Babar Azam: ಟ್ವಿಟರ್​ನಲ್ಲಿ ಫೋಟೋ ಹಂಚಿಕೊಂಡ ಸಖತ್ ಟ್ರೋಲ್ ಆದ ಪಾಕ್ ನಾಯಕ ಬಾಬರ್ ಅಜಮ್

ಬಾಬರ್ ಅಜಮ್ ಈಗಾಗಲೇ ಕ್ರಿಕೆಟ್ ಲೋಕದಲ್ಲಿ ಅನೇಕ ಸಾಧನೆ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಇವರು ಈಗ ಟ್ರೋಲ್ (Troll) ಆಗುವ ಮೂಲಕ ಸುದ್ದಿಯಲ್ಲಿದ್ದಾರೆ.

Babar Azam: ಟ್ವಿಟರ್​ನಲ್ಲಿ ಫೋಟೋ ಹಂಚಿಕೊಂಡ ಸಖತ್ ಟ್ರೋಲ್ ಆದ ಪಾಕ್ ನಾಯಕ ಬಾಬರ್ ಅಜಮ್
Babar Azam
TV9kannada Web Team

| Edited By: Vinay Bhat

Aug 19, 2022 | 9:36 AM

ಪಾಕಿಸ್ತಾನ (Pakistan) ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ (Babar Azam) ವಿಶ್ವಶ್ರೇಷ್ಠ ಬ್ಯಾಟರ್ ಆಗಿ ಎಷ್ಟು ಸುದ್ದಿಯಲ್ಲಿರುತ್ತಾರೊ ಅದೇರೀತಿ ಕೆಲವೊಂದು ಬಾರಿ ಟ್ರೋಲ್​ಗಳ ಮೂಲಕವೂ ಇವರ ಹೆಸರು ಟ್ರೆಂಡ್​ನಲ್ಲಿರುತ್ತದೆ. ಮೈದಾನದಲ್ಲಿ ಸದಾ ನೂತನ ದಾಖಲೆ ಬರೆಯುವ ಬಾಬರ್ ಈಗಾಗಲೇ ಕ್ರಿಕೆಟ್ ಲೋಕದಲ್ಲಿ ಅನೇಕ ಸಾಧನೆ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಇವರು ಈಗ ಟ್ರೋಲ್ (Troll) ಆಗುವ ಮೂಲಕ ಸುದ್ದಿಯಲ್ಲಿದ್ದಾರೆ.

ಸದ್ಯ ನೆದರ್ಲೆಂಡ್ ಪ್ರವಾಸದಲ್ಲಿ ಪಾಕಿಸ್ತಾನ ತಂಡ ಬಿಡುವಿನ ಸಮಯದಲ್ಲಿ ಸುತ್ತಾಟ ನಡೆಸುತ್ತಿದೆ. ಹೀಗಿರುವಾಗ ಬಾಬರ್ ಅಜಮ್ ತಮ್ಮ ಟ್ವಿಟರ್​ನಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆರೆಸ್ಟೋರೆಂಟ್​ನಲ್ಲಿ ಬಾಬರ್ ಫೋಟೋ ತೆಗೆದು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಇವರ ತೂಕ ಹೆಚ್ಚಾದಂತೆ ಕಾಣುತ್ತಿದ್ದು ಅನೇಕರು ಮೊದಲು ಫಿಟ್​ನೆಸ್ ಕಾಪಾಡಿಕೊಳ್ಳಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ

ಪಾಕಿಸ್ತಾನದ ನಾಯಕ ಬಾಬರ್ ಸದ್ಯ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಟಿ20 ರ್ಯಾಂಕಿಂಗ್​ನಲ್ಲಿ ಹಲವು ದಿನಗಳಿಂದ ನಂಬರ್.1 ಸ್ಥಾನದಲ್ಲಿದ್ದಾರೆ. ನೆದರ್ಲೆಂಡ್​ ವಿರುದ್ಧವೂ ಬಾಬರ್ ಅತ್ಯುತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಮೊದಲು ಪಂದ್ಯದಲ್ಲಿ ಪಾಕ್ 16 ರನ್​ಗಳಿಂದ ಗೆದ್ದರೆ, ಎರಡನೇ ಪಂದ್ಯದಲ್ಲಿ 7 ವಿಕೆಟ್​ಗಳ ಜಯ ಸಾಧಿಸಿತ್ತು. ಬಾಬರ್ ಕ್ರಮವಾಗಿ 74 ಹಾಗೂ 57 ರನ್ ಸಿಡಿಸಿದ್ದರು.

Follow us on

Related Stories

Most Read Stories

Click on your DTH Provider to Add TV9 Kannada