KL Rahul: 10 ವಿಕೆಟ್​ಗಳ ಭರ್ಜರಿ ಗೆಲುವಿನ ಬಳಿಕ ನಾಯಕ ಕೆಎಲ್ ರಾಹುಲ್ ಏನು ಹೇಳಿದ್ರು ನೋಡಿ

ZIM vs IND, 1dt ODI: ಭಾರತ ಹಾಗೂ ಜಿಂಬಾಬ್ವೆ ನಡುವೆ ಮೊದಲ ಏಕದಿನ ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಕೆಎಲ್ ರಾಹುಲ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ಏನು ಹೇಳಿದರು ಎಂಬುದನ್ನು ನೋಡಿ.

KL Rahul: 10 ವಿಕೆಟ್​ಗಳ ಭರ್ಜರಿ ಗೆಲುವಿನ ಬಳಿಕ ನಾಯಕ ಕೆಎಲ್ ರಾಹುಲ್ ಏನು ಹೇಳಿದ್ರು ನೋಡಿ
KL Rahul Post Match IND vs ZIM
Follow us
TV9 Web
| Updated By: Vinay Bhat

Updated on:Aug 19, 2022 | 9:00 AM

ಹರಾರೆ ಸ್ಪೋರ್ಟ್ಸ್​ ಕ್ಷಬ್​ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್​ಗಳ ಅಮೋಘ ಗೆಲುವು ಕಾಣುವ ಮೂಲಕ ಕ್ರಿಕೆಟ್ ಲೋಕದಲ್ಲಿ ಟೀಮ್ ಇಂಡಿಯಾ (India vs Zimbabwe) ಜಯದ ನಾಗಾಲೋಟವನ್ನು ಮುಂದುವರೆಸಿದೆ. ಭಾರತದ ಬೌಲರ್​ಗಳ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಜಿಂಬಾಬ್ವೆ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು. ನಂತರ ಶುಭ್ಮನ್ ಗಿಲ್ (Shybhman Gill) ಹಾಗೂ ಶಿಖರ್ ಧವನ್ ಅವರ ಅಜೇಯ ಜೊತೆಯಾಟದ ನೆರವಿನಿಂದ ಜಯ ಸಾಧಿಸಿ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ಕೆಎಲ್ ರಾಹುಲ್ (KL Rahul) ನಾಯಕತ್ವದಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾ ಅಂತರರಾಷ್ಟ್ರೀಯ ಪಂದ್ಯ ಜಯ ಸಾಧಿಸುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ದಾಖಲೆಯೊಂದನ್ನು ಬರೆದಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಜಿಂಬಾಬ್ವೆ ವಿರುದ್ಧ ಸತತ 13 ಏಕದಿನ ಪಂದ್ಯಗಳಲ್ಲಿ ಭಾರತ ಗೆದ್ದಂತಾಗಿದೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಕೆಎಲ್ ರಾಹುಲ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ”ನಾವು ಎಡೆಬಿಡದೆ ಸಾಕಷ್ಟು ಕ್ರಿಕೆಟ್ ಆಡುತ್ತಿದ್ದೇವೆ. ಇದರ ನಡುವೆ ಇಂಜುರಿ ಕೂಡ ಒಂದು ಅಂಶ. ಆಟದಿಂದ ದೂರ ಇರುವುದು ನಿಜಕ್ಕೂ ಕಷ್ಟ. ಇಂಜುರಿ ಸಂದರ್ಭ ನಾನು, ದೀಪಕ್, ಕುಲ್ದೀಪ್ ಬೆಂಗಳೂರಿನಲ್ಲಿ ಕಠಿಣ ಸಮಯವನ್ನು ಕಳೆದಿದ್ದೇವೆ,” ಎಂದು ಹೇಳಿದ್ದಾರೆ.

ಪಂದ್ಯದ ಬಗ್ಗೆ ಮಾತನಾಡಿದ ರಾಹುಲ್, ”ಈ ಪಿಚ್​ನಲ್ಲಿ ಸ್ವಿಂಗ್ ಮತ್ತು ಸೀಮ್ ಮೂವೆಂಟ್ ಅದ್ಭುತವಾಗಿತ್ತು. ಬೌಲರ್​ಗಳು ಶಿಸ್ತಿನ ಪ್ರದರ್ಶನ ನೀಡಿ ವಿಕೆಟ್​ಗಳನ್ನು ಕಬಳಿಸಿದರು. ನಮ್ಮಲ್ಲಿ ಕೆಲ ಆಟಗಾರರಿಗೆ ಇದೊಂದು ಅತ್ಯುತ್ತಮ ಕಮ್​ಬ್ಯಾಕ್ ಆಗಿದೆ. ಡ್ರೆಸ್ಸಿಂಗ್ ರೂಮ್​ನಲ್ಲಿ ಉತ್ತಮ ಬಾಂಧವ್ಯವಿದೆ. ನಮ್ಮ ತಂಡ ಉತ್ತಮ ಫಾರ್ಮ್​ನಲ್ಲಿದೆ. ಆಟಗಾರರಿಗೆ ಕ್ರಿಕೆಟ್ ಆಡಲು ಸಾಕಷ್ಟು ಪಂದ್ಯಗಳು ಸಿಗುತ್ತಿವೆ. ಖುಷಿಯಾಗಿದೆ,” ಎಂಬುದು ರಾಹುಲ್ ಮಾತು.

ಇದನ್ನೂ ಓದಿ
Image
IND vs ZIM: ಭಾರತ ಭರ್ಜರಿ ಶುಭಾರಂಭ: ಎಲ್ಲರ ಮೆಚ್ಚಿಗೆಗೆ ಕಾರಣವಾದ ಕೆಎಲ್ ರಾಹುಲ್ ನಡೆ
Image
IND vs ZIM: ಜಿಂಬಾಬ್ವೆ ಮಣಿಸಿದ ಭಾರತ; ಮೊದಲ ಏಕದಿನ ಪಂದ್ಯದಲ್ಲಿ ಸೃಷ್ಟಿಯಾದ ದಾಖಲೆಗಳಿವು
Image
IPL2023: ಪಂಜಾಬ್ ಜೊತೆಗಿನ ಅನಿಲ್ ಕುಂಬ್ಳೆ ಪ್ರಯಾಣ ಅಂತ್ಯ; ಹೊಸ ಕೋಚ್‌ಗಾಗಿ ಕಿಂಗ್ಸ್ ಹುಡುಕಾಟ
Image
Vinod Kambli: ಸಂಕಷ್ಟದಲ್ಲಿದ್ದ ವಿನೋದ್ ಕಾಂಬ್ಳಿಗೆ ಕೆಲಸದ ಆಫರ್ ನೀಡಿದ ಉದ್ಯಮಿ; ತಿಂಗಳಿಗೆ ಸಂಬಳವೆಷ್ಟು ಗೊತ್ತಾ?

7 ಓವರ್ ಬೌಲಿಂಗ್ ಮಾಡಿ 27 ರನ್ ನೀಡಿ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ದೀಪಕ್ ಚಹರ್ ಮಾತನಾಡಿ, ”ಆರುವರೆ ತಿಂಗಳ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವಾಗ ಬೌಲಿಂಗ್ ಮಾಡಲು ಕೊಂಚ ಕಷ್ಟವಾಗುತ್ತದೆ. ಇಲ್ಲಿಗೆ ಬರುವ ಮುನ್ನ ನಾನು 4-5 ಅಭ್ಯಾಸ ಪಂದ್ಯವನ್ನು ಆಡಿದ್ದೆ. ಮೊದಲ ಕೆಲವು ಓವರ್‌ಗಳಲ್ಲಿ ದೇಹ ಮತ್ತು ಮನಸ್ಸು ಒಟ್ಟಿಗೆ ಕೆಲಸ ಮಾಡಲಿಲ್ಲ, ಆದರೆ ನಂತರ ಅದು ಉತ್ತಮವಾಯಿತು. ಈಗ ಸಂಪೂರ್ಣ ಫಿಟ್ ಆಗಿದ್ದೇನೆ,” ಎಂದು ಹೇಳಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ ದೀಪಕ್ ಚಹರ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಆರಂಭಿಕರಾಗಿ ಕಣಕ್ಕಿಳಿದ ಇನ್ನೋಸೆಂಟ್ ಕೈಯಾ 4 ರನ್ ಕಲೆ ಹಾಕಿದರೆ, ತಡಿವಾನಿಶೆ ಮರುಮನಿ 8, ವೆಸ್ಲಿ ಮಧೆವೆರೆ 5 ರನ್, ಸೀನ್ ವಿಲಿಯಮ್ಸ್ ಕೇವಲ 1 ರನ್, ಸಿಕಂದರ್ ರಾಜಾ 12 ರನ್ , ನಾಯಕ ರೆಗಿಸ್ ಚಕಬ್ವ 35 ರನ್​​ಗೆ ಔಟಾದರು. ರಿಚರ್ಡ್ 34 ರನ್ ಮತ್ತು ಬ್ರಾಡ್ ಇವಾನ್ಸ್ ಅಜೇಯ 33 ಕಲೆಹಾಕಿದರು. ಜಿಂಬಾಬ್ವೆ 40.3 ಓವರ್‌ಗಳಲ್ಲಿ 189 ರನ್ ಕಲೆಹಾಕಿ ಆಲ್‌ ಔಟ್ ಆಯಿತು. ಭಾರತ ಪರ ದೀಪಕ್ ಚಹರ್, ಪ್ರಸಿದ್ಧ್ ಕೃಷ್ಣ ಹಾಗೂ ಅಕ್ಷರ್ ಪಟೇಲ್ ತಲಾ 3 ವಿಕೆಟ್‌ಗಳನ್ನು ಪಡೆದರೆ ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು.

ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕ ಹೊಂದಿರುವ ಭಾರತಕ್ಕೆ ಈ ಗುರಿ ಸವಾಲಾಗಿ ಪರಿಣಮಿಸಲೇ ಇಲ್ಲ. ಧವನ್‌ ಮತ್ತು ಗಿಲ್‌ ವಿಕೆಟ್‌ ನಷ್ಟವಿಲ್ಲದೆ ಕೇವಲ 30.5 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಧವನ್‌ 113 ಎಸೆತಗಳನ್ನು ಎದುರಿಸಿ 9 ಬೌಂಡರಿ ಹೊಡೆದರು. 72 ಎಸೆತಗಳನ್ನು ಎದುರಿಸಿದ ಗಿಲ್‌ 10 ಬೌಂಡರಿ ಮತ್ತು ವೆಸ್ಲಿ ಮೆಡೆವೆರೆ ಎಸೆತದಲ್ಲಿ ಒಂದು ಸಿಕ್ಸರ್‌ ಸಿಡಿಸಿದರು. ಭಾರತ 30.5 ಓವರ್​ಗಳಲ್ಲಿ 192 ರನ್ ಸಿಡಿಸಿ 10 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.

Published On - 9:00 am, Fri, 19 August 22

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ