Asia Cup: ಅಚ್ಚರಿ ಎನಿಸಿದರೂ ಸತ್ಯ..ಭಾರತ-ಪಾಕಿಸ್ತಾನ್ ಫೈನಲ್ನಲ್ಲಿ ಮುಖಾಮುಖಿಯಾಗಿಲ್ಲ
India and Pakistan: ಈ ಬಾರಿಯ ಏಷ್ಯಾಕಪ್ ಫೈನಲ್ಗೆ ಭಾರತ ತಂಡವು ಅರ್ಹತೆ ಪಡೆದುಕೊಂಡಿದೆ. ಸೂಪರ್-4 ಹಂತದಲ್ಲಿ ಆಡಿದ 2 ಪಂದ್ಯಗಳಲ್ಲೂ ಗೆಲುವು ಸಾಧಿಸಿ ಟೀಮ್ ಇಂಡಿಯಾ ಫೈನಲ್ಗೆ ಪ್ರವೇಶಿಸಿದೆ. ಮತ್ತೊಂದೆಡೆ ಪಾಕಿಸ್ತಾನ್ ತಂಡಕ್ಕೆ ಫೈನಲ್ಗೇರಲು ಉತ್ತಮ ಅವಕಾಶವಿದೆ.
ಅಚ್ಚರಿ ಎನಿಸಿದರೂ ಸತ್ಯ…ಏಷ್ಯಾಕಪ್ ಇತಿಹಾಸದಲ್ಲೇ ಭಾರತ ಮತ್ತು ಪಾಕಿಸ್ತಾನ್ ಫೈನಲ್ನಲ್ಲಿ ಮುಖಾಮುಖಿಯಾಗಿಲ್ಲ. ಅಂದರೆ 1984 ರಲ್ಲಿ ಶುರುವಾದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಒಟ್ಟು 10 ಬಾರಿ ಫೈನಲ್ ಆಡಿದೆ. ಮತ್ತೊಂದೆಡೆ ಪಾಕಿಸ್ತಾನ್ ತಂಡ ಕೂಡ 5 ಬಾರಿ ಫೈನಲ್ನಲ್ಲಿ ಕಣಕ್ಕಿಳಿದಿದೆ. ಆದರೆ ಈ ಫೈನಲ್ಗಳಲ್ಲಿ ಒಮ್ಮೆಯೂ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿಲ್ಲ ಎಂಬುದು ವಿಶೇಷ. ಹೀಗಾಗಿಯೇ ಈ ಬಾರಿಯ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಸೆಣಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
ಫೈನಲ್ನಲ್ಲಿ ಭಾರತ, ಪಾಕ್ ಕಥೆಯೇನು?
ಈ ಬಾರಿಯ ಏಷ್ಯಾಕಪ್ ಫೈನಲ್ಗೆ ಭಾರತ ತಂಡವು ಅರ್ಹತೆ ಪಡೆದುಕೊಂಡಿದೆ. ಸೂಪರ್-4 ಹಂತದಲ್ಲಿ ಆಡಿದ 2 ಪಂದ್ಯಗಳಲ್ಲೂ ಗೆಲುವು ಸಾಧಿಸಿ ಟೀಮ್ ಇಂಡಿಯಾ ಫೈನಲ್ಗೆ ಪ್ರವೇಶಿಸಿದೆ. ಮತ್ತೊಂದೆಡೆ ಪಾಕಿಸ್ತಾನ್ ತಂಡಕ್ಕೆ ಫೈನಲ್ಗೇರಲು ಉತ್ತಮ ಅವಕಾಶವಿದೆ.
ಅಂದರೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಗೆದ್ದರೆ, ಫೈನಲ್ನಲ್ಲಿ ಇಂಡೊ-ಪಾಕ್ ಮುಖಾಮುಖಿಯಾಗಲಿದೆ. ಒಂದು ವೇಳೆ ಲಂಕಾ ವಿರುದ್ಧ ಪಾಕ್ ಸೋತರೆ, ಭಾರತ-ಶ್ರೀಲಂಕಾ ಫೈನಲ್ ಆಡಲಿದೆ.
ಹೀಗಾಗಿಯೇ ಇದೀಗ ಶ್ರೀಲಂಕಾ ವಿರುದ್ಧ ಪಾಕ್ ಗೆಲುವನ್ನು ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಏಷ್ಯಾಕಪ್ ಫೈನಲ್ನಲ್ಲಿ ಭಾರತ-ಪಾಕಿಸ್ತಾನ್ ನಡುವಣ ಫೈನಲ್ ಫೈಟ್ ಅನ್ನು ನಿರೀಕ್ಷಿಸಲಾಗುತ್ತಿದೆ.
ಇಂಡೊ–ಪಾಕ್ ಫೈನಲ್ ಕನಸು:
ಭಾರತ-ಪಾಕಿಸ್ತಾನ್ ತಂಡಗಳು ಫೈನಲ್ ಆಡಿರುವುದು ಕೇವಲ 2 ಬಾರಿ ಮಾತ್ರ. 2007 ರಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಫೈನಲ್ನಲ್ಲಿ ಮುಖಾಮುಖಿಯಾಗಿತ್ತು. ಅಂದು ಪಾಕ್ ತಂಡವನ್ನು 5 ರನ್ಗಳಿಂದ ಮಣಿಸಿ ಭಾರತ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಇದನ್ನೂ ಓದಿ: ಗೆದ್ದ ಟೀಮ್ ಇಂಡಿಯಾ: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಇದಾದ ಬಳಿಕ 2017 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತ-ಪಾಕಿಸ್ತಾನ್ ತಂಡಗಳು ಕಣಕ್ಕಿಳಿದಿದ್ದವು. ಅಂದು ಟೀಮ್ ಇಂಡಿಯಾವನ್ನು 180 ರನ್ಗಳಿಂದ ಸೋಲಿಸಿ ಪಾಕ್ ಪಡೆ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆ ಬಳಿಕ ಉಭಯ ತಂಡಗಳು ಹಲವು ಟೂರ್ನಿಗಳಲ್ಲಿ ಮುಖಾಮುಖಿಯಾಗಿದ್ದರೂ, ಫೈನಲ್ ಆಡಿಲ್ಲ. ಹೀಗಾಗಿ ಈ ಬಾರಿಯ ಏಷ್ಯಾಕಪ್ ಫೈನಲ್ ಫೈಟ್ನಲ್ಲಿ ಇಂಡೊ-ಪಾಕ್ ಕದನವನ್ನು ನಿರೀಕ್ಷಿಸಲಾಗುತ್ತಿದೆ.
1984 ರಿಂದ 2023 ರವರೆಗಿನ ಏಷ್ಯಾಕಪ್ ವಿಜೇತರ ಪಟ್ಟಿ | |||
ವರ್ಷ | ವಿಜೇತ ತಂಡ | ರನ್ನರ್ ಅಪ್ ತಂಡ | ಪಂದ್ಯ ನಡೆದ ಸ್ಥಳ |
1984 | ಭಾರತ | ಶ್ರೀಲಂಕಾ | ಯುಎಇ |
1986 | ಶ್ರೀಲಂಕಾ | ಪಾಕಿಸ್ತಾನ್ | ಶ್ರೀಲಂಕಾ |
1988 | ಭಾರತ | ಶ್ರೀಲಂಕಾ | ಬಾಂಗ್ಲಾದೇಶ್ |
1991 | ಭಾರತ | ಶ್ರೀಲಂಕಾ | ಭಾರತ |
1995 | ಭಾರತ | ಶ್ರೀಲಂಕಾ | ಯುಎಇ |
1997 | ಶ್ರೀಲಂಕಾ | ಭಾರತ | ಶ್ರೀಲಂಕಾ |
2000 | ಪಾಕಿಸ್ತಾನ್ | ಶ್ರೀಲಂಕಾ | ಬಾಂಗ್ಲಾದೇಶ್ |
2004 | ಶ್ರೀಲಂಕಾ | ಭಾರತ | ಶ್ರೀಲಂಕಾ |
2008 | ಶ್ರೀಲಂಕಾ | ಭಾರತ | ಪಾಕಿಸ್ತಾನ |
2010 | ಭಾರತ | ಶ್ರೀಲಂಕಾ | ಶ್ರೀಲಂಕಾ |
2012 | ಪಾಕಿಸ್ತಾನ್ | ಬಾಂಗ್ಲಾದೇಶ್ | ಬಾಂಗ್ಲಾದೇಶ್ |
2014 | ಶ್ರೀಲಂಕಾ | ಪಾಕಿಸ್ತಾನ್ | ಬಾಂಗ್ಲಾದೇಶ್ |
2016 | ಭಾರತ | ಬಾಂಗ್ಲಾದೇಶ್ | ಬಾಂಗ್ಲಾದೇಶ್ |
2018 | ಭಾರತ | ಬಾಂಗ್ಲಾದೇಶ್ | ಯುಎಇ |
2022 | ಶ್ರೀಲಂಕಾ | ಪಾಕಿಸ್ತಾನ್ | ಯುಎಇ |
Published On - 7:52 pm, Wed, 13 September 23