರ್ಶಿಸಿದೆ. ಇಲ್ಲಿಯವರೆಗೆ ಪಾಕಿಸ್ತಾನ ಎರಡು ಪಂದ್ಯಗಳನ್ನು ಆಡಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿತು. ಈ ಗೆಲುವಿನ ಬಳಿಕ ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದು, ಇದೇ ವೇಳೆ ಈ ಗೆಲುವಿನ ಲಾಭವನ್ನು ಪಾಕ್ ತಂಡ ಪಡೆದಿದೆ. ಈ ಗೆಲುವಿನ ನಂತರ, ODI ಸೂಪರ್ ಲೀಗ್‌ನಲ್ಲಿ ಪಾಕಿಸ್ತಾನದ ಸ್ಥಾನ ಬಲಗೊಂಡಿದೆ.

ನೆದರ್ಲೆಂಡ್ಸ್ ವಿರುದ್ಧದ ಗೆಲುವು ಪಾಕಿಸ್ತಾನವನ್ನು ಲೀಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಿದ್ದು, ಅರ್ಹತೆ ಪಡೆಯಲು ಹತ್ತಿರದಲ್ಲಿದೆ. ಈ ODI ಸೂಪರ್ ಲೀಗ್ 2023 ರಲ್ಲಿ ನಡೆಯಲಿರುವ ODI ವಿಶ್ವಕಪ್‌ಗೆ ಅರ್ಹತಾ ಲೀಗ್ ಆಗಿದೆ. ಪಾಕಿಸ್ತಾನದ ಹೊರತಾಗಿ ಭಾರತ ಕೂಡ ಗುರುವಾರ ಪಂದ್ಯವನ್ನು ಆಡಿದೆ. ಭಾರತವೂ ಈ ಪಂದ್ಯದಲ್ಲಿ ಗೆದ್ದೆದೆಯಾದರೂ ಲೀಗ್‌ನಲ್ಲಿ ಭಾರತದ ಏಳನೇ ಸ್ಥಾನದಲ್ಲಿದೆ.

ಟೀಂ ಇಂಡಿಯಾ ಚಿಂತಿಸುವ ಅಗತ್ಯವಿಲ್ಲ

ಇದನ್ನೂ ಓದಿ
Image
IND vs ZIM: ಜಿಂಬಾಬ್ವೆ ಮಣಿಸಿದ ಭಾರತ; ಮೊದಲ ಏಕದಿನ ಪಂದ್ಯದಲ್ಲಿ ಸೃಷ್ಟಿಯಾದ ದಾಖಲೆಗಳಿವು
Image
ದಾಂಪತ್ಯ ಜೀವನದಲ್ಲಿ ಬಿರುಕು: ವದಂತಿಗೆ ತೆರೆ ಎಳೆದ ಯುಜ್ವೇಂದ್ರ ಚಹಾಲ್; ಹೇಳಿದ್ದೇನು ಗೊತ್ತಾ?
Image
ದ್ರಾವಿಡ್ ಬೆಸ್ಟ್ ಕೋಚ್! ರವಿಶಾಸ್ತ್ರಿಗೆ ವೈಫಲ್ಯವನ್ನು ಸಹಿಸಿಕೊಳ್ಳಲಾಗುವುದಿಲ್ಲ: ದಿನೇಶ್ ಕಾರ್ತಿಕ್ ಸ್ಫೋಟಕ ಹೇಳಿಕೆ

ಈ ODI ಸೂಪರ್ ಲೀಗ್‌ನಲ್ಲಿ ಅಗ್ರ-8 ತಂಡಗಳು ನೇರವಾಗಿ 2023 ಕ್ಕೆ ಅರ್ಹತೆ ಪಡೆಯುತ್ತವೆ. ಉಳಿದ ತಂಡಗಳು ಐದು ಸಹವರ್ತಿ ತಂಡಗಳನ್ನು ಒಳಗೊಂಡಿರುವ ICC ಪುರುಷರ ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯವನ್ನು ಆಡಬೇಕಾಗುತ್ತದೆ. ಇದರೊಂದಿಗೆ ಮತ್ತೊಮ್ಮೆ ಎರಡು ತಂಡಗಳು ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ. ಪ್ರಸ್ತುತ ಲೀಗ್‌ನಲ್ಲಿ ಭಾರತದ ಸ್ಥಿತಿ ಉತ್ತಮವಾಗಿಲ್ಲ ಆದರೆ ಮುಂದಿನ ಏಕದಿನ ವಿಶ್ವಕಪ್ ಭಾರತದಲ್ಲಿಯೇ ನಡೆಯಲಿರುವುದರಿಂದ ಮತ್ತು ಆತಿಥೇಯ ಭಾರತ ಈಗಾಗಲೇ ಅರ್ಹತೆ ಪಡೆದಿರುವುದರಿಂದ ಇದು ಭಾರತಕ್ಕೆ ಆತಂಕಕಾರಿ ವಿಷಯವಲ್ಲ.

ಅಂದಹಾಗೆ, ಈ ಲೀಗ್‌ನಲ್ಲಿ ಪ್ರತಿ ಪಂದ್ಯವನ್ನು ಗೆಲ್ಲುವ ತಂಡವು 10 ಅಂಕಗಳನ್ನು ಪಡೆಯುತ್ತದೆ. ಪಂದ್ಯ ಟೈ ಆಗಿದ್ದರೆ ಐದು ಅಂಕಗಳನ್ನು ನೀಡಲಾಗುತ್ತದೆ. ಫಲಿತಾಂಶ ಇಲ್ಲದಿದ್ದಲ್ಲಿ, ಪಂದ್ಯ ರದ್ದತಿ ಮತ್ತು ಸೋಲಿನ ಸಂದರ್ಭದಲ್ಲಿ ಯಾವುದೇ ಅಂಕಗಳನ್ನು ನೀಡಲಾಗುವುದಿಲ್ಲ.

ODI ಸೂಪರ್ ಲೀಗ್‌ನ ಟೇಬಲ್ ಹೀಗಿದೆ

ಪ್ರಸ್ತುತ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಈ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬಾಂಗ್ಲಾದೇಶ ತಂಡ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶದಿಂದ ಈ ರೀತಿಯ ಪ್ರದರ್ಶನವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಇಂಗ್ಲೆಂಡ್ 125 ಅಂಕ ಹೊಂದಿದ್ದರೆ, ಬಾಂಗ್ಲಾದೇಶ 120 ಅಂಕ ಗಳಿಸಿದೆ. ಪಾಕಿಸ್ತಾನ 110 ಅಂಕ ಹೊಂದಿದೆ. ಅಫ್ಘಾನಿಸ್ತಾನ ತಂಡ 100 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 90 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ 90 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಭಾರತ ಏಳನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ಎಂಟನೇ ಸ್ಥಾನದಲ್ಲಿದೆ. ಐರ್ಲೆಂಡ್ ತಂಡ ಒಂಬತ್ತನೇ ಸ್ಥಾನದಲ್ಲಿದ್ದರೆ ಶ್ರೀಲಂಕಾ 10ನೇ ಸ್ಥಾನದಲ್ಲಿದೆ.