MS Dhoni: ಕ್ಯಾಚ್ ಬಿಟ್ಟು ಸಹ ಆಟಗಾರನ ಮೇಲೆ ಕೋಪಗೊಂಡ ಮಹೇಂದ್ರ ಸಿಂಗ್ ಧೋನಿ

MS Dhoni Catch Drop: ಕ್ಯಾಚ್ ಡ್ರಾಪ್ ಹೊರತಾಗಿಯೂ ಮುಂಬೈ ಇಂಡಿಯನ್ಸ್​ ಫಲಿತಾಂಶದಲ್ಲಿ ಬದಲಾವಣೆ ಕಂಡು ಬಂದಿರಲಿಲ್ಲ. ಸಿಎಸ್​ಕೆ ನೀಡಿದ 156 ರನ್​ಗಳನ್ನು ಬೆನ್ನೆತ್ತಿದ ಮುಂಬೈ ಇಂಡಿಯನ್ಸ್​ ಅಂತಿಮವಾಗಿ 136 ರನ್​ಗಳಿಸಲಷ್ಟೇ ಶಕ್ತರಾದರು.

MS Dhoni: ಕ್ಯಾಚ್ ಬಿಟ್ಟು ಸಹ ಆಟಗಾರನ ಮೇಲೆ ಕೋಪಗೊಂಡ ಮಹೇಂದ್ರ ಸಿಂಗ್ ಧೋನಿ
Dhoni
Follow us
TV9 Web
| Updated By: ಝಾಹಿರ್ ಯೂಸುಫ್

Updated on:Sep 20, 2021 | 3:46 PM

ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಕೂಲ್ ಕ್ಯಾಪ್ಟನ್​ ಎಂದೇ ಫೇಮಸ್. ಧೋನಿ ಮೈದಾನದಲ್ಲಿ ಕೋಪಗೊಳ್ಳುವುದೇ ಅಪರೂಪ. ಅದರಲ್ಲೂ ಸ್ಟಾರ್ ಆಟಗಾರರ ವಿರುದ್ಧ ಕೋಪಗೊಳ್ಳಲ್ಲ ಎಂಬುದನ್ನು ಈ ಹಿಂದೊಮ್ಮೆ ಸಹ ಆಟಗಾರ ದೀಪಕ್ ಚಹರ್ ಬಹಿರಂಗಪಡಿಸಿದ್ದರು. ಆದರೆ ಐಪಿಎಲ್​ನ ದ್ವಿತಿಯಾರ್ಧದ ಮೊದಲ ಪಂದ್ಯದ ವೇಳೆ ಧೋನಿ ಕೋಪಗೊಂಡಿರುವುದು ಕಂಡು ಬಂತು. ಮುಂಬೈ ಇಂಡಿಯನ್ಸ್​ ವಿರುದ್ದ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್​ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ರುತುರಾಜ್ ಗಾಯಕ್ವಾಡ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಸಿಎಸ್​ಕೆ 6 ವಿಕೆಟ್ ನಷ್ಟಕ್ಕೆ 156 ರನ್​ ಪೇರಿಸಿತು.

ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್​ ಆರಂಭಿಕ ಆಘಾತಕ್ಕೆ ಒಳಗಾಯಿತು. ಇದಾಗ್ಯೂ ಕಂಬ್ಯಾಕ್ ಮಾಡಿದ್ದ ಮುಂಬೈ ಪಂದ್ಯ ಗೆಲ್ಲುವ ಸೂಚನೆ ನೀಡಿತ್ತು. ಅದರಲ್ಲೂ ಅಂತಿಮ ಓವರ್​ಗಳು ಸಿಎಸ್​ಕೆ ಪಾಲಿಗೆ ನಿರ್ಣಾಯಕವಾಗಿತ್ತು. ಇತ್ತ ಮುಂಬೈ ಇಂಡಿಯನ್ಸ್‌ ಇನ್ನಿಂಗ್ಸ್‌ನ 18ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮುಂಬೈ ಬ್ಯಾಟ್ಸ್‌ಮನ್ ಸೌರವ್ ತಿವಾರಿ ಸ್ಕೂಪ್ ಶಾಟ್ ಆಡಲು ಪ್ರಯತ್ನಿಸಿದರು. ಚೆಂಡು ಆಕಾಶದತ್ತ ಚಿಮ್ಮಿತ್ತು.

ಅತ್ತ ಶಾರ್ಟ್​ ಫೈನ್​ಲೆಗ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಡ್ವೇನ್ ಬ್ರಾವೊ ಕ್ಯಾಚ್ ಹಿಡಿಯಲು ಓಡಿ ಬಂದರು. ಇತ್ತ ಕಡೆಯಿಂದ ವಿಕೆಟ್ ಕೀಪರ್ ಧೋನಿ ಕ್ಯಾಚ್ ನನ್ನದೆಂದು ಕೈಯಲ್ಲಿ ಸೂಚನೆ ನೀಡಿದ್ದರು. ಹೀಗಾಗಿ ಬ್ರಾವೊ ನಿಧಾನಗೊಂಡರು. ಬ್ರಾವೊ ಆಗಮನದಿಂದ ಧೋನಿ ಗೊಂದಲಕ್ಕೊಳಗಾಗಿದ್ದರು. ಇದಾಗ್ಯೂ ಚೆಂಡನ್ನು ಹಿಡಿಯುವಲ್ಲಿ ಧೋನಿ ವಿಫಲರಾದರು.

ಇತ್ತ ಕ್ಯಾಚ್ ಡ್ರಾಪ್ ಆಗುತ್ತಿದ್ದಂತೆ ಮಹೇಂದ್ರ ಸಿಂಗ್ ಧೋನಿ ಕೋಪಗೊಂಡರು. ಇದೀಗ ಧೋನಿ ಬ್ರಾವೋ ವಿರುದ್ದ ರೇಗುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕ್ಯಾಚ್ ಡ್ರಾಪ್ ಹೊರತಾಗಿಯೂ ಮುಂಬೈ ಇಂಡಿಯನ್ಸ್​ ಫಲಿತಾಂಶದಲ್ಲಿ ಬದಲಾವಣೆ ಕಂಡು ಬಂದಿರಲಿಲ್ಲ. ಸಿಎಸ್​ಕೆ ನೀಡಿದ 156 ರನ್​ಗಳನ್ನು ಬೆನ್ನೆತ್ತಿದ ಮುಂಬೈ ಇಂಡಿಯನ್ಸ್​ ಅಂತಿಮವಾಗಿ 136 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್​ 20 ರನ್​ಗಳ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇದನ್ನೂ ಓದಿ: Taliban bans IPL 2021: ಐಪಿಎಲ್ ಬ್ಯಾನ್ ಮಾಡಿದ ತಾಲಿಬಾನಿಗಳು: ಕಾರಣ ಕೇಳಿದ್ರೆ ದಂಗಾಗ್ತೀರಾ..!

ಇದನ್ನೂ ಓದಿ: IPL 2021: 5 ತಂಡಗಳಲ್ಲಿ 10 ಹೊಸ ವಿದೇಶಿ ಆಟಗಾರರು

ಇದನ್ನೂ ಓದಿ: IPL 2021: RCB ತಂಡದ ಗೇಮ್ ಚೇಂಜರ್ ಆಗಲಿದ್ದಾರೆ ಟಿಮ್ ಡೇವಿಡ್

ಇದನ್ನೂ ಓದಿ: ಗೂಗಲ್ ಬಿಗ್ ಆಫರ್: ಸ್ಮಾರ್ಟ್​ಫೋನ್ ಜೊತೆ ಕೇವಲ 1 ರೂ.ಗೆ ಸ್ಮಾರ್ಟ್​ ಸ್ಪೀಕರ್

(MS Dhoni Gets Angry, Loses Cool At Dwayne Bravo After Catch Drop)

Published On - 3:36 pm, Mon, 20 September 21

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!