KL Rahul: ರಾಷ್ಟ್ರಗೀತೆ ಆರಂಭವಾಗುವ ಹೊತ್ತಿಗೆ ಮೈದಾನದಲ್ಲಿ ಕೆಎಲ್ ರಾಹುಲ್ ಮಾಡಿದ್ದೇನು ನೋಡಿ
Zimbabwe vs India 1st ODI: ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡದ ಆಟಗಾರರು ಮೈದಾನದಲ್ಲಿ ಸಾಲಾಗಿ ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸುವುದು ವಾಡಿಕೆ. ಅದರಂತೆ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಕೆಎಲ್ ರಾಹುಲ್ ಏನು ಮಾಡಿದರು ನೋಡಿ.
ಜಿಂಬಾಬ್ವೆ ವಿರುದ್ಧ ಭಾರತ (Zimbabwe vs India) ಕ್ರಿಕೆಟ್ ತಂಡ ಭರ್ಜರಿ ಶುಭಾರಂಭ ಮಾಡಿದ್ದು ಮೊದಲ ಏಕದಿನ ಪಂದ್ಯದಲ್ಲೇ 10 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಬೌಲಿಂಗ್ನಲ್ಲಿ ಮಿಂಚಿದ ಟೀಮ್ ಇಂಡಿಯಾ (Team India) ತನ್ನ ಗೆಲುವಿನ ನಾಗಾಲೋಟವನ್ನು ಇಲ್ಲೂ ಮುಂದುವರೆಸಿದೆ. 189 ರನ್ಗೆ ಎದುರಾಳಿಯನ್ನು ಆಲೌಟ್ ಮಾಡಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಭಾರತ ಪ್ರಾರುಪತ್ಯ ಮರೆಯಿತು. ಸುಮಾರು ಆರು ತಿಂಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಿದ ಕೆಎಲ್ ರಾಹುಲ್ (KL Rahul) ನಾಯಕನಾಗಿ ಕೂಡ ಮೊದಲ ಏಕದಿನ ಪಂದ್ಯದಲ್ಲಿ ಯಶಸ್ಸು ಕಂಡರು. ಅಲ್ಲದೆ ಬ್ಯಾಟಿಂಗ್ನಲ್ಲಿ ತನ್ನ ಓಪನಿಂಗ್ ಸ್ಥಾನವನ್ನು ಶುಭ್ಮನ್ ಗಿಲ್ಗೆ ಬಿಟ್ಟುಕೊಟ್ಟರು. ಇದರ ನಡುವೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದರು.
ಟಾಸ್ ಆಗಿ ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡದ ಆಟಗಾರರು ಮೈದಾನದಲ್ಲಿ ಸಾಲಾಗಿ ನಿಂತು ರಾಷ್ಟ್ರಗೀತೆಗೆ ಗೌರವ ಸೂಚಿಸುವುದು ವಾಡಿಕೆ. ಅದರಂತೆ ಭಾರತದ ರಾಷ್ಟ್ರಗೀತೆಗೆ ಆಟಗಾರರೆಲ್ಲ ಮೈದಾನದಲ್ಲಿ ನಿಂತಿದ್ದರು. ಇನ್ನೇನು ರಾಷ್ಟ್ರಗೀತೆ ಶುರುವಾಗುತ್ತೆ ಎಂಬೊತ್ತಿಗೆ ಕೆಎಲ್ ರಾಹುಲ್ ತಮ್ಮ ಬಾಯಿಯಲ್ಲಿದ್ದ ಚೂಯಿಂಗ್ ಗಮ್ ಎಸೆದು ಗೌರವ ಸೂಚಿಸಿದರು. ಇದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ರಾಹುಲ್ ನಡೆಗೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ.
KL Rahul took out the Chewing Gum from his Mouth before National Anthem ??❤️
Proud of You @klrahul ❤️?#INDvsZIM | #CricketTwitter pic.twitter.com/erBYx16auA
— ?????? (@AryanMane45) August 18, 2022
KL Rahul took out the Chewing Gum from his Mouth before National Anthem. #KLRahul #ZIMvIND pic.twitter.com/OxH9VO6J7A
— KL Siku Kumar (@KL_Siku_Kumar) August 18, 2022
ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಕೆಎಲ್ ರಾಹುಲ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ”ನಾವು ಎಡೆಬಿಡದೆ ಸಾಕಷ್ಟು ಕ್ರಿಕೆಟ್ ಆಡುತ್ತಿದ್ದೇವೆ. ಇದರ ನಡುವೆ ಇಂಜುರಿ ಕೂಡ ಒಂದು ಅಂಶ. ಆಟದಿಂದ ದೂರ ಇರುವುದು ನಿಜಕ್ಕೂ ಕಷ್ಟ. ಇಂಜುರಿ ಸಂದರ್ಭ ನಾನು, ದೀಪಕ್, ಕುಲ್ದೀಪ್ ಬೆಂಗಳೂರಿನಲ್ಲಿ ಕಠಿಣ ಸಮಯವನ್ನು ಕಳೆದಿದ್ದೇವೆ. ಈ ಪಿಚ್ನಲ್ಲಿ ಸ್ವಿಂಗ್ ಮತ್ತು ಸೀಮ್ ಮೂವೆಂಟ್ ಅದ್ಭುತವಾಗಿತ್ತು. ಬೌಲರ್ಗಳು ಶಿಸ್ತಿನ ಪ್ರದರ್ಶನ ನೀಡಿ ವಿಕೆಟ್ಗಳನ್ನು ಕಬಳಿಸಿದರು. ನಮ್ಮಲ್ಲಿ ಕೆಲ ಆಟಗಾರರಿಗೆ ಇದೊಂದು ಅತ್ಯುತ್ತಮ ಕಮ್ಬ್ಯಾಕ್ ಆಗಿದೆ,” ಎಂದು ಹೇಳಿದ್ದಾರೆ.
ಹರಾರೆ ಸ್ಪೋರ್ಟ್ಸ್ ಕ್ಷಬ್ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ಗಳ ಅಮೋಘ ಗೆಲುವು ಕಂಡಿತು. ಈ ಮೂಲಕ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ ದೀಪಕ್ ಚಹರ್ (3 ವಿಕೆಟ್) ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು.
ನಾಯಕ ರೆಗಿಸ್ ಚಕಬ್ವ 35 ರನ್ಗೆ ಔಟಾದರು. ಜಿಂಬಾಬ್ವೆ 40.3 ಓವರ್‌ಗಳಲ್ಲಿ 189 ರನ್ ಕಲೆಹಾಕಿ ಆಲ್ ಔಟ್ ಆಯಿತು. ಭಾರತ ವಿಕೆಟ್ ನಷ್ಟವಿಲ್ಲದೆ ಕೇವಲ 30.5 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ಗಡಿ ಮುಟ್ಟಿತು. ಧವನ್ ಅಜೇಯ 81ರನ್ಗಳಿಸಿದರೆ, ಶುಭ್ಮನ್ ಗಿಲ್ ಅಜೇಯ 82ರನ್ಗಳಿಸಿ ಜಯ ತಂದಿಟ್ಟರು.