India T20 Captain List: ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ 9 ನಾಯಕರು ಇವರೇ..!

| Updated By: ಝಾಹಿರ್ ಯೂಸುಫ್

Updated on: Jun 28, 2022 | 7:41 PM

India T20 captain list: ವಿಶೇಷ ಎಂದರೆ ಕಳೆದ ಒಂದು ವರ್ಷದೊಳಗೆ ಟೀಮ್ ಇಂಡಿಯಾ ಟಿ20 ತಂಡವನ್ನು 4 ನಾಯಕರುಗಳು ಮುನ್ನಡೆಸಿದ್ದಾರೆ. ಅವರಲ್ಲಿ ನಾಲ್ವರು ಈಗಲೂ ಟೀಮ್ ಇಂಡಿಯಾದ ಖಾಯಂ ಸದಸ್ಯರು ಎಂಬುದು ವಿಶೇಷ.

India T20 Captain List: ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ 9 ನಾಯಕರು ಇವರೇ..!
India T20 captain list
Follow us on

ಐರ್ಲೆಂಡ್ ವಿರುದ್ದದ (Ireland vs India) ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು (Team India) ಮುನ್ನಡೆಸುವ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ಭಾರತ ತಂಡದ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ 9ನೇ ನಾಯಕ ಎನಿಸಿಕೊಂಡಿದ್ದಾರೆ. ಭಾರತ ತಂಡವು 2006 ರಿಂದ ಟಿ20 ಕ್ರಿಕೆಟ್ ಆಡುತ್ತಿದ್ದು, ಇದುವರೆಗೆ 9 ನಾಯಕರನ್ನು ಕಣಕ್ಕಿಳಿಸಿದೆ. ಹಾಗಿದ್ರೆ ಚುಟುಕು ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ನಾಯಕರುಗಳು (India T20 captain list) ಯಾರೆಲ್ಲಾ ನೋಡೋಣ…

  1. ವೀರೇಂದ್ರ ಸೆಹ್ವಾಗ್: 2006 ರಲ್ಲಿ ಸೆಹ್ವಾಗ್ ಟೀಮ್ ಇಂಡಿಯಾವನ್ನು ಒಂದು ಪಂದ್ಯದಲ್ಲಿ ಮುನ್ನಡೆಸಿದ್ದರು. ವಿಶೇಷ ಎಂದರೆ ಭಾರತ ಟಿ20 ತಂಡದ ಮೊದಲ ನಾಯಕ ಎಂಬ ಹೆಗ್ಗಳಿಕೆ ವೀರೇಂದ್ರ ಸೆಹ್ವಾಗ್ ಅವರಿಗೆ ಸಲ್ಲುತ್ತದೆ.
  2. ಎಂಎಸ್​ ಧೋನಿ: 2007 ರಲ್ಲಿ ನಾಯಕರಾಗಿ ಪದಾರ್ಪಣೆ ಮಾಡಿದ್ದ ಧೋನಿ 2016 ರವರೆಗೆ 72 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ.
  3. ಸುರೇಶ್ ರೈನಾ: 2010 ರಲ್ಲಿ ಧೋನಿಯ ಅನುಪಸ್ಥಿತಿಯಲ್ಲಿ ಉಪನಾಯಕರಾಗಿದ್ದ ಸುರೇಶ್ ರೈನಾ 3 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು.
  4. ಅಜಿಂಕ್ಯ ರಹಾನೆ: ಟೀಮ್ ಇಂಡಿಯಾ ಟಿ20 ತಂಡದ ನಾಲ್ಕನೇ ನಾಯಕನಾಗಿ ಅಜಿಂಕ್ಯ ರಹಾನೆ ಕಾಣಿಸಿಕೊಂಡಿದ್ದರು. 2015 ರಲ್ಲಿ ಧೋನಿ ಅನುಪಸ್ಥತಿಯಲ್ಲಿ 2 ಪಂದ್ಯಗಳಲ್ಲಿ ಭಾರತ ತಂಡದ ಸಾರಥ್ಯವಹಿಸಿದ್ದರು.
  5. ಇದನ್ನೂ ಓದಿ
    Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
    Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
    ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
    Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್
  6. ವಿರಾಟ್ ಕೊಹ್ಲಿ: 2017 ರಿಂದ 2021 ರವರೆಗೆ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ, ಒಟ್ಟು 50 ಟಿ20 ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
  7. ರೋಹಿತ್ ಶರ್ಮಾ: 2017 ರಲ್ಲಿ ಹಂಗಾಮಿ ನಾಯಕರಾಗಿದ್ದ ರೋಹಿತ್ ಶರ್ಮಾ 2022 ರಲ್ಲಿ ಪೂರ್ಣ ನಾಯಕರಾಗಿ ಕಾಣಿಸಿಕೊಂಡರು. ಅದರಂತೆ ಹಿಟ್​ಮ್ಯಾನ್ ಇದುವರೆಗೆ ಟೀಮ್ ಇಂಡಿಯಾವನ್ನು 28 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.
  8. ಶಿಖರ್ ಧವನ್: 2021 ರಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿ ಆಡುತ್ತಿದ್ದ ಕಾರಣ, ಶ್ರೀಲಂಕಾ ವಿರುದ್ದದ ಸರಣಿಗಾಗಿ ಮೀಸಲು ಭಾರತ ತಂಡವನ್ನು ಆಯ್ಕೆ ಮಾಡಲಾಗಿತ್ತು. ಈ ವೇಳೆ ಶಿಖರ್ ಧವನ್​ಗೆ ನಾಯಕನ ಪಟ್ಟ ನೀಡಲಾಗಿತ್ತು. ಅದರಂತೆ ಧವನ್ 3 ಟಿ20 ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು.
  9. ರಿಷಭ್ ಪಂತ್: 2022 ರಲ್ಲಿ ಸೌತ್ ಆಫ್ರಿಕಾ ವಿರುದ್ದದ ಸರಣಿಯಿಂದ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ತಂಡದ ಉಸ್ತುವಾರಿಯನ್ನು ಕೆಎಲ್ ರಾಹುಲ್​ಗೆ ವಹಿಸಲಾಗಿತ್ತು. ಆದರೆ ಕೆಎಲ್​​ಆರ್​ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಹೀಗಾಗಿ ಉಪನಾಯಕರಾಗಿ ರಿಷಭ್ ಪಂತ್ ಭಾರತ ತಂಡವನ್ನು 5 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದರು.
  10. ಹಾರ್ದಿಕ್ ಪಾಂಡ್ಯ: ಪ್ರಸ್ತುತ ನಡೆಯುತ್ತಿರುವ ಐರ್ಲೆಂಡ್ ವಿರುದ್ದದ ಸರಣಿಯ ಮೂಲಕ ಹಾರ್ದಿಕ್ ಪಾಂಡ್ಯ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೆಸರಿದಂತೆ ಪ್ರಮುಖ ಆಟಗಾರರು ಇಂಗ್ಲೆಂಡ್​ ವಿರುದ್ದದ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಹೀಗಾಗಿ ಐರ್ಲೆಂಡ್ ವಿರುದ್ದ ಮೀಸಲು ಟೀಮ್ ಇಂಡಿಯಾವನ್ನು ಕಣಕ್ಕಿಳಿಸಲಾಗಿದ್ದು, ಈ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:- ಭಾರತದ ಪರ ಆಡಿದ ಜಮ್ಮು-ಕಾಶ್ಮೀರದ 2ನೇ ಆಟಗಾರ ಉಮ್ರಾನ್ ಮಲಿಕ್: ಹಾಗಿದ್ರೆ ಮೊದಲಿಗ ಯಾರು?

ವಿಶೇಷ ಎಂದರೆ ಕಳೆದ ಒಂದು ವರ್ಷದೊಳಗೆ ಟೀಮ್ ಇಂಡಿಯಾ ಟಿ20 ತಂಡವನ್ನು 4 ನಾಯಕರುಗಳು ಮುನ್ನಡೆಸಿದ್ದಾರೆ. ಅವರಲ್ಲಿ ನಾಲ್ವರು ಈಗಲೂ ಟೀಮ್ ಇಂಡಿಯಾದ ಖಾಯಂ ಸದಸ್ಯರು ಎಂಬುದು ವಿಶೇಷ. ಇನ್ನು ಗಾಯಗೊಂಡಿರುವ ಕೆಎಲ್ ರಾಹುಲ್ ಕೂಡ ನಾಯಕರಾಗಿ ಪದಾರ್ಪಣೆ ಮಾಡಬೇಕಿದ್ದ ಆಟಗಾರ. ಅಂದರೆ ಟೀಮ್ ಇಂಡಿಯಾದ ಪ್ಲೇಯಿಂಗ್​ 11ನ ಖಾಯಂ ಸದಸ್ಯರಲ್ಲೇ 5 ನಾಯಕರುಗಳು ಇರುವುದು ವಿಶೇಷ.

Published On - 12:09 pm, Mon, 27 June 22