IND vs AUS: ಸ್ಲಿಪ್‌ನಲ್ಲಿ 6 ಕ್ಯಾಚ್ ಡ್ರಾಪ್; ಕ್ಯಾಚ್ ಕೈಚೆಲ್ಲುವುದೇ ಕೊಹ್ಲಿಯ ಕಾಯಕ!

| Updated By: ಪೃಥ್ವಿಶಂಕರ

Updated on: Feb 12, 2023 | 4:26 PM

Virat Kohli: ವಾಸ್ತವವಾಗಿ ವಿರಾಟ್ ಕೊಹ್ಲಿ ಕ್ಯಾಚ್ ಕೈಬಿಟ್ಟಿರುವುದು ಇದೇ ಮೊದಲಲ್ಲ. 2022 ರಿಂದ ಸ್ಲಿಪ್‌ನಲ್ಲಿ ಕೊಹ್ಲಿ ಒಟ್ಟು 6 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ.

IND vs AUS: ಸ್ಲಿಪ್‌ನಲ್ಲಿ 6 ಕ್ಯಾಚ್ ಡ್ರಾಪ್; ಕ್ಯಾಚ್ ಕೈಚೆಲ್ಲುವುದೇ ಕೊಹ್ಲಿಯ ಕಾಯಕ!
ರೋಹಿತ್- ಕೊಹ್ಲಿ
Follow us on

ಕ್ರಿಕೆಟ್​ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಒಂದೇ ಒಂದು ಕ್ಯಾಚ್ ಇಡೀ ಪಂದ್ಯದ ದಿಕ್ಕನೇ ಬದಲಿಸುವ ಸಾಮಥ್ರ್ಯ ಹೊಂದಿರುತ್ತದೆ. ಹಾಗೆಯೇ ಆ ಕ್ಯಾಚ್ ಹಿಡಿಯುವ ಫಿಲ್ಡರ್ ಕೂಡ ತಂಡದ ಹೀರೋ ಎನಿಸಿಕೊಳ್ಳುತ್ತಾನೆ. ಆದರೆ ಒಂದು ವೇಳೆ ಅದೇ ಫಿಲ್ಡರ್ ಬಿಟ್ಟ ಕ್ಯಾಚ್​ನಿಂದ ಪಂದ್ಯದ ಚಿತ್ರಣವೇ ಬದಲಾಗುವಂತಹ ಅದೇಷ್ಟೋ ಪಂದ್ಯಗಳು ಕ್ರಿಕೆಟ್​ನಲ್ಲಿ ನಡೆದುಹೋಗಿವೆ. ಆದರೆ ಮೊದಲ ಟೆಸ್ಟ್ ಪಂದ್ಯದಲ್ಲಿ ಕೈಬಿಟ್ಟ ಕ್ಯಾಚ್​ನಿಂದ ಯಾವುದೇ ವ್ಯತ್ಯಾಸವಾಗದಿದ್ದರೂ, ವಿಶ್ವದ ಬೆಸ್ಟ್ ಫಿಲ್ಡರ್​ಗಳಲ್ಲಿ ಒಬ್ಬರೆನಿಸಿಕೊಂಡಿರುವ ಕೊಹ್ಲಿಗೆ ಮಾತ್ರ ಇದು ನುಂಗಲಾರದ ತುತ್ತಾಗಿದೆ. ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ (India vs Australia) ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಬರೋಬ್ಬರಿ 3 ಕ್ಯಾಚ್​ಗಳನ್ನು ಕೈಬಿಟ್ಟು ಟೀಕಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಸೀಸ್​ನ ಮೊದಲ ಇನ್ನಿಂಗ್ಸ್ನಲ್ಲಿ 2 ಕ್ಯಾಚ್ ಬಿಟ್ಟು ದುಬಾರಿಯಾಗಿದ್ದ ಕೊಹ್ಲಿ, ಇದೀಗ 2ನೇ ಇನ್ನಿಂಗ್ಸ್​ನಲ್ಲೂ ಸುಲಭದ ಕ್ಯಾಚ್ ಬಿಟ್ಟಿದ್ದಾರೆ.

ವಾಸ್ತವವಾಗಿ ವಿರಾಟ್ ಕೊಹ್ಲಿ ಕ್ಯಾಚ್ ಕೈಬಿಟ್ಟಿರುವುದು ಇದೇ ಮೊದಲಲ್ಲ. 2022 ರಿಂದ ಸ್ಲಿಪ್‌ನಲ್ಲಿ ಕೊಹ್ಲಿ ಒಟ್ಟು 6 ಕ್ಯಾಚ್‌ಗಳನ್ನು ಕೈಬಿಟ್ಟಿದ್ದಾರೆ. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ ಸ್ಲಿಪ್‌ನಲ್ಲಿ 14 ಕ್ಯಾಚ್‌ಗಳನ್ನು ಹಿಡಿಯುವ ಯತ್ನ ಮಾಡಿದ್ದು, ಇದರಲ್ಲಿ 8 ಕ್ಯಾಚ್‌ಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ  6 ಕ್ಯಾಚ್​ಗಳನ್ನು ಡ್ರಾಪ್ ಮಾಡಿದ್ದಾರೆ.

IND vs AUS: ನಾಗ್ಪುರ ಟೆಸ್ಟ್​ನಲ್ಲಿ ಹೀನಾಯ ಸೋಲು; ಆಸೀಸ್ ತಂಡಕ್ಕೆ ನ್ಯೂ ಪ್ಲೇಯರ್ ಎಂಟ್ರಿ..!

ಕೆಲಸ ಮಾಡದ ವಿರಾಟ್ ಕೊಹ್ಲಿ ಫಿಟ್ನೆಸ್

ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಮೇಲೆ ಸಾಕಷ್ಟು ಕೆಲಸ ಮಾಡುತ್ತಾರೆ. ಮೈದಾನದಲ್ಲಿ ಚುರುಕಾಗಿ ಇರಲು, ಅವರು ತಮ್ಮ ಆಹಾರ ಮತ್ತು ತರಬೇತಿಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಆದರೆ ಕ್ಯಾಚಿಂಗ್ ವಿಷಯದಲ್ಲಿ ಅವರ ಫಿಟ್ನೆಸ್ ಕೆಲಸ ಮಾಡುತ್ತಿಲ್ಲ. ನಾಗ್ಪುರ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಡೇವಿಡ್ ವಾರ್ನರ್ ಅವರ ಕ್ಯಾಚ್ ಅನ್ನು ವಿರಾಟ್ ಕೊಹ್ಲಿ ಕೈಬಿಟ್ಟರು.

ವಿರಾಟ್ ಬ್ಯಾಟ್ ಕೂಡ ಕೆಲಸ ಮಾಡುತ್ತಿಲ್ಲ

ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ 20 ಮಾದರಿಯಲ್ಲಿ ರನ್ ಗಳಿಸಲು ಪ್ರಾರಂಭಿಸಿದ್ದಾರೆ. ಆದರೆ ಟೆಸ್ಟ್ ರೂಪದಲ್ಲಿ ಅವರ ಬ್ಯಾಟ್‌ನಿಂದ ರನ್ ಹೊರಬರುತ್ತಿಲ್ಲ. ನಾಗ್ಪುರ ಟೆಸ್ಟ್‌ನಲ್ಲಿ ವಿರಾಟ್ ಕೇವಲ 12 ರನ್ ಗಳಿಸಿ ಔಟಾದರು. 2019 ರಿಂದ ಈ ಮಾದರಿಯಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿಲ್ಲ. ವಿರಾಟ್ ಕೊಹ್ಲಿ ಆದಷ್ಟು ಬೇಗ ಫಾರ್ಮ್​ಗೆ ಮರಳುವುದುರೊಂದಿಗೆ, ಫೀಲ್ಡಿಂಗ್‌ನಲ್ಲೂ ಪ್ರಮುಖ ಕೊಡುಗೆ ನೀಡಬೇಕು ಎಂಬುದು ತಂಡದ ನಿರೀಕ್ಷೆಯಾಗಿದೆ. ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಲು ಟೀಂ ಇಂಡಿಯಾಗೆ ಕೊಹ್ಲಿಯ ಫಾರ್ಮ್​ ತೀರಾ ಅಗತ್ಯವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Sun, 12 February 23