IND vs BAN: ಕಿವೀಸ್ ಪ್ರವಾಸದಂತೆ ಬಾಂಗ್ಲಾ ಪ್ರವಾಸದಲ್ಲೂ ಮಳೆ ಕಾಟ ಇರುತ್ತಾ? ಇಲ್ಲಿದೆ ಹವಾಮಾನ ವರದಿ

| Updated By: ಪೃಥ್ವಿಶಂಕರ

Updated on: Dec 03, 2022 | 6:38 PM

IND vs BAN, Weather Update: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯ ಭಾನುವಾರ ಮೀರ್‌ಪುರದಲ್ಲಿ ನಡೆಯಲಿದೆ. ಹೀಗಾಗಿ ಈ ಸರಣಿಯಗೂ ಮಳೆ ಕಾಟ ಕೊಡಲಿದೆಯಾ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಆದರೆ ಹಿಂದಿನ ಸರಣಿಯಂತೆ ಈ ಸರಣಿ ಮಳೆ ಕಾಟ ಇಲ್ಲದೆ ಆರಂಭವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

IND vs BAN: ಕಿವೀಸ್ ಪ್ರವಾಸದಂತೆ ಬಾಂಗ್ಲಾ ಪ್ರವಾಸದಲ್ಲೂ ಮಳೆ ಕಾಟ ಇರುತ್ತಾ? ಇಲ್ಲಿದೆ ಹವಾಮಾನ ವರದಿ
IND vs BAN
Follow us on

ಈ ಹಿಂದೆ ನಡೆದ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಟಿ20 ಸರಣಿ ಹಾಗೂ ಏಕದಿನ ಸರಣಿಗೆ ಮಳೆ ವಿಲನ್ ಆಗಿತ್ತು. ಮಳೆಯಿಂದಾಗಿ (Rain) ಟಿ20 ಸರಣಿ, ನಂತರ ಏಕದಿನ ಸರಣಿಯನ್ನು ಸೇರಿದಂತೆ ಒಟ್ಟು 4 ಪಂದ್ಯಗಳು ರದ್ದಾಗಿದ್ದವು. ಹೀಗಾಗಿ ಟೀಂ ಇಂಡಿಯಾ (Team India) ಟಿ20 ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡರೆ, ಏಕದಿನ ಸರಣಿಯನ್ನು 0-1 ಅಂತರದಲ್ಲಿ ಕಳೆದುಕೊಂಡಿತ್ತು. ಈಗ ಅದೇ ಏಕದಿನ ಸರಣಿಗಾಗಿ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಮಾಡಿದೆ. ಭಾರತ ಮತ್ತು ಬಾಂಗ್ಲಾದೇಶ (India vs Bangladesh) ನಡುವಿನ ಮೊದಲ ಏಕದಿನ ಪಂದ್ಯ ಭಾನುವಾರ ಮೀರ್‌ಪುರದಲ್ಲಿ ನಡೆಯಲಿದೆ. ಹೀಗಾಗಿ ಈ ಸರಣಿಯಗೂ ಮಳೆ ಕಾಟ ಕೊಡಲಿದೆಯಾ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಆದರೆ ಹಿಂದಿನ ಸರಣಿಯಂತೆ ಈ ಸರಣಿ ಮಳೆ ಕಾಟ ಇಲ್ಲದೆ ಆರಂಭವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ವಾಸ್ತವವಾಗಿ ಭಾರತ ಹಾಗೂ ನ್ಯೂಜಿಲೆಂಡ್​ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಮಳೆ ಇಲ್ಲದೆ ಪೂರ್ಣಗೊಂಡಿತ್ತು. ಆದರೆ ಆ ಬಳಿಕ ಮಳೆಯಿಂದಾಗಿ ಅಭಿಮಾನಿಗಳು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸಂಪೂರ್ಣ ಟಿ20 ಮತ್ತು ಏಕದಿನ ಸರಣಿಯನ್ನು ಸರಿಯಾಗಿ ವೀಕ್ಷಿಸಲು ಸಾಧ್ಯವಾಗಲಿಲ್ಲ. ಹೀಗಿರುವಾಗ ಮೀರ್‌ಪುರದ ಹವಾಮಾನದ ಬಗ್ಗೆಯೂ ಅಭಿಮಾನಿಗಳಲ್ಲಿ ಭೀತಿ ಎದುರಾಗಿದೆ. ಆದರೆ ಇಲ್ಲಿನ ಹವಾಮಾನ ವರದಿಯ ಪ್ರಕಾರ ಪಂದ್ಯದ ದಿನದಂದು ಮೀರ್‌ಪುರದಲ್ಲಿ ಬಿಸಿಲು ಇರಲಿದ್ದು ಅಭಿಮಾನಿಗಳು ಇಡೀ ಪಂದ್ಯವನ್ನು ನೋಡುವುದಕ್ಕೆ ಯಾವುದೇ ಅಡೆತಡೆ ಇಲ್ಲ ಎಂದು ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: IND Vs BAN 1st ODI Match Live Streaming: ಭಾರತ- ಬಾಂಗ್ಲಾ ಮುಖಾಮುಖಿ; ಪಂದ್ಯ ಆರಂಭ ಎಷ್ಟು ಗಂಟೆಗೆ?

ರೋಹಿತ್, ಕೊಹ್ಲಿ ರಿಟರ್ನ್

ಬಾಂಗ್ಲಾದೇಶ ವಿರುದ್ಧದ ಸರಣಿಗೆ ಟಿ20 ವಿಶ್ವಕಪ್ ನಂತರ ನ್ಯೂಜಿಲೆಂಡ್ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅವರಂತಹ ಸ್ಟಾರ್ ಮತ್ತು ಹಿರಿಯ ಆಟಗಾರರು ತಂಡಕ್ಕೆ ಮರಳಿದ್ದಾರೆ. ಖಾಯಂ ನಾಯಕ ರೋಹಿತ್ ಅಲಭ್ಯತೆಯಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ವಹಿಸಿದ್ದರೆ, ಶಿಖರ್ ಧವನ್ ಏಕದಿನ ಸರಣಿಗೆ ನಾಯಕರಾಗಿದ್ದರು.

ಸರಣಿಗೂ ಮುನ್ನವೇ ಭಾರತಕ್ಕೆ ಆಘಾತ

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಮೂಲಕ ತಂಡಕ್ಕೆ ವಾಪಸ್ಸಾಗುವುದರೊಂದಿಗೆ ತಂಡದ ನಾಯಕತ್ವವನ್ನು ರೋಹಿತ್ ವಹಿಸಿಕೊಳ್ಳಲಿದ್ದಾರೆ. ಈ ಸರಣಿಗೂ ಮುನ್ನ ಮೊಹಮ್ಮದ್ ಶಮಿ ರೂಪದಲ್ಲಿ ಭಾರತಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ಸರಣಿಯ ಆರಂಭಕ್ಕೂ ಮೊದಲು ಶಮಿ ಭುಜದ ಗಾಯಕ್ಕೆ ಒಳಗಾಗಿದ್ದಾರೆ. ಈ ಕಾರಣದಿಂದಾಗಿ ಅವರು ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದು ಅವರ ಸ್ಥಾನದಲ್ಲಿ ವೇಗದ ಬೌಲರ್ ಉಮ್ರಾನ್ ಮಲಿಕ್ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Sat, 3 December 22