IND vs SL, 1st Test: ಪೂಜಾರ, ರಹಾನೆ ಔಟ್, ಮಧ್ಯಮ ಕ್ರಮಾಂಕದ ಹೊಣೆ ಯಾರಿಗೆ? ಮೊದಲ ಟೆಸ್ಟ್​ಗೆ ಸಂಭಾವ್ಯ XI

IND vs SL, 1st Test: ಮಧ್ಯಮ ಕ್ರಮಾಂಕವು ಈಗ ಹೊಸ ಆಟಗಾರರೊಂದಿಗೆ ಸಜ್ಜುಗೊಂಡಿದೆ. ಏಕೆಂದರೆ ದೀರ್ಘ ಸಮಯದ ನಂತರ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ರಹಾನೆ ಮತ್ತು ಪೂಜಾರ ನಿರ್ಗಮನ ಯುವ ಆಟಗಾರರಿಗೆ ಅವಕಾಶ ತಂದುಕೊಟ್ಟಿದೆ.

IND vs SL, 1st Test: ಪೂಜಾರ, ರಹಾನೆ ಔಟ್, ಮಧ್ಯಮ ಕ್ರಮಾಂಕದ ಹೊಣೆ ಯಾರಿಗೆ? ಮೊದಲ ಟೆಸ್ಟ್​ಗೆ ಸಂಭಾವ್ಯ XI
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on: Mar 03, 2022 | 8:45 PM

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ (India Playing XI 1st Test)) ಮೊಹಾಲಿಯಲ್ಲಿ ನಡೆಯಲಿದೆ. ಹಲವು ಕಾರಣಗಳಿಗಾಗಿ ಈ ಪಂದ್ಯ ಟೀಂ ಇಂಡಿಯಾಗೆ ತುಂಬಾ ವಿಶೇಷವಾಗಿದೆ. ಮೊದಲನೆಯದಾಗಿ, ಈ ಪಂದ್ಯವು ವಿರಾಟ್ ಕೊಹ್ಲಿ ವೃತ್ತಿಜೀವನದ 100 ನೇ ಟೆಸ್ಟ್ ಪಂದ್ಯವಾಗಿದೆ. ಟೆಸ್ಟ್ ನಾಯಕನಾಗಿ ರೋಹಿತ್ ಶರ್ಮಾಗೆ ಇದು ಮೊದಲ ಪಂದ್ಯವಾಗಿದೆ. ಅಲ್ಲದೆ, ಟೀಮ್ ಇಂಡಿಯಾದ (India vs Sri Lanka) ಮಧ್ಯಮ ಕ್ರಮಾಂಕವು ಈಗ ಹೊಸ ಆಟಗಾರರೊಂದಿಗೆ ಸಜ್ಜುಗೊಂಡಿದೆ. ಏಕೆಂದರೆ ದೀರ್ಘ ಸಮಯದ ನಂತರ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ರಹಾನೆ ಮತ್ತು ಪೂಜಾರ ನಿರ್ಗಮನ ಯುವ ಆಟಗಾರರಿಗೆ ಅವಕಾಶ ತಂದುಕೊಟ್ಟಿದೆ. ಆದರೆ, ಈ ನಡುವೆಯೂ ಪೂಜಾರ-ರಹಾನೆ ಬದಲು ಆಡುವ ಇಲೆವೆನ್‌ನಲ್ಲಿ ಯಾವ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ವಿಚಾರದಲ್ಲಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಸಿಲುಕಿಕೊಂಡಿದೆ.

ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೋಡಿ ಯಾವಾಗಲೂ ಪಿಚ್, ಎದುರಾಳಿ ಪ್ರಕಾರ ಆಡುವ XI ಅನ್ನು ಆಯ್ಕೆ ಮಾಡುತ್ತದೆ. ಆಡುವ XI ನಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಇಬ್ಬರ ಗುರಿಯಾಗಿದೆ. ಮೊಹಾಲಿಯಲ್ಲಿ ಟೀಂ ಇಂಡಿಯಾದ ಆಡುವ XI ಏನಾಗಲಿದೆ, ರಹಾನೆ-ಪೂಜಾರ ಸ್ಥಾನದಲ್ಲಿ ಯಾರಿಗೆ ಅವಕಾಶ ಸಿಗಲಿದೆ? ಮೊಹಾಲಿ ಟೆಸ್ಟ್‌ನಲ್ಲಿ ಭಾರತದ ಆಟಗಾರರ XI ಹೇಗೆ ಇರಬಹುದೆಂದು ನಾವು ನಿಮಗೆ ಹೇಳಲಿದ್ದೇವೆ.

ಟೀಮ್ ಇಂಡಿಯಾ ಓಪನಿಂಗ್ ಭಾರತದ ಓಪನಿಂಗ್ ಜವಾಬ್ದಾರಿ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಅವರ ಮೇಲಿದೆ. ರೋಹಿತ್ ಶರ್ಮಾ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದರು ಆದರೆ ಕೊನೆಯಲ್ಲಿ ಅವರು ಆರಂಭಿಕ ಸ್ಲಾಟ್‌ನಲ್ಲಿ ಮಾತ್ರ ಅದ್ಭುತ ಯಶಸ್ಸನ್ನು ಪಡೆದರು. ಇದೀಗ ರೋಹಿತ್ ನಾಯಕನಾಗಿದ್ದರೂ ಈ ಸ್ಥಾನದಲ್ಲಿ ಆಡಲಿದ್ದಾರೆ. ಕೆಎಲ್ ರಾಹುಲ್ ತಂಡದಲ್ಲಿ ಇಲ್ಲದ ಕಾರಣ ಮಯಾಂಕ್ ಅಗರ್ವಾಲ್ ಅವರೊಂದಿಗೆ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಪೂಜಾರ ಬದಲಿಗೆ ಗಿಲ್! ಚೇತೇಶ್ವರ ಪೂಜಾರ ಬದಲಿಗೆ ಶುಭಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಅವಕಾಶ ಪಡೆಯಬಹುದು. ಇದೇ ವೇಳೆ ಭಾರತ 3ನೇ ಕ್ರಮಾಂಕದಲ್ಲಿ ಆಕ್ರಮಣಕಾರಿ ಆಟಗಾರನನ್ನು ಕಣಕ್ಕಿಳಿಸಲು ಹೊರಟಿದೆ. ಒಂದೆಡೆ ಪೂಜಾರ ರಕ್ಷಣಾತ್ಮಕ ಕ್ರಿಕೆಟ್ ಆಡುತ್ತಿದ್ದರೆ, ಮತ್ತೊಂದೆಡೆ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರಾದ ಶುಭಮನ್ ಗಿಲ್ ಇದೀಗ ಭಾರತ ತಂಡವನ್ನು ಪ್ರಸ್ತುತಪಡಿಸಲಿದ್ದಾರೆ. ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ ಇಳಿಯಲಿದ್ದಾರೆ. 100ನೇ ಟೆಸ್ಟ್‌ನಲ್ಲಿ ಈ ಅನುಭವಿ ಆಟಗಾರನಿಂದ ಶತಕದ ಬರ ನೀಗಿಸುವ ಭರವಸೆಯಿದೆ.

5ನೇ ಸ್ಥಾನದಲ್ಲಿ ಯಾರು ಆಡುತ್ತಾರೆ? ಅಜಿಂಕ್ಯ ರಹಾನೆ ಸ್ಥಾನಕ್ಕೆ ಇಬ್ಬರು ಸ್ಪರ್ಧಿಗಳಿದ್ದಾರೆ. ಮೊದಲ ಹೆಸರು- ಹನುಮ ವಿಹಾರಿ, ಎರಡನೇ ಹೆಸರು- ಶ್ರೇಯಸ್ ಅಯ್ಯರ್. ಹನುಮ ವಿಹಾರಿ ಟೆಸ್ಟ್ ಸ್ಪೆಷಲಿಸ್ಟ್ ಆಗಿದ್ದು, ಬಹಳ ದಿನಗಳಿಂದ ಅವರಿಗೆ ಸರಿಯಾಗಿ ಅವಕಾಶಗಳು ಸಿಕ್ಕಿರಲಿಲ್ಲ. ಅವರು ಭಾರತದ ನೆಲದಲ್ಲಿ ಒಂದೇ ಒಂದು ಟೆಸ್ಟ್ ಆಡಿದ್ದಾರೆ. ಅವರಿಗೆ ವಿದೇಶಗಳಲ್ಲಿ ವಿವಿಧ ಬ್ಯಾಟಿಂಗ್ ಸ್ಥಾನಗಳಲ್ಲಿ ಅವಕಾಶಗಳನ್ನು ನೀಡಲಾಯಿತು. ಈಗ ಟೀಂ ಇಂಡಿಯಾ ಹನುಮ ವಿಹಾರಿಗೆ ಅವಕಾಶ ನೀಡಬಹುದು. ಮತ್ತೊಂದೆಡೆ, ಶ್ರೀಲಂಕಾ ವಿರುದ್ಧದ ಸರಣಿಯ ಆಟಗಾರ ಮತ್ತು ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಶ್ರೇಯಸ್ ಅಯ್ಯರ್ ಹೊರಗುಳಿಯಬೇಕಾಗಬಹುದು. ವಿಕೆಟ್ ಕೀಪಿಂಗ್ ಜವಾಬ್ದಾರಿ ಎಂದಿನಂತೆ ಪಂತ್ ಅವರದ್ದೇ ಆಗಿರುತ್ತದೆ. ಅದೇ ಸಮಯದಲ್ಲಿ ಜಡೇಜಾ ಮತ್ತು ಅಶ್ವಿನ್ ಜೋಡಿ ಮತ್ತೊಮ್ಮೆ ಮೈದಾನಕ್ಕಿಳಿಯಲಿದೆ. ಶಮಿ, ಬುಮ್ರಾ ಮತ್ತು ಸಿರಾಜ್ ವೇಗದ ಬೌಲರ್‌ಗಳ ವಿಭಾಗದಲ್ಲಿ ಆಡುವ ನಿರೀಕ್ಷೆ ಇದೆ.

ಭಾರತದ ಸಂಭಾವ್ಯ ಪ್ಲೇಯಿಂಗ್ XI ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಶುಭನನ್ ಗಿಲ್, ವಿರಾಟ್ ಕೊಹ್ಲಿ, ಹನುಮ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.

ಇದನ್ನೂ ಓದಿ:IND vs SL: ಮೊಹಾಲಿ ಟೆಸ್ಟ್‌ನಿಂದ ಮೆಂಡಿಸ್ ಔಟ್, ಚಮೀರಾಗೆ ವಿಶ್ರಾಂತಿ! ಆಡುವ ಇಲೆವೆನ್ ಬಗ್ಗೆ ನಾಯಕನ ಮಾತು

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ