
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಜೂನ್ 20 ರಿಂದ ಆರಂಭವಾಗಲಿದೆ. ಮೊದಲ ಪಂದ್ಯ ಲೀಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳು ಕಠಿಣ ಅಭ್ಯಾಸ ನಡೆಸಿವೆ. ಭಾರತದ ಬೌಲಿಂಗ್ ಬಲಿಷ್ಠವಾಗಿರುವಂತೆ ತೋರುತ್ತಿದ್ದರೆ, ಇತ್ತ ಇಂಗ್ಲೆಂಡ್‌ನ ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿಗಳ ದಂಡೆ ಇದೆ. ಹೀಗಾಗಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ. ಆದಾಗ್ಯೂ ಈ ಮೊದಲ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ. AccuWeather.com ವರದಿಯ ಪ್ರಕಾರ, ಜೂನ್‌ನಲ್ಲಿ ಲೀಡ್ಸ್‌ನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಐದು ದಿನಗಳ ಕಾಲ ನಡೆಯುವ ಈ ಪಂದ್ಯದಲ್ಲಿ ಯಾವ ದಿನ ಮಳೆ ಬೀಳುತ್ತದೆ ಎಂಬುದರ ವಿವರ ಇಲ್ಲಿದೆ.
ಮೊದಲ ದಿನ ಮಳೆಯಾಗುವ ಸಾಧ್ಯತೆ ಶೇ. 5 ರಿಂದ 10 ರಷ್ಟು ಇದೆ. ತಾಪಮಾನ ಗರಿಷ್ಠ 17 ಡಿಗ್ರಿ ಮತ್ತು ಕನಿಷ್ಠ 31 ಡಿಗ್ರಿ ಇರುವ ಸಾಧ್ಯತೆ ಇದೆ. ಎರಡನೇ ದಿನ, ಅಂದರೆ ಜೂನ್ 21 ರಂದು ಮಳೆಯಾಗುವ ಸಾಧ್ಯತೆ ಶೇ. 60 ರಷ್ಟು ಇದೆ. ಇದರಿಂದಾಗಿ, ಈ ದಿನ ಆಟಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಮೂರನೇ ದಿನ ಮಳೆಯಾಗುವ ಸಾಧ್ಯತೆ ಶೇ. 5 ರಿಂದ 10 ರಷ್ಟು ಇದೆ. ಇದರರ್ಥ ಮೂರನೇ ದಿನ ಪಂದ್ಯ ಯಾವ ತೊಂದರೆಯೂ ಇಲ್ಲದೆ ನಡೆಯಲಿದೆ.
ಆದಾಗ್ಯೂ ನಾಲ್ಕನೇ ದಿನ ಮಳೆಯಾಗುವ ಸಾಧ್ಯತೆ ಶೇ. 25-30 ರಷ್ಟು ಇದೆ. ಆದ್ದರಿಂದ, ಈ ದಿನದಂದು ಆಟಕ್ಕೆ ಮಳೆ ಅಡ್ಡಿಯಾಗಬಹುದು. ಐದನೇ ಮತ್ತು ಕೊನೆಯ ದಿನವೂ ಶೇ. 25-30 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಮಳೆ ಭಾರೀ ಪ್ರಮಾಣದಲ್ಲಿ ಸುರಿದರೆ, ಪಂದ್ಯ ಡ್ರಾ ಆಗಬಹುದು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಂದ್ಯ ಡ್ರಾ ಆದರೆ, ಅದು ಎರಡೂ ತಂಡಗಳ ಗೆಲುವಿನ ಶೇಕಡಾವಾರು ಮೇಲೆ ಪರಿಣಾಮ ಬೀರುತ್ತದೆ.
IND vs ENG: 6 ಲೆಜೆಂಡರಿ ಆಟಗಾರರೇ ತಂಡದಲಿಲ್ಲ..! ಲೀಡ್ಸ್ ಟೆಸ್ಟ್ ಗೆಲ್ಲುತ್ತಾ ಟೀಂ ಇಂಡಿಯಾ?
ಹೆಂಡಿಗ್ಲಾಟ್‌ನಲ್ಲಿ ಟೀಂ ಇಂಡಿಯಾದ ದಾಖಲೆ ಉತ್ತಮವಾಗಿಲ್ಲ. ಈ ಮೈದಾನದಲ್ಲಿ ಟೀಂ ಇಂಡಿಯಾ ಒಟ್ಟು 7 ಪಂದ್ಯಗಳನ್ನು ಆಡಿದ್ದು, ಕೇವಲ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿದ್ದರೆ, ನಾಲ್ಕು ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಉಳಿದಂತೆ ಒಂದು ಪಂದ್ಯ ಡ್ರಾ ಆಗಿದೆ. ಮತ್ತೊಂದೆಡೆ, ಭಾರತ ಮತ್ತು ಇಂಗ್ಲೆಂಡ್ ನಡುವೆ ಒಟ್ಟು 136 ಟೆಸ್ಟ್ ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ 35 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 51 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ 50 ಪಂದ್ಯಗಳು ಡ್ರಾ ಆಗಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ