
ಬೆಂಗಳೂರು (ಜೂ. 27): ಕ್ರಿಕೆಟ್ ಪ್ರಿಯರಿಗೆ ಒಂದು ರೋಮಾಂಚಕಾರಿ ಸುದ್ದಿ ಇದೆ. ಭಾರತೀಯ ಕ್ರಿಕೆಟ್ ತಂಡವು (Indian Cricket Team) ಅಕ್ಟೋಬರ್ ಮತ್ತು ನವೆಂಬರ್ 2025 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಟೀಮ್ ಇಂಡಿಯಾ ಆತಿಥೇಯರ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಏಕದಿನ ಸರಣಿಯು ಅಕ್ಟೋಬರ್ 19, 2025 ರಂದು ಪರ್ತ್‌ನಿಂದ ಪ್ರಾರಂಭವಾಗಿ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ಕೊನೆಗೊಳ್ಳಲಿದೆ. ಶಾಕಿಂಗ್ ಎಂದರೆ, ಏಕದಿನ ಮತ್ತು ಟಿ20 ಸರಣಿಯ ಎಲ್ಲಾ ಪಂದ್ಯಗಳ ಟಿಕೆಟ್‌ಗಳು ಮಾರಾಟವಾಗಿವೆ ಎಂಬ ಸುದ್ದಿ ಇದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಆಸ್ಟ್ರೇಲಿಯಾ vs ಭಾರತ, 1ನೇ ODI 2025
ಆಸ್ಟ್ರೇಲಿಯಾ vs ಭಾರತ, 2ನೇ ODI 2025
ಆಸ್ಟ್ರೇಲಿಯಾ vs ಭಾರತ, 3ನೇ ODI 2025
ಏಕದಿನ ಸರಣಿಯ ನಂತರ, ಎರಡೂ ತಂಡಗಳು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ, ಇದು ಅಕ್ಟೋಬರ್ 29 ರಂದು ಕ್ಯಾನ್‌ಬೆರಾದಲ್ಲಿ ಪ್ರಾರಂಭವಾಗಿ ನವೆಂಬರ್ 8 ರಂದು ಬ್ರಿಸ್ಬೇನ್‌ನಲ್ಲಿ ಕೊನೆಗೊಳ್ಳಲಿದೆ. ಟಿ20 ಸ್ವರೂಪದಲ್ಲಿರುವ ಈ ಸರಣಿಯು ಆಟಗಾರರಿಗೆ ಮುಂದಿನ ಟಿ20 ವಿಶ್ವಕಪ್‌ಗೆ ತಯಾರಿ ನಡೆಸಲು ಅವಕಾಶವನ್ನು ನೀಡುತ್ತದೆ.
ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬೆದರಿಕೆ; 2 ದಿನ ಹೋಟೆಲ್ನಲ್ಲೇ ಲಾಕ್..!
ಆಸ್ಟ್ರೇಲಿಯಾ vs ಭಾರತ, 1ನೇ T20 2025
ಆಸ್ಟ್ರೇಲಿಯಾ vs ಭಾರತ, 2ನೇ T20 2025
ಆಸ್ಟ್ರೇಲಿಯಾ vs ಭಾರತ, 3ನೇ T20 2025
ಆಸ್ಟ್ರೇಲಿಯಾ vs ಭಾರತ, 4ನೇ T20 2025
ಆಸ್ಟ್ರೇಲಿಯಾ vs ಭಾರತ, 5ನೇ T20I 2025
ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತೀಯ ಅಭಿಮಾನಿಗಳಲ್ಲಿ ಅಪಾರ ಉತ್ಸಾಹವಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ, ‘ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲ್ಲಿರುವ ಏಕದಿನ ಪಂದ್ಯ ಮತ್ತು ಕ್ಯಾನ್‌ಬೆರಾದಲ್ಲಿ ನಡೆಯಲ್ಲಿರುವ ಟಿ20 ಪಂದ್ಯದ ಟಿಕೆಟ್‌ಗಳು ಪಂದ್ಯಕ್ಕೆ ನಾಲ್ಕು ತಿಂಗಳ ಮೊದಲೇ ಮಾರಾಟವಾಗಿದ್ದು, ಇದು ಈ ಪಂದ್ಯಗಳಿಗೆ ಭಾರಿ ಬೇಡಿಕೆಯನ್ನು ತೋರಿಸುತ್ತದೆ. ಈ ಪಂದ್ಯಗಳು ಮಾತ್ರವಲ್ಲದೆ ಎಂಸಿಜಿಯಲ್ಲಿ ನಡೆಯಲ್ಲಿರುವ ಟಿ20 ಪಂದ್ಯ ಹಾಗೂ ಗಬ್ಬಾದಲ್ಲಿ ನಡೆಯಲ್ಲಿರುವ ಟಿ20 ಪಂದ್ಯದ ಟಿಕೆಟ್ಗೂ ಭಾರಿ ಬೇಡಿಕೆಯಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Fri, 27 June 25