AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಂಕಿಗೆ ಸುಸ್ತು; ಮತ್ತೊಮ್ಮೆ ಟ್ರೋಲಿಗರಿಗೆ ತುತ್ತಾದ ನಂ.1 ಬ್ಯಾಟರ್ ಬಾಬರ್..!

ICC World Cup 2023: ತಂಡದ ಪ್ರಮುಖ ಮೂವರು ಬ್ಯಾಟರ್​ಗಳು ಪವರ್ ಪ್ಲೇ ಮುಗಿಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು. ಅದರಲ್ಲೂ ತಂಡದ ನಾಯಕ ಬಾಬರ್ ಆಝಂ ತಮ್ಮ ಕಳಪೆ ಫಾರ್ಮ್​ ಅನ್ನು ಇಲ್ಲಿಯೂ ಸಹ ಮುಂದುವರೆಸಿದ್ದು, ಟ್ರೋಲಿಗರಿಗೆ ಬಾಯಿಗೆ ಆಹಾರವಾಗಿದ್ದಾರೆ.

ಒಂದಂಕಿಗೆ ಸುಸ್ತು; ಮತ್ತೊಮ್ಮೆ ಟ್ರೋಲಿಗರಿಗೆ ತುತ್ತಾದ ನಂ.1 ಬ್ಯಾಟರ್ ಬಾಬರ್..!
ಬಾಬರ್ ಆಝಂ
ಪೃಥ್ವಿಶಂಕರ
|

Updated on:Oct 07, 2023 | 7:14 AM

Share

ಏಕದಿನ ವಿಶ್ವಕಪ್​ನ (ICC Men’s ODI World Cup 2023) ಎರಡನೇ ದಿನದಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ (Pakistan vs Netherlands) ತಂಡಗಳು ಮುಖಾಮುಖಿಯಾಗಿದ್ದವು. ನಿರೀಕ್ಷೆಯಂತೆ ನೆದರ್ಲೆಂಡ್ಸ್ ತಂಡವನ್ನು 81 ರನ್​ಗಳಿಂದ ಮಣಿಸಿದ ಪಾಕಿಸ್ತಾನ ವಿಶ್ವಕಪ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಆದರೆ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡದ ಅದೊಂದು ಸಮಸ್ಯೆ ವಿಶ್ವಕಪ್​ನಲ್ಲಿಯೂ ಮುಂದುವರೆದಿದೆ. ವಾಸ್ತವವಾಗಿ ತಂಡದ ಪ್ರಮುಖ ಮೂವರು ಬ್ಯಾಟರ್​ಗಳು ಪವರ್ ಪ್ಲೇ ಮುಗಿಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು. ಅದರಲ್ಲೂ ತಂಡದ ನಾಯಕ ಬಾಬರ್ ಆಝಂ (Babar Azam) ತಮ್ಮ ಕಳಪೆ ಫಾರ್ಮ್​ ಅನ್ನು ಇಲ್ಲಿಯೂ ಸಹ ಮುಂದುವರೆಸಿದ್ದು, ಟ್ರೋಲಿಗರಿಗೆ ಬಾಯಿಗೆ ಆಹಾರವಾಗಿದ್ದಾರೆ.

ಈ ಪಂದ್ಯದಲ್ಲಿ ಪಾಕ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಫಖರ್ ಜಮಾನ್ ಹಾಗೂ ಇಮಾಮ್ ಉಲ್ ಹಕ್​ಗೆ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ. ಕೇವಲ 15 ರನ್​ಗಳಿಗೆ ಇವರಿಬ್ಬರ ಜೊತೆಯಾಟ ಮುರಿದುಬಿತ್ತು. ಏಷ್ಯಾಕಪ್​ನಲ್ಲಿ ತನ್ನ ಕಳಪೆ ಫಾರ್ಮ್​ನಿಂದಲೇ ಎಲ್ಲರ ಟೀಕೆಗೆ ಗುರಿಯಾಗಿದ್ದ ಫಖರ್, ಈ ಪಂದ್ಯದಲ್ಲೂ ಬೇಗನೇ ಪೆವಿಲಿಯನ್ ಸೇರಿಕೊಂಡರು. ಆದರೆ ಆ ಬಳಿಕ ಬಂದ ನಾಯಕ ಬಾಬರ್ ತಾಳ್ಮೆಯ ಆಟಕ್ಕೆ ಮುಂದಾದರು.

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಕಾರು ಚಲಾಯಿಸಿ ನಡು ರಸ್ತೆಯಲ್ಲಿ ದಂಡ ಕಟ್ಟಿದ ಪಾಕ್ ನಾಯಕ ಬಾಬರ್

5 ರನ್​ಗಳಿಗೆ ಸುಸ್ತಾದ ಬಾಬರ್

ಡಚ್ಚ್ ಬೌಲರ್​ಗಳ ತಂತ್ರವನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ಸಮಯ ಕಳೆಯಲು ಬಾಬರ್ ಚಿಂತಿಸಿದರು. ಹೀಗಾಗಿ ಬಾಬರ್ ಬರೋಬ್ಬರಿ 18 ಎಸೆತಗಳನ್ನು ಎದುರಿಸಿ ಕೇವಲ 5 ರನ್​ಗಳನ್ನು ಮಾತ್ರ ಕಲೆಹಾಕಿದ್ದರು. ಆದರೆ ತಂಡದ ಮೊತ್ತ 34 ರನ್​ಗಳಿರುವಾಗ 9ನೇ ಓವರ್​ ಬೌಲ್ ಮಾಡಲು ಬಂದ ಕಾಲಿನ್ ಅಕರ್‌ಮನ್‌ ಎಸೆತವನ್ನು ಬಾಬರ್ ನೇರವಾಗಿ ಮಿಡ್ ವಿಕೆಟ್​ ಕಡೆಗೆ ಆಡಿದರು. ಆದರೆ ಅಲ್ಲೆ ನಿಂತಿದ್ದ ಸಾಕಿಬ್ ಜುಲ್ಫಿಕರ್ ತಮ್ಮ ಬಲಕ್ಕೆ ಜಿಗಿದು ಎರಡೂ ಕೈಗಳಿಂದ ಅದ್ಭುತ ಕ್ಯಾಚ್ ತೆಗೆದುಕೊಂಡರು.

ಏಷ್ಯಾಕಪ್​ನಲ್ಲೂ ಕಳಪೆ ಆಟ

ವಾಸ್ತವವಾಗಿ ವಿಶ್ವಕಪ್ ಲೀಗ್ ಹಂತ ಆರಂಭವಾಗುವುದಕ್ಕೂ ಮುನ್ನ ಬಾಬರ್ ಮೇಲೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಏಕೆಂದರೆ ಈ ಹಿಂದೆ ನಡೆದ ಏಷ್ಯಾಕಪ್​ನಲ್ಲೂ ಪಾಕ್ ತಂಡ ಸೂಪರ್ 4 ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇದಕ್ಕೆ ತಂಡದ ಕಳಪೆ ಬ್ಯಾಟಂಗ್ ಪ್ರಮುಖ ಕಾರಣವಾಗಿತ್ತು. ಇಡೀ ಟೂರ್ನಿಯಲ್ಲಿ ನಾಯಕ ಬಾಬರ್ ಸೇರಿದಂತೆ ತಂಡದ ಪ್ರಮುಖ ಆಟಗಾರರು ರನ್ ಕಲೆಹಾಕುವಲ್ಲಿ ವಿಫಲರಾಗಿದ್ದರು. ಆ ಬಳಿಕ ತಂಡದಲ್ಲಿ ವೈಮನಸ್ಸು ಮೂಡಿದೆ ಎಂದು ವರದಿಯಾಗಿತ್ತು. ಇದೆಲ್ಲ ವರದಿಗಳನ್ನು ಸುಳ್ಳು ಎಂದಿದ್ದ ಪಾಕ್ ತಂಡ ವಿಶ್ವಕಪ್​ಗೆ ಎಂಟ್ರಿಕೊಟ್ಟಿತ್ತು.

ಟ್ರೋಲಿಗರ ಕಾಟ

ಆದರೆ ವಿಶ್ವಕಪ್​ನಲ್ಲಿ ಆಡಿದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಪಾಕ್ ಪಡೆ ಬೃಹತ್ ಮೊತ್ತ ಕಲೆಹಾಕಿದರ ಹೊರತಾಗಿಯೂ ಸೋಲು ಅನುಭವಿಸಬೇಕಾಯಿತು. ಆದರೆ ಸಮಾಧಾನಕರ ಸಂಗತಿಯೆಂದರೆ ಆಸೀಸ್ ವಿರುದ್ಧ ಫಾರ್ಮ್​ಗೆ ಮರಳಿದ್ದ ನಾಯಕ ಬಾಬರ್ 80 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಈ ಮೂಲಕ ವಿಶ್ವಕಪ್​ನಲ್ಲಿ ಅಬ್ಬರಿಸುವ ಸೂಚನೆಯನ್ನು ಬಾಬರ್ ನೀಡಿದ್ದರು. ಆದರೆ ಡಚ್ಚರ ವಿರುದ್ಧ ಬಾಬರ್ ಬ್ಯಾಟಿಂಗ್ ನೋಡಿದ ನೆಟ್ಟಿಗರು, ಪಾಕ್ ನಾಯಕನ ಮೇಲೆ ಮೀಮ್ಸ್​ಗಳ ಸುರಿಮಳೆಗೈದಿದ್ದಾರೆ.

ಪಂದ್ಯ ಹೀಗಿತ್ತು

ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 49 ಓವರ್‌ಗಳಲ್ಲಿ 286 ರನ್‌ಗಳಿಗೆ ಆಲೌಟಾಯಿತು. ಬಳಿಕ ಡಚ್ ತಂಡ 41 ಓವರ್‌ಗಳಲ್ಲಿ 205 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಬಾಬರ್ ಸೇನೆ ಮೊದಲ ವಿಶ್ವಕಪ್​ ಪಂದ್ಯದಲ್ಲಿ 81 ರನ್​ಗಳ ಜಯ ಸಾಧಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:10 am, Sat, 7 October 23