IND vs ENG: ಕ್ಯುರೇಟರ್ ಕಳ್ಳಾಟ; ಗಂಭೀರ್ ಜೊತೆ ಜಗಳ, ಮೆಕಲಮ್ ಜೊತೆ ಪಿಚ್ ಮೇಲೆಯೇ ಮಾತು
Oval Pitch Controversy: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಗೌತಮ್ ಗಂಭೀರ್ ಮತ್ತು ಓವಲ್ ಪಿಚ್ ಕ್ಯುರೇಟರ್ ನಡುವೆ ತೀವ್ರ ವಿವಾದ ಏರ್ಪಟ್ಟಿದೆ. ಭಾರತ ತಂಡದ ಸಿಬ್ಬಂದಿಗೆ ಪಿಚ್ ಪರಿಶೀಲಿಸಲು ಅವಕಾಶ ನೀಡದ ಕ್ಯುರೇಟರ್, ಇಂಗ್ಲೆಂಡ್ ತಂಡಕ್ಕೆ ಪಿಚ್ ಬಳಿ ಅಭ್ಯಾಸ ಮಾಡಲು ಅನುಮತಿ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ಕ್ರಿಕೆಟ್ ನೀತಿಗಳನ್ನು ಪ್ರಶ್ನಿಸುವಂತೆ ಮಾಡಿದೆ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ಕೊನೆಯ ಹಾಗೂ ಐದನೇ ಟೆಸ್ಟ್ ಪಂದ್ಯ ಲಂಡನ್‌ನ ದಿ ಓವಲ್‌ನಲ್ಲಿ (Oval Test) ನಡೆಯಲಿದೆ. ಆದರೆ ಈ ಟೆಸ್ಟ್ ಆರಂಭಕ್ಕೂ ಮುನ್ನವೇ ದೊಡ್ಡ ವಿವಾದವೊಂದು ಭುಗಿಲೆದ್ದಿದೆ. ಜುಲೈ 29 ರಂದು, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಮತ್ತು ಓವಲ್‌ನ ಮುಖ್ಯ ಕ್ಯುರೇಟರ್ ಲೀ ಫೋರ್ಟಿಸ್ ನಡುವೆ ಪಿಚ್ ವಿಚಾರವಾಗಿ ವಾಗ್ವಾದ ನಡೆದಿತ್ತು. ವಾಗ್ವಾದ ತಾರಕಕ್ಕೇರಿ ಗಂಭೀರ್ ನನ್ನ ಮೇಲೆ ಅಶ್ಲೀಲ ಪದ ಪ್ರಯೋಗ ಮಾಡಿದ್ದಾರೆ ಎಂದು ಫೋರ್ಟಿಸ್ ಆರೋಪಿಸಿದ್ದರು. ವಾಸ್ತವವಾಗಿ ಇವರಿಬ್ಬರ ನಡುವೆ ಈ ರೀತಿಯ ಜಗಳ ನಡೆಯಲು ಭಾರತದ ಕೋಚಿಂಗ್ ಸಿಬ್ಬಂದಿಗಳಿಗೆ ಪಿಚ್ ಬಳಿ ಬರಲು, ಪಿಚ್ ಕ್ಯುರೇಟರ್ ಲೀ ಫೋರ್ಟಿಸ್ ಅವಕಾಶ ಮಾಡಿಕೊಟ್ಟಿರಲಿಲ್ಲ.
ವಾಸ್ತವವಾಗಿ ಪಂದ್ಯ ಆರಂಭಕ್ಕೆ ಎರಡು ದಿನಗಳಿರುವಾಗ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಗಳು ಓವಲ್ ಪಿಚ್ ನೋಡಲು ಮೈದಾನಕ್ಕೆ ತೆರಳಿದ್ದರು. ಆ ವೇಳೆ ಓವಲ್ ಪಿಚ್ನ ಮುಖ್ಯ ಕ್ಯುರೇಟರ್ ಲೀ ಫೋರ್ಟಿಸ್, 2.5 ಮೀಟರ್ ದೂರದಲ್ಲಿ ನಿಲ್ಲುವಂತೆ ಸೂಚಿಸಿದ್ದಾರೆ. ಇದರಿಂದ ಕೆರಳಿದ ಗಂಭೀರ್ ಇದಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ ಕೋಪದಿಂದ ಪ್ರತಿಕ್ರಿಯಿಸಿದ್ದರು. ಇವರಿಬ್ಬರ ಈ ವಾಗ್ವಾದದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.
The Oval’s chief curator Lee Fortis was telling Indian team and head coach #GautamGambhir to stay 2.5 metres away from this pitch. But Brendon McCullum was allowed to chill right on the middle of the pitch earlier today.
This is why @GautamGambhir reacted the way he did. Indian… pic.twitter.com/erSawWESON
— Madhav Sharma (@HashTagCricket) July 29, 2025
ಇಂಗ್ಲೆಂಡ್ ಆಟಗಾರರಿಗೆ ಅನುಮತಿ
ಇದೀಗ ಇಂಗ್ಲೆಂಡ್ ಆಟಗಾರರ ಫೋಟೋಗಳು ಮತ್ತು ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಟೆಸ್ಟ್‌ಗೆ ಸಿದ್ಧವಾಗುತ್ತಿರುವ ಪಿಚ್ ಬಳಿಯೇ ಅಭ್ಯಾಸ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ನೋಡಿದ ನೆಟ್ಟಿಗರು ಓವಲ್ ಪಿಚ್ನ ಮುಖ್ಯ ಕ್ಯುರೇಟರ್ ಲೀ ಫೋರ್ಟಿಸ್ ಅವರ ತಾರತಮ್ಯ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ. ಏಕೆಂದರೆ ಭಾರತೀಯ ತಂಡವನ್ನು ಪಿಚ್ ಬಳಿ ಹೋಗಲು ಸಹ ಅನುಮತಿಸದ ಫೋರ್ಟಿಸ್, ಆತಿಥೇಯ ಇಂಗ್ಲೆಂಡ್‌ನ ಆಟಗಾರರು ಪಿಚ್ ಬಳಿ ಅಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಕ್ಯುರೆಟರ್ ಫೋರ್ಟಿಸ್ ಅವರ ನಡೆಯ ವಿರುದ್ಧ ಚರ್ಚೆಯನ್ನು ಹುಟ್ಟುಹಾಕಿದೆ.
Shubman Gill said – “Coach Gautam Gambhir has every right to look at the wicket. Don’t understand why curator has an issue. As long as you are wearing a rubber spike or are barefoot it should not be a problem”.
– What’s your take on this 🤔 #INDvsENG pic.twitter.com/c3J4pwphQL
— Richard Kettleborough (@RichKettle07) July 30, 2025
Indian Head coach Gautam Gambhir should maintain the distance of 2.5 mitr from the pitch but England head coach Brendon Mccullum can roam on the pitch. Wow pic.twitter.com/3I4XTTMkX5
— Sunil the Cricketer (@1sInto2s) July 29, 2025
ವಾಸ್ತವವಾಗಿ ತಂಡದ ಸಿಬ್ಬಂದಿ ಪಿಚ್ ಹತ್ತಿರ ಹೋಗಬಾರದು ಎಂಬ ಯಾವುದೇ ನಿಯಮವಿಲ್ಲ. ಪಂದ್ಯಕ್ಕೂ ಮೊದಲು, ನಾಯಕ ಮತ್ತು ತಂಡದ ಸಿಬ್ಬಂದಿಗೆ ಪಿಚ್ ನೋಡಲು ಪೂರ್ಣ ಅವಕಾಶ ಸಿಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ವಿವಾದವು ಕ್ರಿಕೆಟ್ ಅಭಿಮಾನಿಗಳು ಮತ್ತು ತಜ್ಞರಲ್ಲಿ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಇಂಗ್ಲೆಂಡ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಮತ್ತು ಇಸಿಬಿ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ ಗೆ ಯಾವುದೇ ನಿರ್ಭಂದ ಹೇರಿಲ್ಲ. ಅದರಲ್ಲೂ ಬ್ರೆಂಡನ್ ಮೆಕಲಮ್‌ಗೆ ಪಿಚ್ ಅನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದೆ. ಅದು ಮಾತ್ರವಲ್ಲದೆ, ಮೆಕಲಮ್ ಹಾಗೂ ಕ್ಯುರೆಟರ್ ಪಿಚ್ ಮೇಲೆಯೇ ನಿಂತು ಮಾತುಕತೆ ಮಾಡಿದ್ದಾರೆ. ಇದು ಟೀಂ ಇಂಡಿಯಾ ಅಭಿಮಾನಿಗಳನ್ನು ಕೆರಳಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:58 pm, Wed, 30 July 25
