ಬಲಿಷ್ಠ ಪಾಕ್ ಬೌಲರ್​ಗಳ ಎದುರು ಗೆಲುವಿಗಾಗಿ ಹೋರಾಡಿ ಸೋತ ಡಚ್ಚರು..!

ODI World Cup 2023: 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಗೆಲುವಿನ ಶುಭಾರಂಭ ಮಾಡಿದೆ. ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನ 81 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನೆದರ್ಲೆಂಡ್ಸ್ ಎದುರು 287 ರನ್‌ಗಳ ಸವಾಲನ್ನು ನೀಡಿತ್ತು. ಈ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ಬ್ಯಾಟ್ಸ್‌ಮನ್​ಗಳು ಪಾಕಿಸ್ತಾನ ಬೌಲರ್​ಗಳ ವಿರುದ್ಧ ಗೆಲುವಿಗಾಗಿ ಉತ್ತಮ ಹೋರಾಟ ನೀಡಿದರು. ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ.

ಬಲಿಷ್ಠ ಪಾಕ್ ಬೌಲರ್​ಗಳ ಎದುರು ಗೆಲುವಿಗಾಗಿ ಹೋರಾಡಿ ಸೋತ ಡಚ್ಚರು..!
ಪಾಕಿಸ್ತಾನ- ನೆದರ್ಲೆಂಡ್ಸ್
Follow us
ಪೃಥ್ವಿಶಂಕರ
|

Updated on:Oct 06, 2023 | 10:36 PM

2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ODI World Cup 2023) ಪಾಕಿಸ್ತಾನ ಕ್ರಿಕೆಟ್ ತಂಡ ಗೆಲುವಿನ ಶುಭಾರಂಭ ಮಾಡಿದೆ. ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನ (Pakistan vs Netherlands) 81 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನೆದರ್ಲೆಂಡ್ಸ್ ಎದುರು 287 ರನ್‌ಗಳ ಸವಾಲನ್ನು ನೀಡಿತ್ತು. ಈ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ಬ್ಯಾಟ್ಸ್‌ಮನ್​ಗಳು ಪಾಕಿಸ್ತಾನ ಬೌಲರ್​ಗಳ ವಿರುದ್ಧ ಗೆಲುವಿಗಾಗಿ ಉತ್ತಮ ಹೋರಾಟ ನೀಡಿದರು. ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಪಂದ್ಯ ಏಕಪಕ್ಷೀಯವಾಗಿ ಮುಗಿಯಲು ನೆದರ್ಲೆಂಡ್ಸ್ ಅವಕಾಶ ನೀಡಲಿಲ್ಲ. 41 ಓವರ್‌ಗಳವರೆಗೆ ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ 205 ರನ್ ಗಳಿಸಿದರೆ ತಂಡದ ಪರ ಇಬ್ಬರೂ ಅರ್ಧಶತಕ ಸಿಡಿಸಿದರು. ಇನ್ನು ಪಾಕಿಸ್ತಾನ ಪರ ಹ್ಯಾರಿಸ್ ರೌಫ್ (Haris Rauf) ಅತಿ ಹೆಚ್ಚು 3 ವಿಕೆಟ್ ಪಡೆದು ಮಿಂಚಿದರು.

ರಿಜ್ವಾನ್- ಶಕೀಲ್ ಅರ್ಧಶತಕ

ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ಟಾಸ್ ಗೆದ್ದು ಪಾಕಿಸ್ತಾನವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ನೆದರ್ಲೆಂಡ್ಸ್ ಬೌಲರ್​ಗಳ ಕರಾರುವಕ್ಕಾದ ದಾಳಿ ಮುಂದೆ ಪಾಕಿಸ್ತಾನಕ್ಕೆ ಸಂಪೂರ್ಣ 50 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಾಕಿಸ್ತಾನ 49 ಓವರ್‌ಗಳಲ್ಲಿ 286 ರನ್ ಕಲೆಹಾಕಿತು. ಪಾಕಿಸ್ತಾನ ಪರ ರಿಜ್ವಾನ್ ಮತ್ತು ಸೌದ್ ಶಕೀಲ್ ತಲಾ 68 ರನ್ ಗಳಿಸಿದರೆ, ನೆದರ್ಲೆಂಡ್ಸ್‌ ಪರ ಬಾಸ್ ಡಿ ಲೀಡೆ 4 ವಿಕೆಟ್‌ ಪಡೆದು ಮಿಂಚಿದರು.

ನಾಳೆ ವಿಶ್ವಕಪ್​ನ ಮೊದಲ ಡಬಲ್ ಹೆಡ್ಡರ್; ಯಾವ್ಯಾವ ತಂಡಗಳ ನಡುವೆ ಪಂದ್ಯ? ಇಲ್ಲಿದೆ ವಿವರ

ನೆದರ್ಲೆಂಡ್ಸ್ ಹೋರಾಟ

ಪಾಕ್ ನೀಡಿದ 286 ರನ್​ಗಳ ಗೆಲುವಿನ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ಪರ ಬಾಸ್ ಡಿ ಲೀಡೆ 67 ರನ್‌ಗಳ ಹೋರಾಟದ ಇನ್ನಿಂಗ್ಸ್ ಆಡಿದರು. ಇವರೊಂದಿಗೆ ಆರಂಭಿಕ ವಿಕ್ರಮಜಿತ್ ಸಿಂಗ್ ಕೂಡ 52 ರನ್ ಕೊಡುಗೆ ನೀಡಿದರು. ಈ ಇಬ್ಬರನ್ನು ಹೊರತುಪಡಿಸಿ ಲೋಗನ್ ವಿಕ್ ಬಿಕ್ 28 ಎಸೆತಗಳಲ್ಲಿ ಔಟಾಗದೆ 28 ರನ್ ಗಳಿಸಿದರೆ, ಕಾಲಿನ್ ಅಕರ್ಮನ್ 17 ರನ್​ಗಳ ಇನ್ನಿಂಗ್ಸ್ ಆಡಿದರು. ಸಾಕಿಬ್ ಜುಲ್ಫಿಕರ್ 10 ರನ್ ಬಾರಿಸಿದರೆ, ಕ್ಯಾಪ್ಟನ್ ಸ್ಕಾಟ್ ಎಡ್ವರ್ಡ್ಸ್ಗೆ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಉಳಿದ 5 ಜನರಿಗೆ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ.

ಪಾಕಿಸ್ತಾನ ಪರ ಹ್ಯಾರಿಸ್ ರೌಫ್ 3 ವಿಕೆಟ್ ಉರುಳಿಸಿದರೆ, ಹಸನ್ ಅಲಿ 2 ವಿಕೆಟ್ ಪಡೆಯುವ ಮೂಲಕ ಹ್ಯಾರಿಸ್ ರೌಫ್‌ಗೆ ಸಾಥ್ ನೀಡಿದರು. ಶಾಹೀನ್ ಅಫ್ರಿದಿ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್ ಮತ್ತು ಶಾದಾಬ್ ಖಾನ್ ತಲಾ 1 ವಿಕೆಟ್ ಪಡೆದು ನೆದರ್ಲೆಂಡ್ಸ್‌ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:28 pm, Fri, 6 October 23