ಚಿನ್ನಕ್ಕಾಗಿ ಭಾರತ- ಅಫ್ಘಾನ್ ನಡುವೆ ಫೈಟ್; ಫೈನಲ್ ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ?

India vs Afghanistan, Asian Games 2023 Live Streaming: ಅಕ್ಟೋಬರ್ 7, ಶನಿವಾರದಂದು ಹ್ಯಾಂಗ್‌ಝೌನಲ್ಲಿರುವ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಪುರುಷರ ಟಿ20 ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಸೆಣಸಲಿದೆ.

ಚಿನ್ನಕ್ಕಾಗಿ ಭಾರತ- ಅಫ್ಘಾನ್ ನಡುವೆ ಫೈಟ್; ಫೈನಲ್ ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ?
ಭಾರತ- ಅಫ್ಘಾನಿಸ್ತಾನ
Follow us
ಪೃಥ್ವಿಶಂಕರ
|

Updated on: Oct 07, 2023 | 6:15 AM

ಅಕ್ಟೋಬರ್ 7, ಶನಿವಾರದಂದು ಹ್ಯಾಂಗ್‌ಝೌನಲ್ಲಿರುವ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ (Asian Games 2023) ಪುರುಷರ ಟಿ20 ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ, ಅಫ್ಘಾನಿಸ್ತಾನ (India vs Afghanistan) ವಿರುದ್ಧ ಸೆಣಸಲಿದೆ. ಕ್ವಾರ್ಟರ್ ಫೈನಲ್‌ನಲ್ಲಿ ನೇಪಾಳವನ್ನು ಮಣಿಸಿದ್ದ ಭಾರತದ ಯುವ ಪಡೆ, ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 9 ವಿಕೆಟ್​ಗಳ ಸುಲಭ ಜಯ ಸಾಧಿಸಿ ಫೈನಲ್​ಗೆ ಲಗ್ಗೆ ಇಟ್ಟಿತ್ತು. ಇತ್ತ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾವನ್ನು ಮಣಿಸಿದ ಅಫ್ಘಾನಿಸ್ತಾನ ಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತವನ್ನು ಎದುರಿಸಲು ಸಜ್ಜಾಗಿದೆ.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 100 ರನ್‌ಗಳ ಗಡಿ ದಾಟಲು ಸಾಧ್ಯವಾಗದೆ 9 ವಿಕೆಟ್‌ಗಳನ್ನು ಕಳೆದುಕೊಂಡು 96 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿತು. ಇದಕ್ಕೆ ಉತ್ತರವಾಗಿ ಭಾರತ ಕೇವಲ 9.2 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗುರಿ ಬೆನ್ನಟ್ಟಿತು.

ಇನ್ನು ಸೆಮಿಫೈನಲ್​ನಲ್ಲಿ ಸೋತಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಮೂರನೇ ಸ್ಥಾನಕ್ಕಾಗಿ ಅಂದರೆ ಕಂಚಿನ ಪದಕಕ್ಕಾಗಿ ಸೆಣಸಲಿವೆ. ಈ ಎರಡೂ ಪಂದ್ಯಗಳು ಶನಿವಾರ ನಡೆಯಲಿದ್ದು, ಮೂರನೇ ಸ್ಥಾನದ ಪ್ಲೇ-ಆಫ್ ಫೈನಲ್‌ಗೆ ಮೊದಲು ಪ್ರಾರಂಭವಾಗಲಿದೆ.

ಪದಕಗಳ ಶತಕ; ಏಷ್ಯನ್ ಗೇಮ್ಸ್​ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ..!

ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಷ್ಯನ್ ಗೇಮ್ಸ್ 2023 ರ ಫೈನಲ್ ಪಂದ್ಯ ಯಾವಾಗ ನಡೆಯಲಿದೆ?

ಏಷ್ಯನ್ ಗೇಮ್ಸ್ 2023 ರ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಫೈನಲ್ ಪಂದ್ಯವು ಶನಿವಾರ, ಅಕ್ಟೋಬರ್ 07 ರಂದು ನಡೆಯಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ಏಷ್ಯನ್ ಗೇಮ್ಸ್ 2023 ರ ಫೈನಲ್ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಏಷ್ಯನ್ ಗೇಮ್ಸ್ 2023 ರ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಫೈನಲ್ ಪಂದ್ಯವು ಬೆಳಿಗ್ಗೆ 11:30 ಕ್ಕೆ ಪ್ರಾರಂಭವಾಗಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಷ್ಯನ್ ಗೇಮ್ಸ್ 2023 ರ ಫೈನಲ್ ಪಂದ್ಯ ಎಲ್ಲಿ ನಡೆಯಲಿದೆ?

ಏಷ್ಯನ್ ಗೇಮ್ಸ್ 2023 ರ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಫೈನಲ್ ಪಂದ್ಯವು ಹ್ಯಾಂಗ್‌ಝೌನಲ್ಲಿರುವ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ನಡೆಯಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ ಏಷ್ಯನ್ ಗೇಮ್ಸ್ 2023 ರ ಫೈನಲ್ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?

ಏಷ್ಯನ್ ಗೇಮ್ಸ್ 2023 ರ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಫೈನಲ್ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಷ್ಯನ್ ಗೇಮ್ಸ್ 2023 ಫೈನಲ್ ಪಂದ್ಯದ ಆನ್‌ಲೈನ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬೇಕು?

ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತ-ಅಫ್ಘಾನಿಸ್ತಾನ ಫೈನಲ್ ಅನ್ನು SonyLIV ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಬಹುದು.

ಉಭಯ ತಂಡಗಳು

ಭಾರತ ತಂಡ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್(ನಾಯಕ), ತಿಲಕ್ ವರ್ಮಾ, ಜಿತೇಶ್ ಶರ್ಮಾ, ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಅರ್ಷದೀಪ್ ಸಿಂಗ್, ರಾಹುಲ್ ತ್ರಿಪಾಠಿ, ಅವೇಶ್ ಖಾನ್, ಮುಖೇಶ್ ಕುಮಾರ್, ಪ್ರಭಸಿಮ್ರಾನ್ ಸಿಂಗ್, ಆಕಾಶ್ ದೀಪ್

ಅಫ್ಘಾನಿಸ್ತಾನ ತಂಡ: ಸೇದಿಕುಲ್ಲಾ ಅಟಲ್, ಮೊಹಮ್ಮದ್ ಶಹಜಾದ್, ನೂರ್ ಅಲಿ ಜದ್ರಾನ್, ಶಾಹಿದುಲ್ಲಾ ಕಮಾಲ್, ಅಫ್ಸರ್ ಝಜೈ, ಕರೀಂ ಜನತ್, ಗುಲ್ಬದಿನ್ ನೈಬ್(ನಾಯಕ), ಶರಫುದ್ದೀನ್ ಅಶ್ರಫ್, ಖೈಸ್ ಅಹ್ಮದ್, ಫರೀದ್ ಅಹ್ಮದ್ ಮಲಿಕ್, ಜಹೀರ್ ಖಾನ್, ಸೈಯದ್ ಶಿರ್ಜಾದ್, ನಿಜಾತ್ ಮಸೂದ್, ನಿಜಾತ್ ಮಸೂದ್, ವಫಿವುಲ್ಲಾ ತಾರಖಿಲ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ