AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆ ವಿಶ್ವಕಪ್​ನ ಮೊದಲ ಡಬಲ್ ಹೆಡ್ಡರ್; ಯಾವ್ಯಾವ ತಂಡಗಳ ನಡುವೆ ಪಂದ್ಯ? ಇಲ್ಲಿದೆ ವಿವರ

ODI World Cup 2023: ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ನ ಮೂರನೇ ದಿನದಂದು ಅಂದರೆ ಅಕ್ಟೋಬರ್ 7 ರಂದು ಡಬಲ್ ಹೆಡರ್ ಪಂದ್ಯ ಇರಲಿದೆ. ಅಂದರೆ ಒಂದೇ ದಿನ ಎರಡು ಪಂದ್ಯಗಳು ನಡೆಯಲ್ಲಿವೆ. ದಿನದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗುತ್ತಿದ್ದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ.

ನಾಳೆ ವಿಶ್ವಕಪ್​ನ ಮೊದಲ ಡಬಲ್ ಹೆಡ್ಡರ್; ಯಾವ್ಯಾವ ತಂಡಗಳ ನಡುವೆ ಪಂದ್ಯ? ಇಲ್ಲಿದೆ ವಿವರ
ವಿಶ್ವಕಪ್
ಪೃಥ್ವಿಶಂಕರ
|

Updated on: Oct 06, 2023 | 8:20 PM

Share

ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ನ (ODI World Cup 2023) ಮೂರನೇ ದಿನದಂದು ಅಂದರೆ ಅಕ್ಟೋಬರ್ 7 ರಂದು ಡಬಲ್ ಹೆಡರ್ ಪಂದ್ಯ ಇರಲಿದೆ. ಅಂದರೆ ಒಂದೇ ದಿನ ಎರಡು ಪಂದ್ಯಗಳು ನಡೆಯಲ್ಲಿವೆ. ದಿನದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ (Bangladesh vs Afghanistan) ಮುಖಾಮುಖಿಯಾಗುತ್ತಿದ್ದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ (Sri Lanka vs South Africa) ತಂಡಗಳು ಮುಖಾಮುಖಿಯಾಗುತ್ತಿವೆ. ಇನ್ನು ಮೊದಲ ಪಂದ್ಯ ಬೆಳಿಗ್ಗೆ 10.30ಕ್ಕೆ ಆರಂಭವಾದರೆ, ಎರಡನೇ ಪಂದ್ಯ ಎಂದಿನಂತೆ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.

ಬಾಂಗ್ಲಾದೇಶ- ಅಫ್ಘಾನಿಸ್ತಾನ ಮುಖಾಮುಖಿ

ದಿನದ ಮೊದಲ ಪಂದ್ಯ ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ನಡುವೆ ನಡೆಯಲ್ಲಿದೆ. ಏಷ್ಯಾದ ಎರಡೂ ರಾಷ್ಟ್ರಗಳು ಗೆಲುವಿನ ಮೂಲಕ ಪಂದ್ಯಾವಳಿಯನ್ನು ಪ್ರಾರಂಭಿಸಲು ಎದುರ ನೋಡುತ್ತಿವೆ. ಈ ಎರಡೂ ತಗಂಡಗಳಿಗೂ ಅಭ್ಯಾಸ ಪಂದ್ಯಗಳನ್ನು ಆಡಲು ಅವಕಾಶ ಸಿಕ್ಕಿದ್ದು ಉಭಯ ತಂಡಗಳ ಅಂತಿಮ ಸಿದ್ದತೆಗೆ ಅವಕಾಶ ಒದಗಿ ಬಂದಿತ್ತು. ಇದರಲ್ಲಿ ಬಾಂಗ್ಲಾದೇಶಕ್ಕೆ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದರೆ, ಅಫ್ಘಾನಿಸ್ತಾನದ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಎರಡನೇ ಪಂದ್ಯ ಶ್ರೀಲಂಕಾ ವಿರುದ್ಧ ನಡೆದಿತ್ತು. ಆ ಪಂದ್ಯವನ್ನು ಅಫ್ಘಾನ್ ತಂಡ ಆರು ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.

ಮೊದಲ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬಂದವರೆಷ್ಟು? ವಿಶ್ವಕಪ್ ಇತಿಹಾಸದಲ್ಲೇ ಇದು ದಾಖಲೆ

ಶ್ರೀಲಂಕಾ- ಆಫ್ರಿಕಾ ನಡುವೆ ಫೈಟ್

ಇನ್ನು ದಿನದ ಎರಡನೇ ಪಂದ್ಯ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲ್ಲಿದೆ. ಜಿಂಬಾಬ್ವೆಯಲ್ಲಿ ನಡೆದ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯವನ್ನು ಗೆದ್ದ ಶ್ರೀಲಂಕಾ ಮೆಗಾ ಇವೆಂಟ್‌ಗೆ ಟಿಕೆಟ್ ಖಚಿತಪಡಿಸಿಕೊಂಡಿತ್ತು. ಆದರೆ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡವನ್ನು ಎದುರಿಸಿದ್ದ ಶ್ರೀಲಂಕಾ ಎರಡೂ ಅಭ್ಯಾಸ ಪಂದ್ಯಗಳನ್ನು ಕಳೆದುಕೊಂಡಿತು. ಹೀಗಾಗಿ ಆರಂಭದಲ್ಲಿ ಲಂಕಾ ಪಡೆಗೆ ಕೊಂಚ ಹಿನ್ನಡೆಯಾಗಿರುವುದಂತೂ ಖಚಿತ.

ಏತನ್ಮಧ್ಯೆ, ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಸ್ವದೇಶದಲ್ಲಿ 3-2 ಅಂತರದಿಂದ ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ಈ ಮಹಾ ಈವೆಂಟ್​ಗೆ ಕಾಲಿಟ್ಟಿತ್ತು. ಆದರೆ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿತ್ತು. ಇದೀಗ ಶ್ರೀಲಂಕಾ ತಂಡವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸುತ್ತಿರುವ ಆಫ್ರಿಕಾ ತಂಡ ಈ ಪಂದ್ಯದ ಗೆಲ್ಲುವ ಫೇವರೇಟ್ ಎನಿಸಿಕೊಂಡಿದೆ.

ತಂಡಗಳು

ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ(ನಾಯಕ), ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ರಶೀದ್ ಖಾನ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಅಜ್ಮತುಲ್ಲಾ ಒಮರ್ಜಾಯ್, ಫಜಲ್ಹಕ್ ಫಾರೂಕಿ, ಅಬ್ದುಲ್ ಅಹ್ಮದ್, ನೂರ್ ಅಹ್ಮದ್, ನೊರ್ ರೆಹಮಾನ್, ಇಕ್ರಮ್ ಅಲಿಖಿಲ್.

ಬಾಂಗ್ಲಾದೇಶ ತಂಡ: ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್(ನಾಯಕ), ಮುಶ್ಫಿಕರ್ ರಹೀಮ್, ಮಹ್ಮುದುಲ್ಲಾ, ತೌಹಿದ್ ಹೃದಯೋಯ್, ಮೆಹಿದಿ ಹಸನ್ ಮಿರಾಜ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ನಸುಮ್ ಮಹಮ್ಮದ್, ಶೋಸನ್ ಇಸ್ಲಾಂ, ತಂಜಿಮ್ ಹಸನ್ ಸಾಕಿಬ್.

ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಕುಸಲ್ ಪೆರೇರ, ಧನಂಜಯ ಡಿ ಸಿಲ್ವ, ದಸುನ್ ಶಾನಕ(ನಾಯಕ), ಕಸುನ್ ರಜಿತ, ಲಹಿರು ಕುಮಾರ, ದುನಿತ್ ವೆಲ್ಲಲಗೆ, ದುಶನ್ ಹೇಮಂತ, ಮಥೀಶ ಪಥಿರ್, ಮಥೀಶ ಪಥಿರ್ ತೀಕ್ಷಣ

ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಟೆಂಬಾ ಬವುಮಾ(ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಆಂಡಿಲ್ ಫೆಹ್ಲುಕ್ವಾಯೊ, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಲುಂಗಿ ವಿಲ್ಜಿಬಾ ರ್ಯಾಮ್ಸ್, ಕಜಾದ್ ವಿಲ್ಗಿಡಾ, , ತಬ್ರೈಜ್ ಶಮ್ಸಿ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ