IND vs AUS: ಆಸೀಸ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ರೋಹಿತ್; ಭಾರತಕ್ಕೆ ಹಿಟ್‌ಮ್ಯಾನ್ ಆಸರೆ
Rohit Sharma: ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿ ಅಂಗವಾಗಿ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವೆ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಭರ್ಜರಿ ಶತಕ ಸಿಡಿಸಿದ್ದಾರೆ. ರೋಹಿತ್ 171 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ ಶತಕ ಬಾರಿಸಿದ್ದಾರೆ. ಇದು ಆರಂಭಿಕ ಆಟಗಾರನಾಗಿ ರೋಹಿತ್ ಅವರ ಆರನೇ ಟೆಸ್ಟ್ ಶತಕವಾಗಿದೆ. ರೋಹಿತ್ ಟೆಸ್ಟ್‌ನಲ್ಲಿ ಓಪನಿಂಗ್ ಪ್ರಾರಂಭಿಸಿದಾಗಿನಿಂದ, ಈ ಸ್ವರೂಪದಲ್ಲಿ ಅವರ ಪ್ರದರ್ಶನ ಅದ್ಭುತವಾಗಿದೆ. ಅಲ್ಲದೆ ಈ ಶತಕ ರೋಹಿತ್ ಶರ್ಮಾಗೆ ಬಹಳ ವಿಶೇಷವಾಗಿದ್ದು, ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ ಹಿಟ್‌ಮ್ಯಾನ್ ಟೆಸ್ಟ್ ಶತಕ ಬಾರಿಸಿದ್ದಾರೆ.
ಆಸೀಸ್ ವಿರುದ್ಧ ಮೊದಲ ಟೆಸ್ಟ್ ಶತಕ
ಡಿಸೆಂಬರ್ 9, 2014 ರಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಿದ್ದ ರೋಹಿತ್ ಶರ್ಮಾ, ಅದರ ನಂತರ ಆಸೀಸ್ ವಿರುದ್ಧ 14 ಟೆಸ್ಟ್ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ ಒಂದೇ ಒಂದು ಪಂದ್ಯದಲ್ಲೂ ಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಆದರೆ 15ನೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅಂದರೆ 2985 ದಿನಗಳ ನಂತರ ರೋಹಿತ್ ಆಸೀಸ್ ವಿರುದ್ಧ ತಮ್ಮ ಶತಕದ ಬರವನ್ನು ನೀಗಿಸಿಕೊಂಡಿದ್ದಾರೆ.
Creamedddddd! ?
Sublime shot off the blade of Rohit Sharma to get #TeamIndia motoring on Day 2.
Tune-in to thrilling action in the Mastercard #INDvAUS Test on Star Sports & Disney+Hotstar! #BelieveInBlue #TestByFire pic.twitter.com/4yY9SoHze1
— Star Sports (@StarSportsIndia) February 10, 2023
Smiles, claps & appreciation all around! ? ?
This has been a fine knock! ? ?
Take a bow, captain @ImRo45 ??
Follow the match ▶️ https://t.co/SwTGoyHfZx #TeamIndia | #INDvAUS | @mastercardindia pic.twitter.com/gW0NfRQvLY
— BCCI (@BCCI) February 10, 2023
Milestone Unlocked ?
A special landmark ? ?@ImRo45 becomes the first Indian to score hundreds across Tests, ODIs & T20Is as #TeamIndia captain ? pic.twitter.com/YLrcYKcTVR
— BCCI (@BCCI) February 10, 2023
ಹೇಳಿಕೆಯನ್ನು ಸಮರ್ಥಿಸಿಕೊಂಡ ರೋಹಿತ್
ನಾಗ್ಪುರ ಟೆಸ್ಟ್ ಆರಂಭಕ್ಕೂ ಮುನ್ನ ಪಿಚ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಆಸ್ಟ್ರೇಲಿಯಾದ ಮಾಧ್ಯಮಗಳು ನಿರಂತರವಾಗಿ ಪಿಚ್ ಅನ್ನು ಪ್ರಶ್ನಿಸುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲಿ ಆಟಗಾರರು ಆಟದ ಮೇಲೆ ಗಮನ ಹರಿಸಬೇಕೇ ಹೊರತು ಪಿಚ್ ಮೇಲೆ ಅಲ್ಲ ಎಂದು ರೋಹಿತ್ ಶರ್ಮಾ ಅವರಿಗೆ ಸಲಹೆ ನೀಡಿದರು. ತನ್ನ ಹೇಳಿಕೆಯಂತೆಯೇ ಬ್ಯಾಟ್ ಬೀಸಿದ ರೋಹಿತ್ ಆಸೀಸ್ ಮಾಧ್ಯಮಗಳ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಅರ್ಧಶತಕವನ್ನೂ ಗಳಿಸಲು ಸಾಧ್ಯವಾಗದ ಪಿಚ್‌ನಲ್ಲಿ ರೋಹಿತ್ ಅದ್ಭುತ ಶತಕ ಬಾರಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Fri, 10 February 23