Ind vs Aus: ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ; ತಂಡದ ಸ್ಫೋಟಕ ಆಟಗಾರ್ತಿ ಮೊದಲ ಪಂದ್ಯಕ್ಕೆ ಅಲಭ್ಯ!

| Updated By: ಪೃಥ್ವಿಶಂಕರ

Updated on: Sep 20, 2021 | 2:58 PM

Ind vs Aus: ಭಾರತ ತಂಡದ ಉಪನಾಯಕಿ ಹರ್ಮನ್‌ಪ್ರೀತ್ ಕೌರ್ ಪ್ರವಾಸದಲ್ಲಿರುವ ಅತ್ಯಂತ ಅನುಭವಿ ಆಟಗಾರ್ತಿಯರಲ್ಲಿ ಒಬ್ಬರು. ಇಂತಹ ಪರಿಸ್ಥಿತಿಯಲ್ಲಿ, ಅವರ ಉಪಸ್ಥಿತಿಯು ತಂಡಕ್ಕೆ ಸಮಸ್ಯೆಗಳನ್ನು ಸೃಷ್ಟಿಸಬಹುದು.

Ind vs Aus: ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ; ತಂಡದ ಸ್ಫೋಟಕ ಆಟಗಾರ್ತಿ ಮೊದಲ ಪಂದ್ಯಕ್ಕೆ ಅಲಭ್ಯ!
ಹರ್ಮನ್‌ಪ್ರೀತ್ ಕೌರ್
Follow us on

ಆಸ್ಟ್ರೇಲಿಯಾ ಪ್ರವಾಸ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ಸ್ಫೋಟಕ ಬ್ಯಾಟರ್ ಹರ್ಮನ್‌ಪ್ರೀತ್ ಕೌರ್ ಮಂಗಳವಾರ ನಡೆಯಲಿರುವ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ತಂಡದ ಕೋಚ್ ರಮೇಶ್ ಪವಾರ್ ಇದನ್ನು ದೃಢಪಡಿಸಿದರು. ಹರ್ಮನ್‌ಪ್ರೀತ್ ಹೆಬ್ಬೆರಳಿಗೆ ಗಾಯಗೊಂಡಿರುವುದರಿಂದ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಕಾರಣಕ್ಕಾಗಿ, ಅವರು ಮೊದಲ ಏಕದಿನ ಪಂದ್ಯವನ್ನು ಆಡುವುದಿಲ್ಲ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತವು ಮೂರು ಪಂದ್ಯಗಳ ಏಕದಿನ ಮತ್ತು ಟಿ 20 ಸರಣಿಯನ್ನು ಆಡಬೇಕಿದೆ. ಏಕದಿನ ಸರಣಿಯು ಈ ಮೊದಲು ಸೆಪ್ಟೆಂಬರ್ 19 ರಿಂದ ಆರಂಭವಾಗಬೇಕಿತ್ತು ಆದರೆ ನಂತರ ವೇಳಾಪಟ್ಟಿಯನ್ನು ಬದಲಾಯಿಸಲಾಯಿತು. ಈ ಸರಣಿಯು ಈಗ ಸೆಪ್ಟೆಂಬರ್ 21 ರಿಂದ ಆರಂಭವಾಗುತ್ತಿದೆ. ಈ ಪ್ರವಾಸದಲ್ಲಿ ಭಾರತವು ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಆಡಲಿದೆ. ಈ ಪಂದ್ಯವು ಐತಿಹಾಸಿಕವಾಗಲಿದೆ ಏಕೆಂದರೆ ಇದು ಡೇ-ನೈಟ್ ಟೆಸ್ಟ್ ಪಂದ್ಯವಾಗಿರುತ್ತದೆ. ಇದು ಭಾರತೀಯ ಮಹಿಳಾ ತಂಡದ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಗಿದೆ. ಈ ಪಂದ್ಯವು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 3 ರವರೆಗೆ ನಡೆಯಲಿದೆ.

ಹರ್ಮನ್‌ಪ್ರೀತ್ ಕೌರ್ ಹೆಬ್ಬೆರಳಿಗೆ ಗಾಯ
ಭಾರತ ತಂಡದ ಉಪನಾಯಕಿ ಹರ್ಮನ್‌ಪ್ರೀತ್ ಕೌರ್ ಪ್ರವಾಸದಲ್ಲಿರುವ ಅತ್ಯಂತ ಅನುಭವಿ ಆಟಗಾರ್ತಿಯರಲ್ಲಿ ಒಬ್ಬರು. ಇಂತಹ ಪರಿಸ್ಥಿತಿಯಲ್ಲಿ, ಅವರ ಉಪಸ್ಥಿತಿಯು ತಂಡಕ್ಕೆ ಸಮಸ್ಯೆಗಳನ್ನು ಸೃಷ್ಟಿಸಬಹುದು. ಅವರು ಸರಣಿಗೆ ಮುನ್ನ ಆಡಿದ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಲಿಲ್ಲ. ಕೆಲ ದಿನಗಳ ಹಿಂದೆ ಹೆಬ್ಬೆರಳಿಗೆ ಗಾಯವಾಗಿತ್ತು ಎಂದು ತಂಡದ ಕೋಚ್ ರಮೇಶ್ ಪವಾರ್ ಹೇಳಿದ್ದಾರೆ. ಅವರು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ ಮತ್ತು ಅದಕ್ಕಾಗಿಯೇ ಅವರು ಮೊದಲ ಪಂದ್ಯದಲ್ಲಿ ಭಾಗವಹಿಸುವುದಿಲ್ಲ. ಅವರು ಫಿಟ್ ಆಗಿದ್ದರೆ, ಮುಂದಿನ ಪಂದ್ಯಗಳಲ್ಲಿ ಅವರಿಗೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು. ಹರ್ಮನ್‌ಪ್ರೀತ್ ಹೊರತುಪಡಿಸಿ, ತಂಡದ ಎಲ್ಲಾ ಇತರ ಆಟಗಾರರು ಆಯ್ಕೆಗೆ ಲಭ್ಯವಿರುತ್ತಾರೆ.

ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿತು
ಭಾರತ ತಂಡವು ಅಭ್ಯಾಸ ಪಂದ್ಯದೊಂದಿಗೆ ಪ್ರವಾಸವನ್ನು ಆರಂಭಿಸಿತು, ಅದು ಉತ್ತಮವಾಗಿರಲಿಲ್ಲ. 50 ಓವರ್‌ಗಳ ಅಭ್ಯಾಸ ಪಂದ್ಯದಲ್ಲಿ, ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 36 ರನ್‌ಗಳಿಂದ ಸೋಲನುಭವಿಸಿತು. ಓಪನರ್ ಗಳಾದ ರಾಚೆಲ್ ಹೇನ್ಸ್ (65), ಮೆಗ್ ಲ್ಯಾನಿಂಗ್ (59) ಮತ್ತು ಬೆತ್ ಮೂನಿ (59) ಅರ್ಧಶತಕ ಗಳಿಸಿದ್ದರಿಂದ ಆಸ್ಟ್ರೇಲಿಯಾ ಇಯಾನ್ ಹೀಲಿ ಓವಲ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಒಂಬತ್ತು ವಿಕೆಟ್​ಗೆ 278 ರನ್​ಗಳ ಸವಾಲಿನ ಸ್ಕೋರ್ ದಾಖಲಿಸಿತು. ಇದಕ್ಕೆ ಉತ್ತರವಾಗಿ, ಭಾರತ ತಂಡವು 50 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 242 ರನ್ ಗಳಿಸಲು ಸಾಧ್ಯವಾಯಿತು. ಇದರಲ್ಲಿ ಪೂಜಾ ವಸ್ತ್ರಕರ್ 57 ರನ್ ಗಳ ಇನ್ನಿಂಗ್ಸ್ ಆಡಿದರು.

Published On - 2:52 pm, Mon, 20 September 21