AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್​​ನಲ್ಲಿ ಇಂಜೂರಿ, ಎಂಎಲ್​ಸಿಯಲ್ಲಿ ಅಬ್ಬರದ ಆಟ; ಎರಡು ಸಿಕ್ಸ್ ಹೊಡೆದು ಪಂದ್ಯ ಗೆಲ್ಲಿಸಿದ ಫಿಲಿಪ್ಸ್

Glenn Phillips: ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ 2025 ರಲ್ಲಿ ವಾಷಿಂಗ್ಟನ್ ಫ್ರೀಡಂ ತಂಡವು ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ಗ್ಲೆನ್ ಫಿಲಿಪ್ಸ್ ಅವರ ಅದ್ಭುತ ಆಟ ಮತ್ತು ಕೊನೆಯ ಓವರ್‌ನಲ್ಲಿನ ಜಾಗರೂಕ ಆಟದಿಂದ ಗೆಲುವು ಸಾಧ್ಯವಾಯಿತು.

ಐಪಿಎಲ್​​ನಲ್ಲಿ ಇಂಜೂರಿ, ಎಂಎಲ್​ಸಿಯಲ್ಲಿ ಅಬ್ಬರದ ಆಟ; ಎರಡು ಸಿಕ್ಸ್ ಹೊಡೆದು ಪಂದ್ಯ ಗೆಲ್ಲಿಸಿದ ಫಿಲಿಪ್ಸ್
ಫಿಲಿಪ್ಸ್
ರಾಜೇಶ್ ದುಗ್ಗುಮನೆ
|

Updated on:Jun 27, 2025 | 1:25 PM

Share

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ 2025ರ 17ನೇ ಪಂದ್ಯ ರೋಚಕತೆಯ ಹಂತ ತಲುಪಿತ್ತು. ಲಾಸ್ ಏಂಜಲೀಸ್ ನೈಟ್​ ರೈಡರ್ಸ್ ಹಾಗೂ ವಾಷಿಂಗ್ಟನ್ ಫ್ರೀಡಂ ಮಧ್ಯೆ ನಡೆದ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ಗೆದ್ದು ಬೀಗಿತು. ಈ ಪಂದ್ಯವನ್ನು ಬದಲಿಸಿದ ಖ್ಯಾತಿ ಗ್ಲೆನ್ ಫಿಲಿಪ್ಸ್​ಗೆ ಸಲ್ಲುತ್ತದೆ. ಎರಡು ಸಿಕ್ಸ್ ಹೊಡೆದು ಅವರು ಪಂದ್ಯದ ಗತಿ ಬದಲಿಸಿದರು.

ಗ್ಲೆನ್ ಮ್ಯಾಕ್ಸ್​ವೆಲ್ ನಾಯಕತ್ವದ್ವ ವಾಷಿಂಗ್ಟನ್ ತಂಡ ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆ್ಯಂಡ್ರೆ ಫ್ಲೆಚರ್ ಅವರು 60 ಬಾಲ್​ಗೆ 7 ಫೋರ್ ಹಾಗೂ 6 ಸಿಕ್ಸರ್​ಗಳೊಂದಿಗೆ 104 ರನ್ ಕಲೆ ಹಾಕಿ ತಂಡಕ್ಕೆ ಆಸರೆ ಆದರು. ರಸೆಲ್ 13 ಬಾಲ್​ಗೆ 30 ರನ್ ಕಲೆ ಹಾಕಿದರು. ಅಂತಿಮವಾಗಿ 20 ಓವರ್​ನಲ್ಲಿ ತಂಡ 213 ರನ್ ಕಲೆ ಹಾಕಿತು.

ಈ ಬೃಹತ್ ಮೊತ್ತ ಬೆನ್ನು ಹತ್ತಿದ ವಾಷಿಂಗ್ಟನ್ ಟೀಂ ಉತ್ತಮ ಆರಂಭವನ್ನೇ ಪಡೆಯಿತು. ಓಪನರ್ ಮಿಚೆಲ್ ಒವೆನ್ ಅವರು 16 ಬಾಲ್​ಗೆ 43 ರನ್ ಸಿಡಿಸಿ ಔಟ್ ಆದರು. ರಚಿನ್ ರವೀಂದ್ರ ಅವರಿಂದ ಉತ್ತಮ ಆಟ (18 ರನ್) ಬರಲಿಲ್ಲ. ತಂಡದ ನಾಯಕ ಗ್ಲೆನ್ ಮ್ಯಾಕ್ಸ್​ವೆಲ್ ಅವರು 23 ಬಾಲ್​ಗೆ 41 ರನ್ ಸಿಡಿಸಿ ತಂಡಕ್ಕೆ ಆಸರೆ ಆದರು. ಅವರು ಕ್ಲೀನ್ ಬೌಲ್ಡ್ ಆದ ಬಳಿಕ ಮ್ಯಾಚ್ ನೈಟ್ ರೈಡರ್ಸ್​ನತ್ತ ತಿರುಗಿತು.

ಆಗ ಗ್ಲೆನ್ ಫಿಲಿಪ್ಸ್ ಹಾಗೂ ಓಬಸ್ ಪಿಯೆನಾರ್ ಜೊತೆಯಾಟ ತಂಡಕ್ಕೆ ಸಹಕಾರಿ ಆಯಿತು. ಓಬಸ್ ಅವರು 16 ಬಾಲ್​ಗೆ 23 ರನ್ ಸಿಡಿಸಿದರು. ಫಿಲಿಪ್ಸ್ 23 ಬಾಲ್​ಗೆ 33 ರನ್ ಚಚ್ಚಿದರು. ಇದರಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್​ ಸೇರಿದೆ. ಅಂತಿಮಹಂತದಲ್ಲಿ ಫಿಲಿಪ್ಸ್ ಹೊಡೆದ ಎರಡು ಸಿಕ್ಸ್ ತಂಡಕ್ಕೆ ಆಸರೆ ಆಯಿತು.

ಕೊನೆಯ ಓವರ್ ರೋಚಕತೆ..

ಕೊನೆಯ ಓವರ್​ಗೆ ಬೇಕಿದ್ದಿದ್ದು ಕೇವಲ 7 ರನ್. ರಸೆಲ್ ಅವರು ದಾಳಿಗೆ ಇಳಿದರೆ, ಓಬಸ್ ಬ್ಯಾಟಿಂಗ್​ನಲ್ಲಿದ್ದರು. ರಸೆಲ್ ಮೊದಲ ಬಾಲ್ ವೈಡ್ ಹಾಕಿದರು. ಆ ಬಳಿಕ ಓಬಸ್ ಬಾಲ್​ನ ಫೋರ್​ಗೆ ಅಟ್ಟಿದರು. ಐದು ಬಾಲ್​ಗೆ ಬೇಕಿದ್ದಿದ್ದು ಕೇವಲ ಎರಡು ರನ್ ಮಾತ್ರ. ನಂತರದ ಮೂರು ಬಾಲ್​ಗಳನ್ನು ಹೊಡೆಯಲು ಓಬಸ್​ಗೆ ಸಾಧ್ಯವಾಗಲೇ ಇಲ್ಲ. ಐದನೇ ಬಾಲ್​ಗೆ ಸಿಂಗಲ್ ತೆಗೆದರು. ಕೊನೆಯ ಬಾಲ್​ನಲ್ಲಿ ಫಿಲಿಪ್ಸ್ ಹೊಡೆದ ಬಾಲ್ ಕ್ಯಾಚ್ ಆಯಿತು. ಆದರೆ, ಹೋಲ್ಡರ್ ಕ್ಯಾಚ್​ನ ಬಿಟ್ಟರು. ಈ ಮೂಲಕ ಒಂದು ರನ್ ತೆಗೆದು ವಾಷಿಂಗ್ಟನ್ ತಂಡ ಗೆಲುವಿನ ದಡ ಸೇರಿತು.

ಗಾಯ..

ಫಿಲಿಪ್ಸ್ ಅವರು ಗುಜರಾತ್ ಪರ ಆಡುತ್ತಿದ್ದರು. ಆದರೆ, ಫೀಲ್ಡಿಂಗ್ ಮಾಡುವಾಗ ಉಂಟಾದ ತೊಡೆಸಂದು ಗಾಯದಿಂದ ಅವರು ಐಪಿಎಲ್​ನಿಂದಲೇ ಹೊರಕ್ಕೆ ಉಳಿಯಬೇಕಾಯಿತು.

Published On - 12:45 pm, Fri, 27 June 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ